ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ


ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಶ್ರೀನಿಧಿ ಪಾಟೀಲ್, ಕಿರಣ, ಐಶ್ವರ್ಯ, ರಾಜೇಶ್, ರುದ್ರೇಶ್, ಪವನ್, ಧನುಶ್ರೀ, ಚೇತನ್, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಚನ್ನೇಶ್, ಸಂಜನಾ, ಶೃತಿ ಅವರಿಗೆ ಹೊನ್ನಾಳಿ ಪಟ್ಟಣದಲ್ಲಿ ಕಿತ್ತೂರು ಚೆನ್ನಮ್ಮ ಪಂಚಮಸಾಲಿ ಯುವಕರ ಸಂಘದಿಂದ ಹಮ್ಮಿಕೊಂಡ ೧೯೭ನೇ ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಂಚಮಸಾಲಿ ಸಮಾಜದ ರಾಜ್ಯ ಯುವ ಘಟಕದ ಮಾಜಿ ಅಧ್ಯಕ್ಷ ಪಟ್ಟಣಶೆಟ್ಟಿ ಪರಮೇಶ್ವರಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಸಿ. ಮೃತ್ಯುಂಜಯ ಪಾಟೀಲ್, ಕೆ.ವಿ. ಪ್ರಸನ್ನಕುಮಾರ್, ಗಿರೀಶ್ ನಾಡಿಗ್, ಪದ್ಮಾ ಪ್ರಶಾಂತ್, ಬಸವರಾಜಪ್ಪ, ಕೆ. ಬಸವರಾಜ್, ರಾಜಣ್ಣ, ಕೆ. ಹಾಲೇಶ್ ಉಪಸ್ಥಿತರಿದ್ದರು.