ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮುದ್ದೇಬಿಹಾಳ:ನ.7: ಬರಿ ಮಾತಿನಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಹಾಗಾಗಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ನಾವು ನಮ್ಮ ಸಾಧನೆಯನ್ನು ನಮ್ಮ ಗೆಲ್ಲಿಸಿ ಜನರ ಋಣ ತೀರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಪಟ್ಟಣವನ್ನು ಸ್ವಚ್ಛ ಸುಂದರ ಪಟ್ಟಣವನ್ನಾಗಿ ಮಾಡುವುದು ನನ್ನ ಕನಸು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಪುರಸಭೆಯ ನೂತನ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹೇಳಿದರು.

ಅವರು ಪಟ್ಟಣದ ಹುಡ್ಕೋದಲ್ಲಿರುವ ಉದ್ಯಾನವನದಲ್ಲಿ ಹಸಿರು ತೋರಣ ಬಳಗದವರು ಗುರುವಾರ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹುಡ್ಕೋದಲ್ಲಿರುವ ಹಸಿರು ತೋರಣ ಉದ್ಯಾನ ಸೇರಿದಂತೆ ಪಟ್ಟಣದ ಎಲ್ಲ ಉದ್ಯಾನವನದ ಸ್ಥಳಗಳನ್ನು ಹಸಿರು ವನಗಳಾಗಿ ಮಾಡುವುದಾಗಿ ಹೇಳಿದರು.

ಬಳಗದ ಸಂಚಾಲಕ ಮಹಾಬಲೇಶ ಗಡೇದ ಮಾತನಾಡಿ, ಹುಡ್ಕೋ ಉದ್ಯಾನವನ ಅಭಿವೃಧ್ದಿ ನಮ್ಮೆಲ್ಲರ ಕನಸು. ಇದನ್ನು ನನಸು ಮಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಪಟ್ಟಣದ ಎಲ್ಲ 46 ಕ್ಕೂ ಹೆಚ್ಚು ಉದ್ಯಾನವನಗಳನ್ನು ಗುರುತಿಸಿ ಅಭಿವೃಧ್ದಿಗೆ ಕ್ರಮ ಕೈಕೊಂಡಿರುವುದು ಎಲ್ಲರಿಗೂ ಹೆಮ್ಮೆ ತರುವಂಥದ್ದು. ಅವರ ಕಾರ್ಯಕ್ಕೆ ನಾವೂ ಸಹಕರಿಸುತ್ತೇವೆ ಎಂದರು.

ಬಳಗದ ಅಧ್ಯಕ್ಷ ಅಶೋಕ ರೇವಡಿ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ವೇದಿಕೆಯಲ್ಲಿದ್ದರು. ಬಳಗದ ಕಾರ್ಯದರ್ಶಿ ರಾಜಶೇಖರ ಕಲ್ಯಾಣಮಠ, ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ಬಿ.ಎಂ.ಪಲ್ಲೇದ, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಅಶೋಕ ನಾಡಗೌಡ, ಪ್ರಮುಖರಾದ ಅಮರೇಶ ಗೂಳಿ, ಡಾ.ವೀರೇಶ ಪಾಟೀಲ, ಡಾ.ವೀರೇಶ ಇಟಗಿ, ವಿಲಾಸ ದೇಶಪಾಂಡೆ, ನಾಗರಾಜ ಕ್ಷತ್ರೀಯ, ವೆಂಕನಗೌಡ ಪಾಟೀಲ, ಎಂ.ಎಸ್.ಬಾಗೇವಾಡಿ, ಸುಧೀರ ಕತ್ತಿ, ಸುರೇಶ ಕಲಾಲ, ಎಚ್.ವೈ.ಪಾಟೀಲ ವಕೀಲರು, ಬಿ.ಎಚ್.ಬಳಬಟ್ಟಿ, ಡಾ.ವಿಜಯಕುಮಾರ ಗೂಳಿ, ರವಿ ತಡಸದ, ಕಿರಣಗೌಡ ಪಾಟೀಲ, ಕಿರಣ ಕಡಿ, ಬಸಯ್ಯ ನಂದಿಕೇಶ್ವರಮಠ, ಡಾ.ಸಿ.ಕೆ.ಶಿವಯೋಗಿಮಠ, ವೀರೇಶ ಹಂಪನಗೌಡರ, ಹಣಮಂತ್ರಾಯ ದೇವರಳ್ಳಿ, ರುದ್ರಗೌಡ ಅಂಗಡಗೇರಿ, ಸೋಮಶೇಖರ ಚೀರಲದಿನ್ನಿ, ಶರಣು ಹಿರೇಕುರುಬರ ಇನ್ನಿತರರು ಇದ್ದರು. ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಜಹಾದಬಿ ಹುಣಸಗಿ, ಡಿ.ಬಿ.ವಡವಡಗಿ, ಸಂಗಮೇಶ ಶಿವಣಗಿ ಹಾಗೂ ಇತ್ತಿಚಿಗೆ ಬಹುದೊಡ್ಡ ಕಳ್ಳತನವನ್ನು ತೆಗಟ್ಟಿ ಕೋಟ್ಯೋಂತರ ರೂಪಾಯಿಗಳನ್ನು ಉಳಿಸಿದ ರಾತ್ರಿ ಗಸ್ತು ಸಂಚರಿಸುವ ಗೂರ್ಖಾ ಶೇರ ಬಹಾದ್ದೂರಸಿಂಗ್ ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಶ್ರೀನಿವಾಸರಾವ್ ಕುಲಕರ್ಣಿ ಪ್ರಾರ್ಥಿಸಿದರು. ಸವಿತಾ ಮುಪ್ಪಯ್ಯನಮಠ ಜಾನಪದ ಗೀತೆ ಹಾಡಿದರು. ರವಿ ಗೂಳಿ ಸ್ವಾಗತಿಸಿದರು. ಎಂ.ಎಸ್.ಗಡೇದ ನಿರೂಪಿಸಿದರು. ವೀರೇಶ ಹಂಪನಗೌಡರ ವಂದಿಸಿದರು.