ಸಾದಾಪೂರು ಶಾಲಾ ವಿದ್ಯಾರ್ಥಿಗಳಿಗೆ ಯೋಗ ಶಿಬಿರ

ಮಾನ್ವಿ,ಮಾ.೦೪- ತಾಲೂಕಿನ ಸಾದಾಪೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ದಿನದ ಯೋಗ ತರಬೇತಿಯನ್ನು ನೀಡಿ ಮಕ್ಕಳಿಗೆ ಮಾನಸಿಕ ಸಾಮರ್ಥ್ಯವನ್ನು ಹೆಚ್ವಿಸುವ ಉದ್ದೇಶವಿದೆ ಎಂದು ತರಬೇತುದಾರ ಅನ್ನದಾನಯ್ಯ ಸ್ವಾಮಿ ಹೇಳಿದರು.
ಮುಂಜಾನೆ ೯:೩೦ ರ ಸಮಯಕ್ಕೆ ಮಕ್ಕಳಿಗೆ ಯೋಗಾಭ್ಯಾಸ ಹಾಗೂ ಪ್ರಾಣಮಾಯದ ಜೊತೆಗೆ ಪಂಚಯ, ವೃಕ್ಷಾಸಾನ, ಪಾದ ಅಸ್ತಸಾನ, ಅರ್ಧಚಂಕ್ರಸಾನ, ಗರುಡಾಸನ, ಸೇರಿದಂತೆ ಅನೇಕ ಯೋಗಾಭ್ಯಾಸ ಮಾಡಿಸಿದ ನಂತರ ಮಾತಾನಾಡಿ ಇಂದಿನ ಮಕ್ಕಳಿಗೆ ಯೋಗದ ಕುರಿತು ಮಾಹಿತಿ ಪಡೆಯುವುದು ಪ್ರತಿನಿತ್ಯ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ನಂತರ ಶಿಕ್ಷಕರು,ಆಡಳಿತ ಮಂಡಳಿ,ಗ್ರಾಮಸ್ಥರಿಂದ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಶಿಕ್ಷಕರಾದ ಗೀತಾ,ಬೀಮಪ್ಪ ಎಸ್,ಚಂದಮ್ಮ,ಈರಾವತಿ,ಹನುಮಂತ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.