ಸಾಧಕಿ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನಾಚರಣೆ

ಕೆ.ಆರ್.ಪೇಟೆ. ಜ.04: ಹೆಣ್ಣು ಮಕ್ಕಳು ಅಕ್ಷರ ಕಲಿಯುವುದು ಮಹಾಪಾಪ ಎನ್ನುವಂತಹ ಕಾಲದಲ್ಲಿ, ಅಕ್ಷರ ವಂಚಿತ ಸಮುದಾಯದ ಜನರಿಗೆ ಶಿಕ್ಷಣವು ಗಗನಕುಸುಮವಾಗಿತ್ತು ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಎಲ್.ಎಸ್.ಧರ್ಮಪ್ಪ ತಿಳಿಸಿದರು.
ಅವರು ಪಟ್ಟಣದ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ಸಾಧಕಿ ಸಾವಿತ್ರಬಾಯಿ ಪುಲೆ ಯವರ ಜನ್ಮ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುμÁ್ಪರ್ಚನೆ ಮಾಡಿ ಮಾತನಾಡಿ ಅಪಾರ ಅವಮಾನ, ನೊವು, ಕಷ್ಟ- ನಷ್ಟಗಳನ್ನು ಅನುಭವಿಸಿಯೂ ಅಂದುಕೊಂಡಿದ್ದನ್ನು ಸಾಧ್ಯ ಮಾಡಿದವರು ಜ್ಯೋತಿಬಾಪುಲೆ ದಂಪತಿ ಈ ನೆಲದ ತಳ ಸಮುದಾಯದ ಹೋರಾಟ ಮತ್ತು ಚಳವಳಿಗಳು ಪುಲೆ ದಂಪತಿಯ ಸಾಧನೆಯನ್ನು ಹೃದಯದಲ್ಲಿ ಇಟ್ಟುಕೊಂಡು ಮುಂದಿನ ತಲೆಮಾರುಗಳಿಗೆ ದಾಖಲಿಸಿದರು.
ಜನವರಿ 3 ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿಪುಲೆಯವರ ಜನ್ಮದಿನವನ್ನು ಭಾರತ ದೇಶದಾದ್ಯಂತ ಆಚರಿಸುತ್ತಿದ್ದು. ಆ ಮಹಾಮಾತೆಗೆ ಅಕ್ಷರ ಕಲಿಸುವಲ್ಲಿ ಇದ್ದ ಬದ್ಧತೆ, ಪ್ರೀತಿ, ಕಾಳಜಿ ನಮ್ಮೆಲ್ಲರಿಗೂ ಅನುಕರಣೀಯ.
ವಿಶೇಷವಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಹಿಳಾ ಶಿಕ್ಷಕರ ಪರವಾಗಿ ಧ್ವನಿ ಎತ್ತುವ ನಿಟ್ಟಿನಲ್ಲಿ, ಸಾವಿತ್ರಿಬಾಪುಲೆರವರ ಆದರ್ಶ ಗಳನ್ನು ಕಾಯಾ ವಾಚಾ ಮನಸಾ ಅನುಸರಿಸಲು ಪ್ರಯತ್ನಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಾ ಸಾವಿತ್ರಿಬಾಯಿಪುಲೆಯವರಿಗೆ ಗೌರವ ಸಮರ್ಪಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಾದ್ಯಕ್ಷ ಪದ್ಮೇಶ್,ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಸಂಧ್ಯಾರಾಣಿ,ಕಸಾಪ ಅದ್ಯಕ್ಷ ಪೂರ್ಣಚಂದ್ರ ತೇಜಸ್ವಿ,ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ. ಪದಾಧಿಕಾರಿಗಳಾದ ಜಿ.ಎಸ್.ಮಂಜು, ಪವಿತ್ರ, ವಾಣಿ,ಇಂದ್ರಾಣಿ, ಯೋಗೇಶ್, ಕಿರಣ್ ಕುಮಾರ್, ಅಣ್ಣಯ್ಯ, ಸೇರಿದಂತೆ ಹಲವರು ಹಾಜರಿದ್ದರು.