ಸಾಧನೆಗೆ ಕ್ರೀಡಾ ವೇದಿಕೆ ಸಹಕಾರಿ :ಕೇಂದ್ರ ಸಚಿವ ಭಗವಂತ ಖೂಬಾ

ಸಂಜೆವಾಣಿ ವಾರ್ತೆ
ಹುಮನಾಬಾದ್:ಡಿ.10:ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕಾದರೆ ಕ್ರೀಡಾ ವೇದಿಕೆ ಬಹಳ ಸಹಕಾರಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ತಾಲೂಕಿನ ಮಾಣಿಕ ನಗರ ಗ್ರಾಮದ ಮಾಣಿಕ ಪ್ರಭು ಕ್ರೀಡಾಂಗಣದಲ್ಲಿ ಶನಿವಾರ ನಡೆದ 2023-24ನೇ ಸಾಲಿನ ತಾಲೂಕ ಮಟ್ಟದ ಸಂಸದರ ಕ್ರೀಡಾ ಮಹಾಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ‘ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವುದಕ್ಕೆ ಸಂಸದರ ಕ್ರೀಡಾ ಮಹಾಮೇಳ ಸಹಕಾರಿಯಾಗಿದೆ. ತಾಲ್ಲೂಕು ಮಟ್ಟದ ಕ್ರೀಡೆಯಲ್ಲಿ ವಿಜೇತರಾದವರು, ಜನವರಿ 16ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಕ್ರೀಡೆಗೆ ಆಯ್ಕೆಯಾಗಲಿದ್ದಾರೆ’ ಎಂದರು.
ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರು ಯಾವ ರೀತಿ ಜನರ ಸೇವೆ ಮಾಡುತ್ತಿದ್ದಾರೆ, ಅದೇ ಮಾದರಿಯತೆ ಭಗವಂತ ಖೂಬಾ ಅವರು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಜನಸೇವೆ ಹೀಗೆ ಮುಂದುವರಿಯಲಿ ಎಂದರು.
ಗ್ರಾಪಂ ಅಧ್ಯಕ್ಷೆ ಪಂಚಶೀಲ ಹೆಗಣಿ, ಉಪಾಧ್ಯಕ್ಷ ಮಾಣಿಕ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗೌತಮ ಅರಳಿ, ಬಿಜೆಪಿ ಮಂಡಲ್ ಅಧ್ಯಕ್ಷ ಪ್ರಭಾಕರ ನಾಗರಾಳೆ, ಪ್ರಮುಖರಾದ ಗಜೇಂದ್ರ ಕನಕಟ್ಕರ್, ಮಲ್ಲಿಕಾರ್ಜುನ್ ಸೀಗಿ, ಸಂತೋಷ ಪಾಟೀಲ್, ಗಿರೀಶ ತುಂಬಾ, ಭದ್ರೇಶ ಪಾಟೀಲ್, ನಾಗಭೂಷಣ ಸಂಗಮ್, ದೈಹಿಕ ಶಿಕ್ಷಕ ವಿಜಯಕುಮಾರ ಇದ್ದರು.

ತಾಲೂಕಿನ ಮಾಣಿಕ ನಗರದ ಮಾಣಿಕ ಪ್ರಭು ಕ್ರೀಡಾಂಗಣದಲ್ಲಿ ಶನಿವಾರ ನಡೆದ ತಾಲೂಕ ಮಟ್ಟದ ಸಂಸದರ ಕ್ರೀಡಾ ಮಹಾಮೇಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ” ಕಾರ್ಯಕರ್ತೆಯರ ನಡುವೆ ಮಾತಿನ ಚಕಮಕಿ ನಡೆಯಿತು. ಕ್ರೀಡಾಪಟುಗಳಿಗೆ ಗಾಯಗಳಾದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಸಲುವಾಗಿಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ನಿಯೋಜನೆ ಮಾಡಲಾಗಿತ್ತು. ಸಮಯದ ಪಾಲನೆ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಪೆÇಲೀಸ್ ಇಲಾಖೆ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಮಾತಿನ ಮೂಲಕ ಸಮಸ್ಯೆ ತಿಳಿಗೊಳಿಸಿದರು.