ಮಾನ್ವಿ,ಅ.೦೩- ನಿರಂತರ ಅಧ್ಯಯನ ಸತತ ಪರಿಶ್ರಮದಿಂದ ಉನ್ನತ ಹುದ್ದೆ ಪಡೆಯಲು ಸಾಧ್ಯ ಎಂದು ಕೆ.ಎ.ಎಸ್ ಹುದ್ದೆಗೆ ಆಯ್ಕೆಯಾಗಿರುವ ಶಾಂತಾ ಹೇಳಿದರು.
ಪಟ್ಟಣದ ಹಳೇ ಎಲ್.ಐ.ಸಿ ಹತ್ತಿರವಿರುವ ಏಕಲವ್ಯ ಕರಿಯರ್ ಅಕಾಡೆಮಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ’ಸಾಧಕರೊಂದಿಗೆ ಸಂವಾದ ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಾಮಾಣಿಕತೆಯಿಂದ ಓದು, ವ್ಯವಸ್ಥಿತವಾದ ಸಿದ್ದತೆ & ಸಾಧಿಸುವ ಆತ್ಮವಿಶ್ವಾಸ ಇದ್ದರೆ ಐ.ಎ.ಎಸ್ & ಕೆ.ಎ.ಎಸ್ ಅಂತಹ ದೊಡ್ಡ ಹುದ್ದೆಗಳನ್ನು ಪಡೆಯಲು ಸಾಧ್ಯವಿದೆ. ಪ್ರಚಲಿತ ವಿದ್ಯಮಾನಗಳನ್ನು ತಿಳಿಯಲು ದಿನಪತ್ರಿಕೆಗಳನ್ನು ಓದಬೇಕು ಮತ್ತು ನಿರಂತರವಾಗಿ ಬರವಣಿಗೆಯ ಅಭ್ಯಾಸ ಮಾಡಬೇಕು. ಓದಿರುವ ವಿಷಯಗಳನ್ನು ನೋಟ್ಸ್ ಮಾಡಿಕೊಳ್ಳಬೇಕು. ಓದುವ ಸಮಯದಲ್ಲಿ ಆರೋಗ್ಯ ಉತ್ತಮವಾಗಿರಲು ಯೋಗ, ಧ್ಯಾನ ಮಾಡಬೇಕು ಎಂದು ಹೇಳಿದರು.
ಸ್ಪರ್ಧಾಥಿ೯ಗಳಿಗೆ ಸಮಯದ ಮಹತ್ವ ಅರಿತಿರಬೇಕು. ಇರುವ ಸಮಯವನ್ನು & ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಜೀವನದಲ್ಲಿ ಬರುವ ಸಮಸ್ಯೆ& ಸವಾಲುಗಳಿಗೆ ಎದೆಗುಂದದೆ ಧೈರ್ಯದಿಂದ ಮುನ್ನುಗ್ಗಿ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಏಕಲವ್ಯ ಕರಿಯರ್ ಅಕಾಡೆಮಿ ಗೋಪಾಲ ನಾಯಕ, ಉಪನ್ಯಾಸಕ ಮಹೇಶ ಕಲ್ಲೂರು, ಯೋಧನಾಯಕ ಕರಡಿಗುಡ್ಡ, & ಸಹಾಯಕ ರಾಜು ರಾಥೋಡ್ & ಸ್ಪರ್ಧಾರ್ಥಿಗಳು ಹಾಜರಿದ್ದರು.