ಸಾಧು ಸಂತರಿಂದ ಕಾವೇರಿ ನದಿಗೆ ಆರತಿ,ಮಳೆಗಾಗಿ ಪ್ರಾರ್ಥನೆ

ಸಂಜೆವಾಣಿ ವಾರ್ತೆ
ಶ್ರೀರಂಗಪಟ್ಟಣ:ಮಾ.24:- ಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂ ನಿಮಿಷಾಂಬ ದೇವಾಲಯದ ಬಳಿ ಸಾಧು ಸಂತರಿಂದ ಕಾವೇರಿ ನದಿಗೆ ಆರತಿ ಬೆಳಗಿ,ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗಂಜಾಂನ ಶಂಕರ ಮರಮಾನಂದ -ಟ್ರಸ್ಟ್ ನ ಆದಿ ಶಂಕರ ಮಠದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ ನೇತೃತ್ವದಲ್ಲಿ ಯೋಜಿಸಿದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದರು.
ಕಾರ್ಯಕ್ರಮ ಆಯೋಜಿಸಿದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ ಮಾತನಾಡಿ, ಶ್ರೀರಂಗಪಟ್ಟಣದ ಕಾವೇರಿ ಮಾತೆ ಗೆ ದಕ್ಷಿಣದ ಗಂಗೆ ಎಂದು ಹೆಸರಾಗಿರುವ ಈ ನದಿಗೆ ಭರತ ಖಂಡದಲ್ಲಿ ಪವಿತ್ರ ಸ್ಥಾನ ಇದೆ.ಪುರಾಣಗಳಲ್ಲಿ ಕೂಡ ಈ ನದಿಯ ಬಗ್ಗೆ ಪ್ರಸ್ತಾಪವಿದೆ.ಈಚಿನ ದಿನಗಳಲ್ಲಿ ಈ ನದಿ ಕಲುಷಿತವಾಗುತ್ತಿ
ರುವುದು ಆತಂಕ ಮೂಡಿಸಿದೆ.ನದಿಗೆ ಮಲಿನ ನೀರು ಸೇರುವುದನ್ನು ತಡೆಯಬೇಕು ಎಂದರು.
ನಂತರ ವೇದಬ್ರಹ್ಮ ಡಾ.ಭಾನು
ಪ್ರಕಾಶ್ ಶರ್ಮಾ ಮಾತನಾಡಿ,ಈ ಬಾರಿ ರಾಜ್ಯದಲ್ಲಿ ಮಳೆಯಾಗದೆ ನೀರಿಗಾಗಿ ಬರ ಬಂದಿದೆ ರೈತಾಪಿ ಜನರು ಸಹ ನೀರಿಲ್ಲದೆ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ ಮನುಷ್ಯ, ಪ್ರಾಣಿ, ಪಕ್ಷಿಗಳಿಗೆ ನೀರಿನ ಪ್ರಮುಖ ಮೂಲವಾದ ಕಾವೇರಿ ನದಿ ತುಂಬಲು ದೇವೇಂದ್ರ ಮಳೆಯನ್ನು ಕರುಣಿಸಲಿ ಕಾವೇರಿ ಮಾತ ತುಂಬಿ ಹರಿಯಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
ಮೈಸೂರಿನ ತ್ರಿಪುರ ಭೂರವಿ ಮಠದ -ಶ್ರೀಕೃಷ್ಣ ಮೋಹನಾನಂದ ಸ್ವಾಮೀಜಿ,ಕನಕಪುರದ ಕಲ್ಲಹಳ್ಳಿಯ ಶ್ರೀನಿವಾಸ -ದೇವಾಲಯದ ಪ್ರಧಾನ ಅರ್ಚಕ ಯತಿರಾಜ ರಾಮಾನುಜನ್,ಮೈಸೂರಿನ ಸೋಮವಂಶ ಕ್ಷತ್ರಿಯ ಆರ್ಯ ಸಮಾಜದ ಅಧ್ಯಕ್ಷೆ ಸವಿತಾ, ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ -ರಂಗನಾಥ್, ಚಂದ್ರಶೇಖರ್ ಅವರು ಮಂತ್ರಘೋಷಗಳನ್ನು ಪಠಿಸಿ ಕಾವೇರಿ ನದಿಗೆ ಆರತಿ ಬೆಳಗಿದರು.
ನೂರಾರು ಭಕ್ತರು ಆಗಮಿಸಿದ್ದು, ಮಹಿಳಾ ಭಕ್ತರಿಂದ ತುಪ್ಪದ ದೀಪ ಹಚ್ಚಿ ಕಾವೇರಿ ನದಿಯಲ್ಲಿ ತೇಲಿ ಬಿಟ್ಟರು