ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ

ಬೀದರ್: ಮೇ.6:ಪ್ರಸಕ್ತ ಸಾಲಿನ ಬಿ.ಎಡ್. ಪರೀಕ್ಷೆಯಲ್ಲಿ ಸಾಧನೆಗೈದ ಇಲ್ಲಿಯ ಗೋವಿಂದರಾವ್ ಮುಳೆ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಸತ್ಕರಿಸಿ ಪ್ರೋತ್ಸಾಹಿಸಲಾಯಿತು.

ನೌಬಾದ್ ಸಮೀಪದ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಸಕ್ತ ವರ್ಷ ಕಾಲೇಜಿಗೆ ಶೇ 95 ರಷ್ಟು ಫಲಿತಾಂಶ ಬಂದಿದೆ. ಪ್ರತಿಭಾ ಪ್ರಹ್ಲಾದ್ ಶೇ 91.16, ಫುಲಾರಿ ಐಶ್ವರ್ಯ ಶೇ 91, ಸೌಮ್ಯಶ್ರೀ ಶೇ 89.33, ಸೋಮಶೇಖರ ಎಚ್ ಶೇ 89.16, ರಕ್ಷಿತಾ ಅಶೋಕ ಶೇ 88.83, ಅರ್ಚನಾ ಆರ್. ಶೇ 88.33, ಬಾಲಾಶ್ರೀ ಶೇ 88.33, ನೇಹಾ ಎನ್. ಶೇ 88.33, ಸುಶ್ಮಿತಾ ಶೇ 88.16, ಸುಧಾರಾಣಿ ಶೇ 88.16, ರಮೇಶ ಶೆಟ್ಟಿ ಶೇ 88, ಆಕಾಂಕ್ಷಾ ಶೇ 87.66 ಪೂರ್ಣಿಮಾ ಶೇ 87.65 ಅಂಕ ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಜಿ. ಮುಳೆ, ಕಾರ್ಯದರ್ಶಿ ಸತೀಶ್‍ಕುಮಾರ್ ಮುಳೆ ತಿಳಿಸಿದರು.

ವಿ.ವಿ.ಟಿ ಫಾರ್ಮಸಿ ಕಾಲೇಜು ಪ್ರಾಚಾರ್ಯ ಬಸವರಾಜ ಬಳ್ಳೂರ, ಓಂಕಾರ, ಶಿವಾನಂದ, ಆಡಳಿತಾಧಿಕಾರಿ ಸಿದ್ಧರಾಮ ಮೇಲ್ಕೇರಿ, ಮಹಾವಿದ್ಯಾಲಯದ ಪ್ರಾಚಾರ್ಯ ರಾಚಪ್ಪ ಎಂ. ಖರ್ಗೆ, ಉಪನ್ಯಾಸಕರಾದ ದೇವರಾಜ ಪಾಟೀಲ, ರಮಾದೇವಿ ಸ್ವಾಮಿ, ಲಿಂಗಮ್ಮ ನೀಲಂಗೆ, ಚಂದು ಕಾಂಬಳೆ ಇದ್ದರು.