ಸಾಧನೆ ಸಮಾಜಕ್ಕೆ ಮಾದರಿಯಾಗಬೇಕು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.8 : ನಿಮ್ಮ ಓದುವ ಅಭ್ಯಾಸ ಸಮಾಜಕ್ಕೆ ಸಂದೇಶಗಳನ್ನು ನೀಡುವಂತ ಕಲಿಕೆಯನ್ನು ಹೊಂದಿರಬೇಕು, ನಿಮ್ಮ ಸಾಧನೆ ಸಮಾಜಕ್ಕೆ ಮಾದರಿಯಾಗಬೇಕು ಎಂದು ಬಿ.ಇ.ಒ ಎಚ್.ಗುರಪ್ಪ ಹೇಳಿದರು.
ನಗರದ ವಿಜಯಮೇರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ 2023-24ನೇ ಸಾಲಿನಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ನಿರ್ಧಿಷ್ಟವಾದ ಜ್ಞಾನವನ್ನು ಗಳಿಸುವ ಗುರಿಯನ್ನು ಹೊಂದುವ ಮನೋಭಾವ ಬೆಳೆಸಿಕೊಳ್ಳಬೇಕು, ಉತ್ತಮ ನಾಗರಿಕರಾಗಿ ಉನ್ನತ ಹುದ್ದೆಯನ್ನು ಪಡೆದು ಯಶಸ್ವಿಯಾಗ ಬೇಕೆಂದು ತಿಳಿಸಿದರು.
2023-24ನೇ ಸಾಲಿನ ಪ್ರಥಮ ಫಲಿತಾಂಶದಲ್ಲಿ ಕೆ.ಎಂ.ನಂದೀಶ ಅವರಿಗೆ 625ಕ್ಕೆ 604 ಅಂಕಗಳನ್ನು ಲಭಿಸಿದ್ದವು, ನಂತರ ಮರು ಮೌಲ್ಯ ಮಾಪನ ಮಾಡಿಸಿದಾಗ 625ಕ್ಕೆ 619 ಅಂಕಗಳು ಪಡೆದು ತಾಲ್ಲೂಕಿಗೆ ಪ್ರಥಮ ಮತ್ತು ಜಿಲ್ಲೆಗೆ ದ್ವಿತಿಯ ಸ್ಥಾನ ಹಾಗೂ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾನೆ ಎಂದು ಮಾಹಿತಿ ನೀಡಿದರು.
625ಕ್ಕೆ 619 ಅಂಕಗಳು ಪಡೆದ ಕೆ.ಎಂ.ನಂದೀಶ ಅವರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ವತಿಯಿಂದ ಸನ್ಮಾನಿಸಿ ನಗುದು ಪ್ರೋತ್ಸಹ ಧನ ನೀಡಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿಸ್ಟರ್ ಲೂರ್ದ ಮೇರಿ, ಶಾಲಾ ಮುಖ್ಯ ಗುರು ಸಿಸ್ಟರ್ ಸಂತೋಷ ಮೇರಿ ಹಾಗೂ ಬಿ.ಆರ್.ಸಿ ತಮ್ಮನಗೌಡ ಪಾಟೀಲ್, ಸಿಆರ್.ಪಿ.ಮಾರುತಿ, ದೈಹಿಕ ಶಿಕ್ಷಕ ಉಪೇಂದ್ರ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿ ನಂದೀಶನ ಪಾಲಕರು ಇದ್ದರು.