
ಬೀದರ್: ಆ.25:ಛಲವಿದ್ದರೆ ಸಾಧನೆಗೆ ಯಾವುದೂ ಅಸಾಧ್ಯವಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸುರೇಖಾ ನುಡಿದರು.
ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ಇಲ್ಲಿಯ ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಮಾರ್ಗದರ್ಶನ, ಬಿ.ಎ. ಹಾಗೂ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗ ಪ್ರತಿಯೊಂದಕ್ಕೂ ಪೈಪೋಟಿ ಇದೆ. ವಿದ್ಯಾರ್ಥಿಗಳು ಆಧುನಿಕ ಯುಗದ ಸವಾಲುಗಳನ್ನು ಎದುರಿಸಲು ಅಣಿಯಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ ಬಿ.ವೈ. ಮಾತನಾಡಿ, ಬೇರೆಯವರ ಮೇಲೆ ಅವಲಂಬಿತರಾದರೆ ಜೀವನದಲ್ಲಿ ಸಾಧನೆ ಮಾಡಲು ಆಗದು. ಕಾರಣ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಉಪನ್ಯಾಸಕ ಸೂರ್ಯಕಾಂತ ಐನಾಪುರೆ, ರಾಹುಲ್ ಮಿಶ್ರಾ, ಕಾಲೇಜು ಪ್ರಾಚಾರ್ಯ ನಾಗಪ್ಪ ಜಾನಕನೋರ ಮಾತನಾಡಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉದಯಭಾನು ಹಲವಾಯಿ, ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಗರಸಪ್ಪ ಜಾನಕನೋರ, ಉಪನ್ಯಾಸಕರಾದ ಈಶ್ವರ ರೆಡ್ಡಿ, ರಾಜಶೇಖರ, ನಟರಾಜ್ ಸುತಾರ್, ರಾಮ ಜಮಾದಾರ್, ವೆಂಕಟ ರಾಠೋಡ್, ಪಂಡಿತ ಗಂಗಶೆಟ್ಟಿ, ಬಸವರಾಜ ಬಿರಾದಾರ, ಶಶಿಕಾಂತ ನೇಳಗೆ, ರಾಖಿ ಕಾಡಗೆ, ಮಂಗಲಾ, ಅರ್ಚನಾ, ಶ್ರೀಲತಾ, ವಿಜಯಲಕ್ಷ್ಮಿ, ಅಂಬಿಕಾ ಇದ್ದರು.ವೈಷ್ಣವಿ, ಅನುರಾಧಾ ನಿರೂಪಿಸಿದರು. ಅಂಜಲಿ ಸ್ವಾಗತಿಸಿದರು.