ಸಾಧನ ಸಲಕರಣೆ ವಿತರಣೆ

(ಸಂಜೆವಾಣಿ ವಾರ್ತೆ)
ನವಲಗುಂದ,ಫೆ14 : ವಿಶೇಷ ಅಗತ್ಯತೆಯುಳ್ಳ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅಂತಹ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಸರಕಾರವು ಒದಗಿಸುತ್ತದೆ. ಪಾಲಕರು ಈ ಸೌಲಭ್ಯಗಳನ್ನು ತಮ್ಮ ಮಕ್ಕಳಿಗೆ ಒದಗಿಸಿ ಅವರನ್ನು ಸುಶೀಕ್ಷಿತರನ್ನಾಗಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಹೇಳಿದರು.

ಅವರು ಪಟ್ಟಣದ ಸರಕಾರಿ ಮಾದರಿ ಕೇಂದ್ರ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಜರುಗಿದ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ಷೇತ್ರ ಸಮಾನ್ವಯಾಧಿಕಾರಿ ಶ್ರೀಮತಿ ರೇಣುಕಾ ಮುರನಾಳ ಹಾಗೂ ವಿಕಲ ಚೇತನ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ನೀಲಯ್ಯ ತಾಳಿಕೋಟಿಮಠ ಮಾತನಾಡಿ, ಪಾಲಕರು ಇಂತಹ ಸಾಧನ ಸಲಕರಣೆಗಳನ್ನು ಉಪಯೋಗಿಸಿಕೊಂಡು ಶಿಕ್ಷಣದಲ್ಲಿ ತಮ್ಮ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ವೇಗವಾಗಿ ಕಲಿಕಾಭಿವೃದ್ಧಿ ಹೊಂದುವಲ್ಲಿ ಸಹಕರಿಸುವದರೊಂದಿಗೆ ಮಕ್ಕಳು ಭವಿಷ್ಯದಲ್ಲಿ ಉಜ್ವಲ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.ಎಂದರು.

ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯ ಪ್ರಕಾಶ ಶಿಗ್ಲಿ, ಸುಲೇಮಾನ ನಾಶಿಪುಡಿ, ಪ್ರಧಾನ ಗುರುಗಳಾದ ಶಿವಾನಂದ ಬೆಂಚಿಕೇರಿ, ರೇಣುಕಾ ಹಾಲಿಗೇರಿ, ಶಿಕ್ಷಕರಾದ ಡಾ.ಸಿದ್ಧಲಿಂಗೇಶ ಹಂಡಿಗಿ, ಎಂ. ಎಚ್. ಚಿಕನಾಳ ಆಗಮಿಸಿದ್ದರು.

ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಜರುಗಿತು .ಪಿ ಬಿ. ಬೆಟಸೂರ ಸ್ವಾಗತಿಸಿದರು. ಸವಿತಾ ಕುಂಬಾರ ಕಾರ್ಯಕ್ರಮ ನಿರ್ವಹಿಸಿದರು. ಎಸ್. ಡಿ. ರಾಯಗೋಣ್ಣವರ ವಂದಿಸಿದರು.