ಸಾಧನೆಗೆ ಪರಿಶ್ರಮ ಅತಿ ಮುಖ್ಯ:ಸಣ್ಣ ಸಿದ್ರಾಮಪ್ಪಗೌಡ

ಸೈದಾಪುರ:ನ.4:ಉತ್ತಮ ಸಾಧನೆಗೆ ಪರಿಶ್ರಮ ಅತಿ ಮುಖ್ಯವಾಗಿದೆ ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನ 2020-21ನೇ ಸಾಲಿನ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲಿ ಅಂಬ್ರೇಶ ರಾಮಜಿ ಶೇ92.87 ಮತ್ತು ಮಹೇಶಕುಮಾರ ದೇವಿಂದ್ರಪ್ಪ ಶೇ92.5 ಅತಿ ಹೆಚ್ಚು ಅಂಕಗಳನ್ನು ಪಡೆದವರನ್ನು ಸನ್ಮಾನಿಸಿ ಮಾತನಾಡಿದರು. ಕಳೆದ 17 ವರ್ಷಗಳಿಂದ ಸಂಸ್ಥೆಯ ಶಿಕ್ಷಕರ ತರಬೇತಿ ಕೇಂದ್ರ ಗುಣಮಟ್ಟದ ಶಿಕ್ಷಣ ನೀಡುತ್ತಾ ಉತ್ತಮ ಶಿಕ್ಷಕರನ್ನು ನಿರ್ಮಾಣ ಮಾಡಲಾಗುತ್ತಿದೆ. ಇಗಾಗಲೇ ಶಿಕ್ಷಕರಾಗಿ ಸರಕಾರಿ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ನಮ್ಮದಾಗಬೇಕು ಎಂದು ಹೇಳಿದರು.

ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಮಾತನಾಡಿ, ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿರುವ ಸಂಸ್ಥೆಯ ಕಾರ್ಯದಿಂದ ನಮ್ಮ ಜವಬ್ದಾರಿ ಹೆಚ್ಚಾಗುವಂತೆ ಮಾಡಿದೆ. ಗಡಿ ಗ್ರಾಮೀಣ ಭಾಗದಲ್ಲಿನ ಭಾಷೆ ಸಮಸ್ಯೆಯ ಮಧ್ಯದಲ್ಲಿ ಉಪನ್ಯಾಸಕರ ಹಾಗೂ ಪ್ರಶಿಕ್ಷಣಾರ್ಥಿಗಳ ಪರಿಶ್ರಮ ಅತಿ ಮಹತ್ವದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯರಾದ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಕೋಶಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಸೂರ್ಯಪ್ರಕಾಶ ಆನಂಪಲ್ಲಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ.ಪೂ.ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಡಿ.ಎಲ್.ಇಡಿ ಕಾಲೇಜಿನ ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಹಣಮರೆಡ್ಡಿ ಮೋಟ್ನಳ್ಳಿ, ಆನಂದ ಪಾಟೀಲ ಕೊಂಡಾಪುರ ಸೇರಿದಂತೆ ಇತರರಿದ್ದರು.

ಪರೀಕ್ಷೆ ಬರೆದ 26ರಲ್ಲಿ 26ಉತ್ತಿರ್ಣರಾಗಿ ಶೇ100 ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ 24 ಡಿಸ್ಟಿಂಶನ್‍ಲ್ಲಿ ಹೊಂದಿದ್ದೂ ಇವರುಗಳಲ್ಲಿ ಶೇ90ಕ್ಕೂ ಹೆಚ್ಚು ಅಂಕಗಳನ್ನು ಪಡೆದ 14 ಪ್ರಶಿಕ್ಷಣಾರ್ಥಿಗಳಿದ್ದಾರೆ. ಇದು ಗಡಿ ಗ್ರಾಮೀಣ ಭಾಗದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದಕ್ಕೆ ಸಂಸ್ಥೆಯ ಸೇವಾ ಮನೋಭಾವನೆ ಕಾರಣವಾಗಿದೆ.

                 ಕರಬಸಯ್ಯ ದಂಡಿಗಿಮಠ ಪ್ರಾಂಶುಪಾಲರು ವಿ.ವ.ಡಿ.ಎಲ್.ಇಡಿ ಕಾಲೇಜು ಸೈದಾಪುರ