ಸಾಧಕರಿಗೆ ಸನ್ಮಾನ

ಕಲಬುರಗಿ:ನ.30: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ಸಂಘ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದಿಂದ ಹಮ್ಮಿಕೊಂಡಿದ್ದ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿ, ಪದೋನ್ನತಿ ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು.
ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಡಾ.ವಿಜಯಕುಮಾರ ವಿಶ್ವ ಮಾನವ, ಗುಪ್ತಚರ ಇಲಾಖೆ ಡಿವೈಎಸ್‍ಪಿ ಚಂದ್ರಶೇಖರ ನಾಯಕ, ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮರಾಯ ಹವಾಲ್ದಾರ್,ಸಂಘದ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ, ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ಮಾನಪ್ಪ ನಾಯಕ, ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಶರಣು ಸುಬೇದಾರ, ಎಚ್.ಬಿ.ಬಂಡಿ, ಗುರುರಾಜ ದೊರೆ, ಚನ್ನಪ್ಪ ಸುರಪುರಕರ್, ಅಮರೇಶ ಹೋಟೆಲ್, ಭೀಮರಾವ್ ದೊರೆ, ದೇವಿಂದ್ರಪ್ಪ ದೊರೆ, ಸಾಯಿಬಗೌಡ ಪಾಟೀಲ್, ಡಾ. ಲಕ್ಷ್ಮಣ ಬೋಸೆ, ಅಶೋಕ ಕಾಳಮಂದರಗಿ, ರಂಗನಾಥ ದೊರೆ, ಗೋವಾ ನಾಯಕ ಇದ್ದರು.