ಸಾಧಕ ಕನ್ನಡಿಗರ ಭಾವಚಿತ್ರಗಳ ಕಲಾಪ್ರದರ್ಶನ ವ್ಯಕ್ತಿತ್ವ ಕಟ್ಟಿಕೊಡುವ ಭಾವಚಿತ್ರಗಳು :ಡಾ ವೀರಣ್ಣ ದಂಡೆ

ಕಲಬುರಗಿ ನ21: ಚಿತ್ರಕಲಾವಿದರಿಂದ ರಚಿಸಲ್ಪಟ್ಟ ಭಾವಚಿತ್ರಗಳು ವ್ಯಕ್ತಿತ್ವವನ್ನೂ ಅನಾವರಣಗೊಳಿಸುತ್ತವೆ ಎಂದು ಕಲಬುರಗಿ ಡಾ. ಬಿ.ಡಿ ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ದೇಶಕರು ಡಾ ವೀರಣ್ಣ ದಂಡೆ ಹೇಳಿದರು. ನಗರದ ಮಾತೋಶ್ರೀ ನೀಲಗಂಗಮ್ಮಗುರಪ್ಪಅಂದಾನಿ, ಆರ್ಟ್‍ಗ್ಯಾಲರಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿಬೀದರ ಜಿಲ್ಲೆ ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ಚಿತ್ರಕಲಾವಿದ ಬಾಲಾಜಿ ಮರಗೊಂಡ ಅವರು ರಚಿಸಿದ ಆಯ್ದ ಸುಮಾರು 44 ಕನ್ನಡಿಗರ ಭಾವಚಿತ್ರಗಳ ಕಲಾಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಸಾಧಕ ಕನ್ನಡಿಗರ ಭಾವಚಿತ್ರಗಳ ಪ್ರದರ್ಶನ ಪ್ರಶಂಸನೀಯವಾದ್ದು ಯುವಕರಿಗೆ ಪ್ರೇರಣೆ ನೀಡುತ್ತವೆ ಹಾಗು ಸಾಧಕರ ಬಗ್ಗೆ ತಿಳಿಯುವ ಕುತೂಹಲ ಮೂಡಿಸುತ್ತವೆ ಎಂದರು. ಸಾಹಿತ್ಯಕ್ಕೂ ಚಿತ್ರಕಲೆಗೂ ಅವಿನಾಭಾವ ಸಂಬಂಧವಿದೆ ಎಂದು ಅಭಿಪ್ರಾಯ ಪಟ್ಟರು.

ದಿ ಐಡಿಯಲ್ ಫೈನ್ ಆರ್ಟ ಇನ್ಸಿಟ್ಯೂಟ್ ಪ್ರಾಚಾರ್ಯಾರಾದ ಲೋಕಯ್ಯ ಕೆ.ಮಠಪತಿ

ಭಾವಚಿತ್ರಗಳ ರಚನೆಗಳು ಚಿತ್ರಕಲಾವಿದನ ಕೌಶಲ್ಯ, ವರ್ಣ ಸಂಯೋಜನೆ,ರಚನಾತ್ಮಕತೆ ಅವಲಂಭಿಸಿದ್ದು ಜೀವಂತಿಕೆಯಿಂದ ಕೂಡಿರುತ್ತವೆ ಎಂದು ಅಭಿಪ್ರಾಯಪಟ್ಟರು. ಕಲಾವಿದನ ಪಯಣ ಪ್ರಶಂಸಿದ ಅವರು ಭಾವಚಿತ್ರಗಳು ಪ್ರೇರಣಾದಾಯಕ ಇವೆ ಎಂದರು.

ಎಂ ಎಂ ಕೆ ಕಾಲೇಜ ಆಫ್ ವಿಜುವಲ್ ಆರ್ಟ ಪ್ರಾಚಾರ್ಯರಾದ ಶೇಷರಾವ್ ಆರ್ ಬಿರಾದಾರ್ ಅವರು ಮುಖ್ಯಅಥಿಗಳಾಗಿ ವೇದಿಕೆ ಮೇಲೆ ಉಪಸ್ಥತಿರಿದ್ದರು. ಹಿರಿಯ ಕಲಾವಿದರಾದ ವಿ ಬಿ ಬಿರಾದಾರ ಅಧ್ಯಕ್ಷತೆವಹಿಸಿದ್ದರು. ದೌಲತರಾವ ದೇಸಾಯಿ ನಿರೂಪಿಸದರು, ಸೂರ್ಯಕಾಂತ ನಂದೂರ ವಂದಿಸಿದರು.

ಹಿರಿಯ ಚಿತ್ರಕಲಾವಿದರಾದ ಡಾ ವಿ.ಜಿ ಅಂದಾನಿ, ಡಾ ಎಸ್ ಎಂ ನೀಲಾ, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ ಹೆಚ್ ವಿ ಮಂತಟ್ಟಿ, ಎಂ ಸಂಜೀವ, ಮಹ್ಮದ ಅಯಾಜುದ್ದೀನ ಪಟೇಲ್, ಬಾಬುರಾವ ಹೆಚ್, ಡಾ ರೆಹಮಾನ್ ಪಟೇಲ್, ಡಾ ಮಲ್ಲಿಕಾರ್ಜುನ ಬಾಗೋಡಿ, ರಾಮಗಿರಿ ಪೋಲಿಸ್ ಪಾಟೀಲ್, ನಿಂಗಣ್ಣಾ ಕೇರಿ, ಬಸವರಾಜ ಕಮಾಜಿ, ಜಿತೇಂದ್ರ ಕೊಥಳಿಕರ, ನಾಗರಾಜ ಕುಲಕರ್ಣಿ, ದಾನಯ್ಯಾ ಚೌಕಿಮಠ, ನೀಲಾಂಬಿಕಾ, ನಯನಾ, ಡಾ ಆಕಾಶ ವಡ್ಡರ, ಚಿತ್ರಕಲಾ ಶಿಕ್ಷಕರಾz ರಾಜಕುಮಾರ ಕಾಳೆ, ಸಿಧ್ಧು ಮರಗೋಳ, ಕುಪೇಂದ್ರ ಮುಂದವರು ಇದ್ದರು.

ಚಿತ್ರಕಲಾ ಪ್ರದರ್ಶನ 23 ರವರೆಗೆ, ಮುಂಜಾನೆ 11 ರಿಂದ ಸಾಯಂಕಾಲ 6 ರವರೆಗೆ ಚಿತ್ರಕಲಾವಿದರು ಮತ್ತು ಕಲಾಆಸಕ್ತರು, ಸಾರ್ವಜನಿಕರು ವಿಕ್ಷೀಸಬಹುದು ಎಂದು ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ ಎಂ.ಜೋಶಿ ಅವರು ತಿಳಿಸಿದ್ದಾರೆ.