ಸಾತ್ವಿಕನನ್ನು ತೊಟ್ಟಿಲಿಗೆ ಹಾಕಿ ಆಶಿರ್ವಧಿಸಿದ ಕಲ್ಲಿನಾಥ ದೇವರು

ಕೊಲ್ಹಾರ:ಏ.16: ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ಬಿದ್ದು ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದ ಮಗು ಸಾತ್ವಿಕನನ್ನು ಪಟ್ಟಣದ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ತೊಟ್ಟಿಲಿಗೆ ಹಾಕಿ ಹರಕೆ ತೀರಿಸಿ ಆಶಿರ್ವಧಿಸಿದರು.

ಲಚ್ಯಾಣ ಗ್ರಾಮದ ಸತೀಶ್, ಪೂಜಾ ದಂಪತಿಯ ಪುತ್ರ ಸಾತ್ವಿಕ ಆಟವಾಡುತ್ತಿದ್ದ ಸಂದರ್ಭ ಕೊಳವೆ ಬಾವಿಗೆ ಜಾರಿ ಬಿದ್ದಿದ್ದ, ಸಾತ್ವಿಕ ಬದುಕಿ ಬರಲು ಇಡೀ ರಾಜ್ಯವೇ ಪ್ರಾರ್ಥಿಸಿತ್ತು ಅಂತಹ ಸಂದರ್ಭದಲ್ಲಿ ಪಟ್ಟಣದ ಆರಾಧ್ಯ ದೈವ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಕೂಡ ಸಾತ್ವಿಕ ಬದುಕಿ ಬರಲು ದಿಗಂಬರೇಶ್ವರ ದೇವರಲ್ಲಿ ಹರಕೆ ಹೊತ್ತು ಶ್ರೀಮಠದಲ್ಲಿ ತೊಟ್ಟಿಲಿಗೆ ಹಾಕುವ ಮೂಲಕ ಆಶಿರ್ವಧಿಸುವುದಾಗಿ ಬೇಡಿಕೊಂಡಿದ್ದರು
ಆ ಪ್ರಯುಕ್ತ ಕಲ್ಲಿನಾಥ ದೇವರು ಸಾತ್ವಿಕನನ್ನು ತೊಟ್ಟಿಲಿಗೆ ಹಾಕುವ ಮೂಲಕ ಹರಕೆ ತೀರಿಸಿ ಸಾತ್ವಿಕ ಮುಂದೆ ಜಗವ ಬೆಳಗಲಿ ಎಂದು ಆಶಿರ್ವಧಿಸಿದರು.
ನೂರಾರು ಜನ ಈ ದೃಶ್ಯ ಕಣ್ತುಂಬಿಕೊಂಡರು.