ಸಾಧಕ ಮಕ್ಕಳ ಪಾಲಕರಿಗೆ ಸತ್ಕಾರ

ಬೀದರ್:ಎ.23: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಸಾಧಕ ಮಕ್ಕಳ ಪಾಲಕರನ್ನು ಸತ್ಕರಿಸುವ ಮೂಲಕ ಗಮನ ಸೆಳೆದಿದೆ.

ನಗರದ ಐಎಂಎ ಹಾಲ್‍ನಲ್ಲಿ ರೋಟರಿ ಇಂಟರ್‍ನ್ಯಾಷನಲ್ ಸಂಸ್ಥಾಪಕ ಪೌಲ್ ಹ್ಯಾರಿ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾರ್ಟೆಡ್ ಅಕೌಂಟೆಂಟ್, ವೈದ್ಯಕೀಯ, ಪಶು ವೈದ್ಯಕೀಯ, ಎಂಜಿನಿಯರಿಂಗ್, ತೋಟಗಾರಿಕೆ ಮೊದಲಾದ ಕೋರ್ಸ್‍ಗಳಿಗೆ ಪ್ರವೇಶ ಪಡೆದ, ಐಎಎಸ್ ಪ್ರಿಲಿಮ್ಸ್‍ನಲ್ಲಿ ತೇರ್ಗಡೆಯಾದ, ರೈಫಲ್ ಶೂಟಿಂಗ್‍ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮಕ್ಕಳ ಪಾಲಕರನ್ನು ಗೌರವಿಸಲಾಯಿತು.

ಪಾಲಕರಾದ ಮೀನಾ ಕೌರ್ ಸರ್ದಾರ್ ಆತ್ಮಾಸಿಂಗ್, ಮಹಾದೇವಿ ಮಲ್ಲಿಕಾರ್ಜುನ ಚಟ್ನಳ್ಳಿ, ಮಧುಮತಿ ವಿಠ್ಠಲ ಮೇತ್ರೆ, ಕಾವೇರಿ ಸಂಜಯ್ ವಿಶ್ವಕರ್ಮ, ಶರಣಯ್ಯ, ಗೀತಾಬಾಯಿ ವಿಷ್ಣುಕಾಂತ ಶೇಂದ್ರೆ, ಸವಿತಾ ರಮೇಶ ಬಿರಾದಾರ, ಹೇಮಾವತಿ ಜಗನ್ನಾಥ ರೆಡ್ಡಿ ಹಾಗೂ ದಿಶಾ ದಿಗಂಬರ್ ಪರೋಳೆಕರ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸತ್ಕರಿಸಲಾಯಿತು.

ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಬಹಳ ಮಹತ್ವದ್ದಾಗಿದೆ. ಅವರ ಸಂಸ್ಕಾರ ಹಾಗೂ ಮಾರ್ಗದರ್ಶನದಿಂದಲೇ ಮಕ್ಕಳು ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಸಾಧಕ ಮಕ್ಕಳ ಪ್ರೇರಣಾ ಶಕ್ತಿಯಾದ ಪಾಲಕರನ್ನು ಸನ್ಮಾನಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ನಿತಿನ್ ಕರ್ಪೂರ ಹೇಳಿದರು.

ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ, ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ಖಜಾಂಚಿ ಸತೀಶ ಸ್ವಾಮಿ, ಸದಸ್ಯರಾದ ಸೂರ್ಯಕಾಂತ ರಾಮಶೆಟ್ಟಿ, ಡಾ. ಕಪಿಲ್ ಪಾಟೀಲ, ಡಾ. ಶರಣ ಬುಳ್ಳಾ, ವೀರೇಶ ಖೇಳಗಿ, ಡಾ. ನಿತೇಶಕುಮಾರ ಬಿರಾದಾರ, ವಿದ್ಯಾಸಾಗರ ಪಾಟೀಲ, ಸುಧೀಂದ್ರ ಸಿಂದೋಲ್, ರಾಜಕುಮಾರ ಅಳ್ಳೆ, ಶಿವಕುಮಾರ ಪಾಟೀಲ ಗುಮ್ಮಾ, ದತ್ತಾ ಮುಳೆ, ಚೇತನ್ ಮೇಗೂರ ಮೊದಲಾದವರು ಇದ್ದರು.