ಸಾಧಕರಿಗೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮುಖ್ಯ

ಕಲಬುರಗಿ:ಮೇ.22: ಎಲೆ ಮರೆ ಕಾಯಿಯಂತೆ ಸಮಾಜದಲ್ಲಿ ಅನೇಕರು ತಮ್ಮದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ. ಸಮಾಜ ಅವರಲ್ಲಿರುವ ಪ್ರತಿಭೆ, ಸಾಧನೆಯನ್ನು ಗುರ್ತಿಸಿ, ಸಮಾಜಕ್ಕೆ ಪರಿಚಯಿಸಿ, ಪ್ರೋತ್ಸಾಹ ನೀಡುವುದು ಮುಖ್ಯವಾಗಿದೆ. ಇದರಿಂದ ಸಾಧಕರ ಸಂಖ್ಯೆ ಹೆಚ್ಚಳವಾಗುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಲು ಸಾಧ್ಯವಾಗುತ್ತದೆ ಎಂದು ಜ್ಞಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಮೇಶ್ವರ ಸರಡಗಿ ಅಭಿಮತಪಟ್ಟರು.

   ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯ ದಕ್ಷಿಣಮುಖಿ ಆಂಜನೇಯ ದೇವಸ್ಥಾನದ ಆವರಣದಲ್ಲಿ  ಭಾನುವಾರ ಸಂಜೆ ಜರುಗಿದ ವಿವಿಧ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ಮಹನೀಯರಿಗೆ ಏರ್ಪಡಿಸಲಾಗಿದ್ದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
   ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಸೇವಕ ಸಂತೋಷ ಹೂಗಾರ ಮಾತನಾಡಿ, ಪ್ರೋತ್ಸಾಹ, ಪ್ರೇರಣೆ ಸಾಧನೆಗೆ ಪೂರಕವಾಗಿದೆ. ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದು, ಅವರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಲಬುರಗಿ, ಬೀದರ ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಿಸುವ ಮೂಲಕ, ಸಾಧನೆಗೆ ಅವರಲ್ಲಿ ಮತ್ತಷ್ಟು ಮನೋಚೈತನ್ಯ ತುಂಬಬೇಕು ಎಂಬುದು ಆಶಯವಾಗಿತ್ತು. ಅದಕ್ಕೆ ಹೂಗಾರ ಪರಿವಾರದ ವತಿಯಿಂದ ಗೌರವಿಸುವ ಕಾರ್ಯ ಮಾಡಲಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ರೇಣುಕಾ ಎಸ್.ಹೂಗಾರ, ಪ್ರೇಮಿಲಾಬಾಯಿ ಎ.ಹೂಗಾರ, ಅಡಿವೆಪ್ಪ ಹೂಗಾರ, ಶಾರದಾಬಾಯಿ ಎಂ.ಹೂಗಾರ, ಮಹಾದೇವಪ್ಪ ಹೂಗಾರ, ಮನೋಜಕುಮಾರ, ಪ್ರವೀಣ, ವಿನಯ, ಮಹೇಶ್, ಸಿದ್ದಣ್ಣ, ಎಚ್.ಬಿ.ಪಾಟೀಲ, ನರಸಪ್ಪ ಬಿರದಾರ ದೇಗಾಂವ, ಹಣಮಂತರಾಯ ಎಸ್.ಅಟ್ಟೂರ್, ಬಾಲಕೃಷ್ಣ ಕುಲಕರ್ಣಿ, ರಾಜೇಶ ನಾಗಭುಜಂಗೆ, ರಮೇಶ ಕೋರಿಶೆಟ್ಟಿ, ಡಿ.ವಿ.ಕುಲಕರ್ಣಿ, ಸೂರ್ಯಕಾಂತ ಸಾವಳಗಿ, ವೀರೇಶ ಬೋಳಶೆಟ್ಟಿ ನರೋಣಾ, ಶಿವಕಾಂತ ಚಿಮ್ಮಾ, ಚಂದ್ರಕಾಂತ ತಳವಾರ, ಬಸವರಾಜ ಹೆಳವರ, ಮಹಾದೇವಯ್ಯ ಹಿರೆಮಠ, ಶ್ರೀನಿವಾಸ ಬುಜ್ಜಿ, ಮಲಕಾರಿ ಪೂಜಾರಿ, ದಿಲಿಪ ಬಕರೆ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
   ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ : ವಿ.ಕೆ.ಪಾಟೀಲ(ನ್ಯಾಯಾಂಗ), ನೀಜಪ್ಪ ಪತ್ರ(ಬ್ಯಾಂಕ್), ಚನ್ನಬಸಪ್ಪ ಮೋಳಕೇರಿ(ಶಿಕ್ಷಣ), ಬಾಬುರಾವ ಹಂದ್ರಾಳ್(ಶಿಕ್ಷಣ), ಬಸವರಾಜ ವಿಭೂತೆ(ಪಂಚಾಯತ ರಾಜ್ ಇಲಾಖೆ), ಮಹೇಶ ಗುಳೆ(ಜೆಸ್ಕಾಂ),ಅಬ್ದುಲ್ ರಶೀದ್(ನಿವೃತ್ತ ಹಿರಿಯ ಸಹಾಯಕ ಅಧಿಕಾರಿ), ಮಾದಣ್ಣ ಹೂಗಾರ(ಆರೋಗ್ಯ), ಭಗವಂತಪ್ಪ(ಬ್ಯಾಂಕ್) ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.