ಸಾಧಕರಿಗೆ ಹೆಬ್ಬಾಳ ಮಠದಿಂದ ಪ್ರಶಸ್ತಿ ಪ್ರದಾನ

ಗಂಗಾವತಿ ಡಿ.29: ತಾಲೂಕಿನ ಹೆಬ್ಬಾಳ ಬೃಹನ್ಮಠದ ಶ್ರೀ ಬೋಳೋಡಿ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದÀ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಶಕಗಳ ಕಾಲ ರೈತಧ್ವನಿಯಾಗಿ ಹೋರಾಟ ನಡೆಸಿz ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಅವರಿಗೆ ರೈತ ನಾಯಕ ರತ್ನ ಪ್ರಶಸ್ತಿ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕøತ ಡಿವೈಎಸ್‍ಪಿ ರುದ್ರೇಶ ಉಜ್ಜನ ಕೊಪ್ಪ ಅವರಿಗೆ ಕರ್ತವ್ಯ ಸೇವಾ ಭೂಷಣ ಪ್ರಶಸ್ತಿ, ಸಮಾಜ ಸೇವಾ ಕ್ಷೇತ್ರದಲ್ಲಿ ಕಳನಗೌಡ ಪಾಟೀಲರಿಗೆ ಸಮಾಜ ಸೇವಾದುರಂಧರ ಪ್ರಶಸ್ತಿ ನೀಡಲಾಯಿತು.
ಶ್ರೀ ನಾಗಭೂಷಣ ಶಿವಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಈ ಮೊದಲು ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಸರಳವಾಗಿ ನಡೆದವು.
ಈ ವೇಳೆಯಲ್ಲಿ ಡಾ.ಹಿರೇಶಾಂತವೀರ ಮಹಾಸ್ವಾಮಿಗಳು ಹೂವಿನ ಹಡಗಲಿ, ಸಂತೆಕಲ್ಲು ಮಹಾಸ್ವಾಮಿಗಳು, ಮೈನಳ್ಳಿ ಮಹಾಸ್ವಾಮಿಗಳು, ಶಶೀಧರ ಸ್ವಾಮಿ, ಆನಂದ ಅಕ್ಕಿ, ಕಲ್ಮಠ ಮಹಿಳಾ ವಿದ್ಯಾಲಯದ ಪ್ರಾಚಾರ್ಯ ಡಾ.ಶರಣಬಸಪ್ಪ ಕೊಲ್ಕಾರ್ ಉಪಸ್ಥಿತರಿದ್ದರು.