ಸಾಧಕ ಶಾಲೆಗಳ ಸಂಖ್ಯೆ ಹೆಚ್ಚಲು ಶ್ರಮವಹಿಸಿ-ಬಿಇಒ ಕನ್ನಯ್ಯ

ಕೋಲಾರ,ಮೇ,೨೪- ತಾಲ್ಲೂಕಿನ ೧೪ ಸರ್ಕಾರಿ, ೫ ಅನುದಾನಿತ ಹಾಗೂ ೩೩ ಅನುದಾನ ರಹಿತ ಶಾಲೆಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.೧೦೦ ಸಾಧನೆ ಮಾಡಿದ್ದು, ಪ್ರಸ್ತುತ ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ಈ ಪ್ರಮಾಣ ಹೆಚ್ಚಾಗುವ ಮೂಲಕ ಗುಣಾತ್ಮಕತೆಗೆ ಒತ್ತು ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಕರೆ ನೀಡಿದರು.
ನಗರದ ಗುರುಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಸರ್ಕಾರಿ,ಅನುದಾನಿತ,ಅನುದಾನರಹಿತ ಶಾಲೆಗಳ ಮುಖ್ಯಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ, ಶೇ.೧೦೦ ಸಾಧನೆಯ ಸರ್ಕಾರಿ,ಅನುದಾನಿತ ಶಾಲೆಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.
ಶೇ.೧೦೦ ಸಾಧನೆಯ
ಸರ್ಕಾರಿ ಪ್ರೌಢಶಾಲೆಕೋಲಾರ ತಾಲ್ಲೂಕಿನ ತೊರದೇವಂಡಹಳ್ಳಿ ಪ್ರೌಢಶಾಲೆ, ಮುದುವಾಡಿ ಪ್ರೌಢಶಾಲೆ, ಅಣ್ಣಿಹಳ್ಳಿ ಪ್ರೌಢಶಾಲೆ, ಹುತ್ತೂರು ಸರ್ಕಾರಿ ಪ್ರೌಢಶಾಲೆ, ಹೋಳೂರು ಸರ್ಕಾರಿ ಪ್ರೌಢಶಾಲೆ, ಕುರಗಲ್ ಸರ್ಕಾರಿ ಪ್ರೌಢಶಾಲೆ, ಬೆಳಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆ, ಸೂಲೂರು ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿದೇಸಾಯಿ ವಸತಿ ಪ್ರೌಢಶಾಲೆ ಪಾರ್ಶ್ವಗಾನಹಳ್ಳಿ, ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ಶಾಲೆ ಕೋಲಾರ, ಮೊರಾರ್ಜಿದೇಸಾಯಿ ಶಾಲೆ ಮದನಹಳ್ಳಿ, ಮೊರಾರ್ಜಿಶಾಲೆ ವೇಮಗಲ್, ಅಂಬೇಡ್ಕರ್ ವಸತಿ ಶಾಲೆ ವಕ್ಕಲೇರಿ ಶೇ.೧೦೦ ಸಾಧನೆ ಮಾಡಿದ ಶಾಲೆಗಳಾಗಿದ್ದು, ಮುಖ್ಯಶಿಕ್ಷಕರಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಲಾಯಿತು.
ಅನುದಾನಿತ ಶಾಲೆವಿದ್ಯಾಭಿವೃದ್ದಿ ಪ್ರೌಢಶಾಲೆ ವಕ್ಕಲೇರಿ, ಮಾತೃಭೂಜಿ ಪ್ರೌಢಶಾಲೆ ಕೋಡಿಕಣ್ಣೂರು, ಗೋಕುಲ್ ಶಾಲೆ ಭಟ್ರಹಳ್ಳಿ, ಶಾಂತಿನಿಕೇತನ ಪ್ರೌಢಶಾಲೆ ತೊಟ್ಲಿ, ರಾಧಾಕೃಷ್ಣ ಪ್ರೌಢಶಾಲೆ ದಿಂಬ ಶೇ.೧೦೦ ಸಾಧನೆಯ ಅನುದಾನಿತ ಶಾಲೆಗಳಾಗಿವೆ.
ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯಂ, ಮುಖ್ಯಶಿಕ್ಷಕರ ಸಂಘದ ಚಂದ್ರಪ್ಪ, ಕಾರ್ಯದರ್ಶಿ ರಮೇಶ್‌ಗೌಡ, ತಾಲ್ಲೂಕು ಎಸ್ಸೆಸ್ಸೆಲ್ಸಿನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಇಸಿಒಗಳಾದ ರಾಘವೇಂದ್ರ, ವೆಂಕಟಾಚಲಪತಿ, ಶಿಕ್ಷಕ ಸಂಘಟನೆಯ ಅಧ್ಯಕ್ಷ ಮುನಿಯಪ್ಪ, ಮುಖ್ಯಶಿಕ್ಷಕರಾದ ಪ್ರದೀಪ್ ಕುಮಾರ್, ವೇಣುಗೋಪಾಲ್ ಮತ್ತಿತರರಿದ್ದರು.