ಸಾಧನೆಗೆ ತ್ಯಾಗ, ತಾಳ್ಮೆ, ಸಹನೆ ಮುಖ್ಯ

ಔರಾದ :ಮಾ.30: ತಾಲೂಕಿನ ಸಂತಪೂರನ ಶ್ರೀ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ 42ನೇ ಪುನಶ್ಚೇತನ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಔರಾದ ಆರ್ಕಿಡ್ ಶಾಲೆಯ ಅಧ್ಯಕ್ಷ ವಿಜಯಕುಮಾರ್ ಘೋಡ್ಕೆ ಮಾತನಾಡಿ, ವಿದ್ಯಾರ್ಥಿಗಳ ಹತ್ತಿರ ಗ್ರಹಿಕೆ ಸಾಮರ್ಥ್ಯ ಹೆಚ್ಚಾಗಿರುತ್ತದೆ, ವಿದ್ಯಾರ್ಥಿಗಳು ಆ ಸಾಮರ್ಥ್ಯದ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತನ್ನ ಗುರಿ ಮುಟ್ಟಲು ನಿರಂತರ ಅಭ್ಯಾಸ ಮತ್ತು ವಿದ್ಯಾರ್ಥಿ ಜೀವನದಲ್ಲಿ ಬರುವ ಅಡೆತಡೆಗಳನ್ನು ಎದುರಿಸಿ ಜೀವನವನ್ನು ಸಾಗಿಸಬೇಕು. ಕಷ್ಟದ ಮಿತ್ರರಾಗಬೇಕು, ಸೋಮಾರಿತನದ ಶತ್ರುವಾಗಬೇಕು ಅಂದಾಗ ಮಾತ್ರ ಏನನ್ನಾದರೂ ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸವಿತಾ ಪಾಟೀಲ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅದ್ಭುತಶಕ್ತಿ ಅಡಗಿರುತ್ತದೆ, ಅದನ್ನು ಗುರುತಿಸಿ ತಮ್ಮ ಜೀವನದಲ್ಲಿ ಸಾಧನೆ ಮಾಡಬೇಕು, ವಿದ್ಯಾರ್ಥಿಗಳು ತನ್ನ ಗುರಿಯನ್ನು ಸಾಧಿಸುವೆ ಎಂದು ಸಂಕಲ್ಪ ಮಾಡಬೇಕು ಪ್ರತಿಯೊಂದು ವಿಷಯದಲ್ಲಿ ಸಾಧನೆ ಮಾಡಬೇಕಾದರೆ ತ್ಯಾಗ, ತಾಳ್ಮೆ ,ಸಹನೆ ಬಹಳ ಮುಖ್ಯವಾಗುತ್ತವೆ, ವಿದ್ಯಾರ್ಥಿಗಳು ಜೀವನದಲ್ಲಿ ದುಡುಕಿ ಯಾವುದೇ ತಪ್ಪುಗಳು ಮಾಡಬಾರದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಅವರು ಅಧ್ಯಕ್ಷತೆ ವಹಿಸಿದ್ದರು, ವಂದನಾ ಮಾಳಗೆ ,ಕಲ್ಲಪ್ಪ ಬುಟ್ಟೆ, ಅನಿಲ್ ಕುಮಾರ್ ಹೊಸದೊಡ್ಡಿ, ಶಿವಕುಮಾರ್ ಫುಲೆ, ಸುಧಾ ಕೌಟಗೆ ಉಪಸ್ಥಿತರಿದ್ದರು.