ಸಾಧನೆಗೆ ವಯಸ್ಸಿನ ಮಿತಿ ಇಲ್ಲ

ಚಿತ್ರದುರ್ಗ, ಮಾ. 12 – ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ ಭಾರತೀಯ ದಂತ ವೈದ್ಯಕೀಯ ಪರಿಷತ್ತು  ಸಹಯೋಗದಲ್ಲಿ ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಮುಖ್ಯಅತಿಥಿ ಅಕ್ಕಮಹಾದೇವಿ ಮಹಿಳಾ ಸಮಾಜದ ಅಧಕ್ಷೆ ಶ್ರೀಮತಿ ಸುಶೀಲ ಸಾಂಬಶಿವಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಮಹಿಳೆಯರು ಹೆಚ್ಚು ಸ್ವಾಭಿಮಾನಿಗಳಾಗಬೇಕು ಮತ್ತು ಸಾಧನೆ ಮಾಡಲು ಇಚ್ಚಾಶಕ್ತಿ ಇರಬೇಕು. ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಮದುವೆಯು ಸಾಧನೆಗೆ ಅಡ್ಡಿಯಾಗಬಾರದು. ನಾನು ಸಹ ಮದುವೆಯಾಗಿ 3 ಮಕ್ಕಳಾದ ನಂತರ ಪತಿಯ ಸಹಕಾರದಿಂದ ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪಡೆದೆ. ಹೆಣ್ಣುಮಕ್ಕಳು ಹೆಚ್ಚು ಪ್ರವಾಸ ಮಾಡಬೇಕು ಮತ್ತು ಅಲ್ಲಿಯ ಕ್ಷೇತ್ರದ ಮಹಿಮೆ, ಆಚಾರ ವಿಚಾರ, ಆಹಾರ ಪದ್ದತಿ, ಸಂಸ್ಕೃತಿಯ ಬಗ್ಗೆ ನಾವು ಬರೆದಿಟ್ಟರೆ ಅವು ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.ಮತ್ತೋರ್ವ ಅತಿಥಿ ಶ್ರೀಮತಿ ಶೈಲಾಜಯಕುಮಾರ್ ಮಾತನಾಡಿ, ಪುರುಷರು ಹೆಣ್ಣನ್ನು ಗೌರವದಿಂದ ಕಾಣಬೇಕು. ಕುವೆಂಪುರವರು ಅವರ ಪತ್ನಿಯನ್ನು ಹೆಚ್ಚು ಗೌರವದಿಂದ ಕಾಣುತ್ತಿದ್ದರು. ಅವರ ಪತ್ನಿಯ ಮರಣಾನಂತರ ಅವರ ಬರವಣಿಗೆ ಕುಂಟಿತಗೊAಡಿತು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೂ ಮಹಿಳೆಗೆ ಇನ್ನೂ ಸಮಾನತೆ ಸಿಕ್ಕಿಲ್ಲ. ರಾಜಕೀಯದಲ್ಲೂ ಸಹಾ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ ಇದೆ. ಹೆಣ್ಣು ಭ್ರೂಣಹತ್ಯೆಯಿಂದಾಗಿ ಹೆಣ್ಣುಮಕ್ಕಳ ಸಂಖೈ ಕಡಿಮೆಯಾಗುತ್ತಿದೆ. ಪುರುಷರ ಸಂಖೈ 1000 ಇದ್ದರೆ ಮಹಿಳೆಯರ ಸಂಖೈ ಕೇವಲ 850 ಮಾತ್ರ ಇದೆ. ಕೆಲವು ಹೆಣ್ಣು ಮಕ್ಕಳಿಗೆ ಇನ್ನೂ ಅವರ ಪತಿಯಿಂದ ಕಿರುಕುಳ ಕಡಿಮೆಯಾಗಿಲ್ಲ ಎಂದು ವಿಷಾದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್. ಗೌರಮ್ಮ, ಭಾರತೀಯ ದಂತವೈದ್ಯಕೀಯ ಪರಿಷತ್ತು ಚಿತ್ರದುರ್ಗ ಶಾಖೆಯ ಕಾರ್ಯದರ್ಶಿ ಡಾ. ನಾಗರಾಜಪ್ಪ, ಉಪಾಧ್ಯಕ್ಷರಾದ ಡಾ.ದೀಪಾ ಆರ್., ಖಜಾಂಚಿಗಳಾದ ಡಾ.ಫ್ರಾಂಕ್ ಬ್ರಿಟ್ಟೊ, ಡಾ.ಮಧುಮತಿ, ಡಾ. ಮಹಾಂತೇಶ್ ಮೊದಲಾದವರು ಉಪಸ್ಥಿತರಿದ್ದರು.