
ಬೀದರ:ಮೇ.26:ಶಿಕ್ಷಣ ಬಹು ಮೌಲ್ಯ ಬದುಕಿನ ಬದಲಾವಣೆ ನಿಗಿಸಬಲ್ಲದ್ದು ನಮ್ಮ ವಿಕಸನದ ಮೂಲ ಶಿಕ್ಷಣ. ಸಾಧನೆ ಅವಲೊಕನಕ್ಕೆ ಪ್ರತಿಭಾ ಪುರಸ್ಕಾರ ಎಂದು ಕರ್ನಾಟಕ ಪಶು ವೈಧ್ಯಕೀಯ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ|| ಕೆ.ಸಿ. ವೀರಣ್ಣ ಹೇಳಿದರು.
ಅವರು, ನಗರದ ಪೂಜ್ಯ ಶ್ರೀ ಚೆನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ವಚನ ಚಾರಿಟೇಬಲ ಸೊಸೈಟಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರತಿಭಾವಂತ ಮಕ್ಕಳಿಗೆ ಹುರಿದುಂಬಿಸುವುದ ಅವರ ಬಾಳಿಗೆ ಪ್ರೇರಣೆ ನೀಡುವ ಕಾರ್ಯ ಇದಾಗಿದೆ ಬೀದರನಲ್ಲಿ ಗ್ರಾಮೀಣ ಭಾಗದಲ್ಲಿ ಶೇ.100% ರಷ್ಟು ಫಲಿತಾಂಶ ಸರಕಾರಿ ಪ್ರೌಢ ಶಾಲೆಗೆ ಬಂದಿರುವುದು ಇದು ಅಭಿವೃದ್ಧಿ ಸಂಕೇತ ಮಕ್ಕಳು ಪಠ್ಯ ಕ್ರಮಕ್ಕೆ ಸೀಮಿತ ಗೊಳ್ಳದೆ ವಿಕಾಸದೆಡೆಗೆ ಚಿಂತನೆ ಮಾಡಿ ಪರಿವರ್ತನೆ ಜೀವನಕ್ಕೆ ಮುನ್ನುಗಲು ಸಲಹೆ ನೀಡಿದರು.
ಸಹಾಯಕ ಆಯುಕ್ತರಾದ ಲವೀಶ ಓರಡಿಯಾ ಅವರು ಮಕ್ಕಳು ಮತ್ತು ಪಾಲಕರ ಶೈಕ್ಷಣಿಕ ಜೊತೆಗೆ ಸಂವಾದ ನಡೆಸಿ-ನಮ್ಮಲ್ಲಿ ಒಂದು ನಿರ್ಧಿಷ್ಠವಾದ ಗುರಿ ಇರಲಿ ಅದರ ಸಾಧನೆಗೆ ನಿರಾಳದ ಪರಿಶ್ರಮಬೇಕು ನಿಷ್ಠಾವಂತರಾಗಿ ಮುನ್ನಡೆದರೆ ಬದುಕು ಸಾರ್ಥಕ ಎಂದ ಅವರು ಪಾಲಕರು, ಶಿಕ್ಷಕರು, ಪರಿಸ್ಥಿತಿ ಅಥ್ರ್ಯೆಸಿಕೊಂಡು ವ್ಯವಸ್ಥೆಯಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಓದುವಾಗ ಮನನ ಹಾಗೂ ಅರಿವು ಮುಖ್ಯ ಭೂಮಿಕೆ ನಿಭಾಯಿಸುತ್ತದೆ. ಯಾವದು ಸುಲಭವಲ್ಲ ಕಷ್ಟ ಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುಟ್ಟಿ. ನಾನು ಮೊದಲು ಖಾಸಗಿ ನೌಕರಿ ಮಾಡಿ ಮುಂದೆ ಗುರಿ ಸಾಧನೆಗೆ ರಾಜಿನಾಮೆ ನೀಡಿ ಐಎಎಸ್ ಮೊದಲನೇ ಹಂತದಲ್ಲಿ ಉತ್ತೀರ್ಣನಾಗಿರುವೆನು ಮನುಷ್ಯ ಮನಸ್ಸು ಮಾಡಿದರೆ ಏನೆಲ್ಲ ಸಾಧ್ಯ ಎಂದು ನುಡಿದರು.
ಸಹಕಾರ ಇಲಾಖೆಯ ಉಪನಿಬಂಧಕರಾದ ಡಾ. ಮಂಜುಳಾ ಎಸ್. ಮಾತನಾಡಿ, ನಮ್ಮ ಗುರಿ ಸಾರ್ಥಕವಾಗಲು ನಮ್ಮ ವಿಚಾರ ಧನಾತ್ಮಕವಾಗಬೇಕು, ಫಲಿತಾಂಶ ಬಂದ ಮೇಲೆ ಕೊರಗುವುದಕ್ಕಿಂತ ಅದನ್ನು ಅರ್ಥೈಸಿಕೊಂಡು ಓದಿದರೆ ಬದುಕಿನಲ್ಲಿ ಬೆಳಕು ಕಾಣಬಹುದು ನಮ್ಮ ಜೀವನ ಒಂದು ಬೆಳಕು ಇದ್ದಂತೆ ಕತ್ತಲೆ ಸಹಜ ಅದರ ಬಗ್ಗೆ ಹೆಚ್ಚಿನ ರೀತಿಯಲ್ಲಿ ತಲೆ ಕೆಡಿಸಿಕೊಳ್ಳದೆ ಧನಾತ್ಮಕ ಚಿಂತನೆ ಮಾಡಿ ಪರಿರ್ವತನೆ ಬದುಕು ನಮ್ಮದಾಗಿಸಿಕೊಳ್ಳಲು ಪರಿಶ್ರಮವಾದಿಗಳಾಗಿ ಓದಬೇಕು ಎಂದು ಮಕ್ಕಳಿಗೆ ಕರೆ ಕೊಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ಅಖಿಲಾಂಡೇಶ್ವರಿ ಅವರು ಮಾತನಾಡಿದರು.
ಹುಲಸೂರ ಶ್ರೀ ಡಾ. ಶಿವಾನಂದ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ,ಸೋಸೈಟಿ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು, ನಿರ್ದೆಶಕ ಶಿವಕುಮಾರ ಸಾಲಿ, ವೇದಿಕೆ ಮೇಲೆ ಇದ್ದರು. ಸೋಸೈಟಿಯ ಗೌರವ ಸಲಹೆಗಾರರಾದ ಶಿವಶಂಕರ ಟೋಕರೆ ಸ್ವಾಗತಿದರೆ, ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ನಿರೂಪಿಸಿದರು. ಸಾಹಿತಿ ವೀರಶೆಟ್ಟಿ ಮಲ್ಲಶೇಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ಸೋಸೈಟಿಯ ನಿರ್ದೇಶಕರು ಸದಸ್ಯರು ಇದ್ದರು.
ಶೇ.100% ಫಲಿತಾಂಶ ಪಡೆದ ಸರ್ಕಾರಿ ಶಾಲೆಯ ಮುಖ್ಯಗುರುಗಳಾದ ಬಿ.ಎಲ್.ಪಾಂಚಾಳ ಸ.ಪ್ರೌಢ ಶಾಲೆ ಏಕಲಾರ, ಬಾಲಾಜಿ ಪಾಟೀಲ್ ಆದರ್ಶ ವಿಧ್ಯಾಲಯ ರಾಜೋಳಾ, ಕರಬಸಪ್ಪಾ ಸ.ಪ್ರೌಢ ಶಾಲೆ ನಂದಗಾಂವ, ಮಹಾವೀರ ಸ.ಪ್ರೌಢ ಶಾಲೆ ಕನಕಟ್ಟಾ, ರಾಜಶೇಖರ ದಾನಾ ಸ.ಪ್ರೌಢ ಶಾಲೆ ಹುಡಗಿ ಇದೇ ಸಂದರ್ಭದಲ್ಲಿ ಸೋಸೈಟಿ ವತಿಯಿಂದ ಮಲ್ಲಿಕಾರ್ಜುನ ಹಳ್ಳಿಕೇಡ (ಕೆ), ಬಸವಜ್ಯೋತಿ ಯನಗುಂದಾ ಇಬ್ಬರಿಗೆ ತಲಾ 10 ಸಾವಿರ ರೂಪಾಯಿ ನಗದು ಮುಂದಿನ ಉನ್ನತ ಶಿಕ್ಷಣಕ್ಕಾಗಿ ನೀಡಲಾಯಿತು. 50ಕ್ಕು ಹೆಚ್ಚು ಮಕ್ಕಳನ್ನು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳು ತೆಗೆದುಕೊಂಡಿರುವುದಕ್ಕೆ ವಚನಚಾರಿಟೇಬಲ್ ಸೋಸೈಟಿಯಿಂದ ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು.
ಪ್ರತಿ ವರ್ಷ ಒಟ್ಟು ಒಂದು ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ಅತ್ಯಂತ ಕಡು ಬಡತನದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಚನ ಚಾರಿಟೇಬಲ್ ಸೋಸೈಟಿ ವತಿಯಿಂದ ನೀಡಲಾಗುವುದು.
ಲಿಂಗಾರತಿ ಅಲ್ಲಮಪ್ರಭು, ಅಧ್ಯಕ್ಷರು ವಚನ ಚಾರಿಟೇಬಲ್ ಸೋಸೈಟಿ ಬೀದರ