ಸಾಧನೆಯ ಸಹ್ಯಾದ್ರಿ ರಂಭಾಪುರಿ ಜಗದ್ಗುರುಗಳು


ಹುಬ್ಬಳ್ಳಿ ಜ.8: ತಮ್ಮ 29 ವರ್ಷಗಳ ಅಧಿಕಾರಾವಧಿಯಲ್ಲಿ ನೂರು ವರ್ಷಗಳ ಸಾಧನೆ ಮಾಡಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸಾಧನೆಯ ಸಹ್ಯಾದ್ರಿಯಾಗಿದ್ದಾರೆ ಎಂದು ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕøತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಹೇಳಿದರು.
ವಿದ್ಯಾನಗರದ ಶ್ರೀ ರಂಭಾಪುರಿ ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ರಂಭಾಪುರಿ ಜಗದ್ಗುರುಗಳವರ 65ನೇ ಜನ್ಮ ದಿನಾಚರಣೆಯ ನಿಮಿತ್ತ ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕøತಿಕ ಸೇವಾ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು
ತಮ್ಮ 65ನೇ ವಯಸ್ಸಿನಲ್ಲಿಯೂ ಶ್ರೀ ರಂಭಾಪುರಿ ಜಗದ್ಗುರುಗಳು ಪಾದರಸದಂತೆ ಸಂಚರಿಸುತ್ತ ಜನಜಾಗೃತಿ ಧರ್ಮ ಜಾಗೃತಿ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಶ್ರೀ ಜಗದ್ಗುರುಗಳು ಶತಾಯುಷಿಗಳಾಗಿ ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದರು.
ಸಮಾರಂಭದಲ್ಲಿ ಸಾಂಸ್ಕøತಿಕ ಸೇವಾ ಸಂಘದ ಸದಸ್ಯರಾದ ಬಿ.ಎಸ್.ಪಾಟೀಲ, ಆರ್.ಎಂ.ಹಿರೇಮಠ, ಎಸ್.ಸಿ.ಕಮ್ಮಾರ, ಸಿ.ಆರ್.ಉಕ್ಕಲಿ, ಗದಿಗೆಯ್ಯ ಹಿರೇಮಠ, ಸೊಪ್ಪಿನಮಠ, ಪಂಚಲಿಂಗಪ್ಪ ಕವಲೂರ, ಮಹಾಲಿಂಗಯ್ಯ ಹಂಚಿನಮಠ, ಬಸವರಾಜ ಸುಳ್ಳದ ಇದ್ದರು.
ಉಚಿತ ಯೋಗ ತರಬೇತಿ ಶಿಬಿರ:
ಶ್ರೀ ರಂಭಾಪುರಿ ಜಗದ್ಗುರುಗಳವರ ಜನ್ಮ ದಿನಾಚರಣೆ ನಿಮಿತ್ತ ಜನೆವರಿ 11 ರಿಂದ 24ರ ವರೆಗೆ ಉಚಿತ ಯೋಗಾಸನ ತರಬೇತಿ ಶಿಬಿರವನ್ನು ಶ್ರೀ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಯೋಜಿಸಲಾಗಿದ್ದು ಅಂತರ್ ರಾಷ್ಟ್ರೀಯ ಯೋಗ ತೀರ್ಪುಗಾರ ಪಿ.ಜೆ.ಕವಲೂರ ಇದನ್ನು ನಡೆಸಿಕೊಡಲಿದ್ದಾರೆ. ಆಸಕ್ತರು ಇದರ ಲಾಭ ಪಡೆಯಬೇಕೆಂದು ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕøತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ತಿಳಿಸಿದ್ದಾರೆ.