ಸಾಧನೆಗೆ ಯಾವುದು ಅಡ್ಡಿ ಬರುವುದಿಲ್ಲ

ಕಲಬುರಗಿ,ನ.21:ನಗರದ ಸರ್ವಜ್ಞ ಚಿಣ್ಣರ ಲೋಕ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆನಲಿ ್ಲಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಪಟ್ಟಣದ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ಮುಖ್ಯಸ್ಥ ಶ್ರೀ ಶಿವಾನಂದ ಕೆಲ್ಲೂರ ಅವರ ನೇತ್ರತ್ವದಲ್ಲಿ “ಯೋಗ, ನೃತ್ಯ, ಸಂಗೀತ ಮತ್ತು ಮಲ್ಲಕಂಬ ಹಾಗೂ ಅನನ್ಯ ಪ್ರತಿಭೆಯ ಪ್ರದರ್ಶನ” ಕಾರ್ಯಕ್ರಮವನ್ನು ಶ್ರೀಮತಿ ತೂಳಸಮ್ಮ ಸಂಸ್ಥಾಪಕರು ಜ್ಞಾನ ಸಿಂಧು ಅಂಧ ಮಕ್ಕಳ ವಸತಿ ಶಾಲೆ ಹೊಳೆ ಆಲೂರು ಅವರು ಉದ್ಘಾಟಿಸಿದರು
ನಂತರ ಅಂಧ ಬಾಲಕಿ ಕು. ಸ್ಪೂರ್ತಿ ತಂಡದವರು ಮಧುರವಾಗಿ ಪ್ರಾರ್ಥನೆ ಗೀತೆ ಹಾಡಿದರು. ಕು. ಸಾಕ್ಷಿ ಒಂದನೇ ತರಗತಿ ಇಲ್ಲಿಯವರೆಗೂ ಆಗಿ ಹೋಗಿರುವ ಮುಖ್ಯಮಂತ್ರಿ, ಪ್ರಧಾನಮಂತ್ರಿ ಅವರ ಹೆಸರನ್ನು ಹೇಳಿ ನಂತರಭಾಷಣ ಮಾಡಿದಳು. ಮಕ್ಕಳ ಪ್ರತಿಭೆ ಅನನ್ಯವಾದದ್ದು. ವಿಕಲ ಚೇತನ ಮಕ್ಕಳು ತಾವು ಯಾವುದರಲ್ಲಿಯೂ ಕಡಿಮೆ ಇಲ್ಲ. ಅವಕಾಶ ಸಿಕ್ಕರೆ ಎಂತಹ ಅದ್ಭುತ ಸಾಧನೆ ಮಾಡಬಲ್ಲರು ಸಾಧನೆಗೆ ಯಾವುದು ಅಡ್ಡಿ ಬರುವುದಿಲ್ಲಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ವಿವಿಧ ಆಸನಗಳನ್ನು ಯೋಗಾÀಸನವನ್ನು ಪ್ರದರ್ಶಿಸಿದರು ಅವರ ಇಂಪಾದ ಮಧುರವಾದ ಹಾಡುಗಳು. ಅನನ್ಯ ಪ್ರತಿಭೆಯಿಂದ ಅದ್ಭುತವಾದ ನೃತ್ಯ ಪ್ರದರ್ಶನ ಮಾಡಿದರು. ವಿವಿಧ ಮಕ್ಕಳು ಮಲ್ಲ ಕಂಬವನ್ನು ಹತ್ತಿ ಮಾಡಿದ ಪ್ರದರ್ಶನ ಎಲ್ಲರನ್ನು ಬೆರಗಾಗಿಸಿತ್ತು. ಮಲ್ಲಕಂಬದ ಮೇಲೆ ಆಸನಗಳನ್ನು ಪ್ರದರ್ಶಿಸಿದರು.
ಶ್ರೀ ಶಿವಾನಂದ ಕೆಲ್ಲೂರ ಕಾರ್ಯದರ್ಶಿಗಳು ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ. ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಂತ ಹಂತವಾಗಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತ ನಡೆಸಿಕೊಟ್ಟರು. ಯೋಗಾಸನದ ಮಹತ್ವ, ಮಲ್ಲ ಕಂಬ ಪ್ರದರ್ಶನ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀ ವಿಜಯ ನಾಲವಾರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಅಂಗವಿಕಲ ಮಕ್ಕಳು ದೇವರಿಗೆ ಸಮಾನ ಅವರು ದೇಶದ ಆಸ್ತಿ. ಅವರು ತಮ್ಮ ಪ್ರತಿಭೆಯೊಂದಿಗೆ ರಾಜ್ಯ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಇವರಲ್ಲಿ ಪ್ರೀತಿ ಮಾನವೀಯತೆ ಇದೆ. ಅವರ ಬದುಕಿನಲ್ಲಿ ಸ್ವರ್ಗ ಇದೆ ಪರಸ್ವರ ಹಂಚಿಕೊಂಡು ಊಟ ಮಾಡುವದೇ ಸ್ವರ್ಗ, ಸ್ವಾರ್ಥದಿಂದ ಕೂಡಿದ ಬದುಕು ನರಕವಾಗುತ್ತದೆ. ಅಂದ ಮಕ್ಕಳುಪ್ರೀತಿ ಸ್ನೇಹದಿಂದಿರುವರು. ಅವರ ಬದುಕು ಸಾರ್ಥಕವಾದದ್ದು ಎಂದು ಹೇಳಿ ಎಲ್ಲರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಎಸ್. ಎಸ್. ಹಿರೇಮಠ ಪ್ರಕಾಶಕರು ಷಡಕ್ಷರಿಡಿಗ್ಗಾಂವಿ ಪ್ರತಿಷ್ಠಾನ ಕಲಬುರಗಿ, ಶಾಲೆಯ ಮುಖ್ಯಗುರುಗಳಾದ ಶ್ರೀ ವಿಜಯ ನಾಲವಾರ, ಶ್ರೀ ಪ್ರಭುಗೌಡ ಬೋಧಕ-ಬೋಧಕೇತರ ಸಿಬ್ಬಂದಿವರ್ಗದವರು ಶ್ರೀ ಕರುಣೇಶ ಹಿರೇಮಠ, ಶ್ರೀ ಗುರುರಾಜ ಕುಲಕರ್ಣಿ ವಿದ್ಯಾರ್ಥಿಗಳು ಉಪಸ್ತಿತರಿದ್ದರು. ಶ್ರೀ ಚಂದ್ರಕಾಂತ ನಿರೂಪಿಸಿದರು. ಮಕ್ಕಳ ಹಾಡು, ನೃತ್ಯ, ಯೋಗಾಸನ ಮಲ್ಲಕಂಬ ಪ್ರದರ್ಶನಎಲ್ಲರ ಮನರಂಜಿಸಿದ್ದವು.