ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ

ಬೆಳಕು ಸಾಹಿತ್ಯ ಸಂಸ್ಕೃತಿಕಾ ಸಂಸ್ಥೆಯ ಸಾಧನೆ ಶ್ಲಾಘನೀಯ
ರಾಯಚೂರು ಆ ೦೬ :- ಬೆಳಕು ಸಂಸ್ಥೆ ಇಲ್ಲಿಯವರೆಗೆ ನೂರಾರು ಕಾರ್ಯಕ್ರಮ ಮಾಡಿ ಯಶಸ್ವಿಯಾಗಿದ್ದು ಇಂತಹ ಕನ್ನಡ ಕಾರ್ಯಕ್ರಮದಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವಂತಹ ಸೇವೆ ಮಾಡುತ್ತಿರುವ ಬೆಳಕು ಸಾಹಿತ್ಯ ಸಂಸ್ಥೆ ಹಾಗೂ ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆಯ ಮೂಲಕ ಪ್ರೊತ್ಸಾಹ ಮಾಡುತ್ತಿರುವುದು ಶ್ಲಾಘನೀಯ ಮುಂದಿನ ದಿನಗಳಲ್ಲಿ ದೇವರ ಆಶಿರ್ವಾದದಿಂದ ಈ ರಾಷ್ಟ್ರೀಯ ಮಟ್ಟದಲ್ಲಿ ಬೆಳಕು ನೀಡಲಿ ಎಂದು ಧಾರ್ಮಿಕ ಹಾಗೂ ಸಮಾಜಿಕ ಪ್ರಶಸ್ತಿ ಪುರಸ್ಕೃತರಾದ ಪುಣ್ಯಕ್ಷೇತ್ರ ನಂದಿಪುರ ಮಠದ ಡಾ ಮಹೇಶ್ವರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಬೆಳಕು ಶೈಕ್ಷಣಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಪಕ್ಕುಗಳ ಹಿತರಕ್ಷಣಾ ವೇದಿಕೆ ವತಿಯಿಂದ ೭೬ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ರಾಜ್ಯಮಟ್ಟದ ಕನ್ನಡ ಸಿರಿವಂತಿಕೆ ಸಂಭ್ರಮ ಕಾರ್ಯಕ್ರಮವನ್ನು ಬಳ್ಳಾರಿಯ ಕಲ್ಯಾಣ ಮಠದ ಶ್ರೀಗಳಾದ ಮ,ನಿ,ಪ್ರ ಕಲ್ಯಾಣ ಮಹಾಸ್ವಾಮಿಗಳು ಮಾತಾನಾಡಿ ಆಶೀರ್ವಚನ ನೀಡಿದರು.
ನಂತರ ಹಿರಿಯ ಸಾಹಿತಿ ಬೀರಪ್ಪ ಶಂಬೋಜಿಯವರು ಆಶಯ ನುಡಿಗಳನ್ನಾಡಿದರು ನಂತರ ಅಣ್ಣಪ್ಪ ಮೇಟಿಗೌಡ ಪ್ರಾಸ್ತಾವಿಕ ನುಡಿಯೊಂದಿಗೆ ಮಾತಾನಾಡಿ ನಮ್ಮ ಬೆಳಕು ಸಂಸ್ಥೆಯಿಂದ ೧೧೩ ಕಾರ್ಯಕ್ರಮ ಆದರೆ ಇದರ ವಿಶೇಷ ಏನೆಂದರೆ ಇದು ನನ್ನ ತವರೂರಲ್ಲಿ ಮಾಡಿದ ಮೊದಲ ಕಾರ್ಯಕ್ರಮ ಇದಾಗಿದ್ದು ಇದಕಿಂತ ಮುಂಚೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಹಾಗೂ ಹೊರ ದೇಶದ ಕೀನ್ಯಾ ದೇಶದಲ್ಲಿ ಮಾಡಿದ ಇತಿಹಾಸವಿದೆ ಈ ಬೆಳಕು ಸಂಸ್ಥೆಯಿಂದ ಇಲ್ಲಿಯವರೆಗೆ ಸಾವಿರಾರು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗೌರವಿಸಲಾಗಿದೆ ಇದಕ್ಕೆಲ್ಲ ನಿಮ್ಮ ಕನ್ನಡ ಪ್ರೇಮದಿಂದ ಮಾತ್ರ ಸಾಧ್ಯ ಎಂದರು. ನಂತರ. ಬಸಮ್ಮ ಹಿರೇಮಠ ಅವರ ಆಡುತ ಕಲಿ ಎನ್ನುವ ನೂತನ ಪುಸ್ತಕ ಪರಿಚಯವನ್ನು ಹಿರಿಯ ಸಾಹಿತಿ ಹರಿನರಸಿಂಹ ಉಪಾಧ್ಯಾಯ ಪರಿಚಯ ಮಾಡಿದರು ರಮೇಶ ಬಾಬು ಯಾಳಗಿಯವರು ಪುಸ್ತಕ ಬಿಡುಗಡೆ ಮಾಡಿದರು. ನಂತರ ಚಿತ್ರನಟಿ ಕಾವೇರಿ ಹದಡಿ, ವಿಜಯಸೂರ್ಯ, ಸೇರಿದಂತೆ ಅನೇಕರು ಮಾತಾನಾಡಿದರು. ನಂತರ ಕಾರ್ಯಕ್ರಮದಲ್ಲಿ ನೂರಾರು ಸಾಧಕರನ್ನು ಗುರುತಿಸಿ ರಾಜ್ಯ ಮಟ್ಟದ ಕಾಯಕ ಯೋಗಿ, ಕಲಾ ರತ್ನ, ಸೇವಾ ಸಂಸ್ಥೆ, ಆದರ್ಶ ದಂಪತಿ, ಶಿಕ್ಷಣ ರತ್ನ,ಸಹಕಾರ ರತ್ನ,ಕನ್ನಡ ಸೇವಾ ರತ್ನ,ಕಾಯಕ ಕಣ್ಮಣಿ ಪ್ರಶಸ್ತಿ, ಗಾನಸಿರಿ ಪ್ರಶಸ್ತಿ, ಕಾಯಕ ರತ್ನ, ಸೇರಿದಂತೆ ಗಾಯಕರಿಗೆ ಅತಿಥಿ ಗಣ್ಯರಿಗೆ ಸನ್ಮಾನಿಸಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು..
ನಂತರ ಬೆಳಕು ಸಂಸ್ಥೆಯಿಂದ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ, ರಾಜ್ಯಮಟ್ಟದ ಗಾಯನ ಕಾರ್ಯಕ್ರಮ, ಮೇಘನಾ ಹುಣಸಿಗಿ ಅವರಿಂದ ಕೊಡಗು ನೃತ್ಯ, ಭರತನಾಟ್ಯ, ದೇಶಭಕ್ತಿ ಗೀತೆಗಳು, ಕಾರ್ಯಕ್ರಮ ನಡೆದವು ವಿಜೇತರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಕಾರ್ಯಕ್ರಮವನ್ನು ಪ್ರಿಯಾಂಕಾ, ಅಮರೇಶ ಸಾಲಿಮಠ,ನರಸಿಂಹಲು ಚಲುವಾದಿ, ಮಂಜುನಾಥ, ಪಂಪಯ್ಯ ಸ್ವಾಮಿ ಮದ್ಲಾಪೂರು,ಬಸವರಾಜ ಅಮರೇಶ್ವರಕ್ಯಾಂಪ್, ಇತರರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ ಪುಣ್ಯಕ್ಷೇತ್ರ ನಂದಿಪುರದ ಡಾ ಮಹೇಶ್ವರ ಮಹಾಸ್ವಾಮಿಗಳು, ಶಾಸಕರಾದ ಶಿವರಾಜ ಪಾಟೀಲ್, ರಂಗಬೀಷ್ಮ ಎಸ್ ವಿ ಪಾಟೀಲ ಗುಂಡೂರು, ಚಿತ್ರನಟಿ ಕಾವೇರಿ ಹದಡಿ, ರಂಗಣ್ಣ ಪಾಟೀಲ ಅಳ್ಳುಂಡಿ, ವಿಜಯ ಸೂರ್ಯ, ಹರಿ ನರಸಿಂಹ ಉಪಾಧ್ಯಾಯ, ರಮೇಶ ಬಾಬು ಯಾಳಗಿ, ಕಡಗೋಲು ಆಂಜನೇಯ, ಲಕ್ಷ್ಮೀ, ರವೀಂದ್ರ ಜಲ್ದಾರ್, ಮಾರುತಿ ಬಡಿಗೇರ,ಚನ್ನಲಕ್ಷ್ಮೀ, ಸಂಪಾದಕರಾದ ಭೀಮರಾಯ ಹದ್ದಿನಾಳ, ಚನ್ನಬಸವ ಬಾಗಲವಾಡ, ಬಸಮ್ಮ ಹಿರೇಮಠ, ಪ್ರಶಸ್ತಿ ಪುರಸ್ಕೃತ ಸಾಧಕರು, ಗಾಯಕರು, ನೃತ್ಯಗಾರ್ತಿಯರು, ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ, ಕಾರ್ಯದರ್ಶಿ ಚಂದ್ರಶೇಖರ ಮದ್ಲಾಪೂರು ಸೇರಿದಂತೆ ನೂರಾರು ಸಾಹಿತ್ಯ ಆಸಕ್ತಿಕರು, ಕವಿಗಳು, ಹಾಗೂ ಬೆಳಕು ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು..