ಸಾಧಕ ಕಾರ್ತಿಕ ಸಾಹುಕಾರ್‌ಗೆ ರಾಜ್ಯಪ್ರಶಸ್ತಿ

ಶಿವಮೊಗ್ಗ, ಜು. ೨೫- ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಆನವಟ್ಟಿ ಸಮೀಪದ ಕೋಟಿಪುರದಲ್ಲಿರುವ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಶಾಲೆಯ ಮುಖ್ಯಸ್ಥರು ಹಾಗೂ ಜಿಲ್ಲೆಯ ಯುವ ಸಾಧಕರಲ್ಲಿ ಓರ್ವರಾದ ಕಾರ್ತಿಕ್ ಸಾಹುಕಾರ್ ಅವರಿಗೆ, ಮೈಸೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಸಂಸ್ಥೆಯು ಶಿಕ್ಷಣ ಚೇತನ – ೨೦೨೨ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ತುಮಕೂರಿನ ಸಿದ್ಧಗಂಗಾ ಮಠದ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಕಾರ್ತಿಕ್ ಸಾಹುಕಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಎವರಾನ್ ಶಾಲೆಯಲ್ಲಿನ ಅತ್ಯುತ್ತಮ ಪರಿಸರ, ಉತ್ತಮ ಶಿಕ್ಷಣ, ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳಿಸಿದ ಶಿಕ್ಷಕ ವೃಂದ, ಸುವ್ಯವಸ್ಥಿತ ಕಟ್ಟಡ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ವಿಶೇಷ ತರಗತಿ, ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಫಲಿತಾಂಶ,
ಸ್ಮಾರ್ಟ್ ಕ್ಲಾಸ್, ಸಿಸಿಟಿವಿ ಭದ್ರತಾ ವ್ಯವಸ್ಥೆ ಸೇರಿದಂತೆ ಶಾಲೆಯಲ್ಲಿ ಪಠ್ಯ-ಪಠ್ಯೇತರ ಚಟುವಟಿಕೆ ಗಮನಿಸಿ ಎವರಾನ್ ಶಾಲೆ ಮುಖ್ಯಸ್ಥರಾದ ಕಾರ್ತಿಕ್ ಸಾಹುಕಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.