ಸಾತಲಗಾಂವದಲ್ಲಿ ನಿಂಬೆ ಬೆಳೆಗೆ ಅರ್ಕಾ ಸಿಂಪಡಣೆ

ಇಂಡಿ:ಜು.19: ನಿಂಬೆ ಜಾತಿಯ ಹಣ್ಣುಗಳನ್ನು ಚೆನ್ನಾಗಿ ನೀರು ಬಸಿದುಹೋಗುವ

ಆಳವಾದ ಮಣ್ಣಿನಲ್ಲಿ ಬೆಳೆಯಬಹುದಾಗಿದ್ದು, ಅಧಿಕ ಮತ್ತು ಉತ್ತಮ

ಗುಣಮಟ್ಟ ಇಳುವರಿಗಾಗಿ ಪಡೆಯಬಹುದು ಎಂದು ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಹೇಳಿದರು.

ತಾಲೂಕಿನ ಸಾತಲಗಾಂವ ಗ್ರಾಮದಲ್ಲಿ ನಿಂಬೆ ಬೆಳೆಗೆ ಅರ್ಕಾ ಸಿಂಪಡಣೆಯ ಕುರಿತು ನಡೆದ ರೈತರ ಕ್ಷೇತ್ರೋತ್ಸವದಲ್ಲಿ ಮಾತನಾಡುತ್ತಿದ್ದರು.

ವಿಜ್ಞಾನಿ ಪ್ರಕಾಶ ಮಾತನಾಡಿ ಅರ್ಕಾ ಪ್ರಮುಖ ಲಘು ಪೋಷಕಾಂಶಗಳಾದ ಬೋರಾನ್,

ಮ್ಯಾಂಗನೀಸ್, ಸತು, ಕಬ್ಬಿಣ ಮತ್ತು ತಾಮ್ರಗಳಿಂದ ಕೂಡಿದ್ದು ಲಘು ಪೋಷಕಾಂಶಗಳ ಪದಾರ್ಥವಾಗಿದೆ ಎಂದರು.

ವಿಜ್ಞಾನಿ ಸವಿತಾ ಮಾತನಾಡಿ ಅರ್ಕಾ ಬಳಕೆ ನಿಂಬೆಗೆ ಬಹು

ಉಪಯುಕ್ತ. ಮಣ್ಣಿನಲ್ಲಿ ಸಾವಯವ ಅಂಶದ ಕೊರತೆ,

ರಸಗೊಬ್ಬರಗಳ ಹೆಚ್ಚಿನ ಬಳಕೆ ಮತ್ತು ಹೈಬ್ರೀಡ್ ತಳಿಗಳನ್ನು

ಬೆಳೆಯುವುದರಿಂದ ಮಣ್ಣಿಗೆ ಲಘು ಪೋಷಕಾಂಶಗಳ ಅವಶÀ್ಯಕತೆ

ಹೆಚ್ಚಾಗುತ್ತಿದೆ ಎಂದರು. ಅರ್ಕಾ ನಿಂಬೆ ಸ್ಪೆಷಲ್ ಪೋಷಕಾಂಶಗಳ ಮಿಶ್ರಣ ದ್ರಾವಣವನ್ನು ಎಲೆಗಳ ಮೇಲೆ ಸಿಂಪರಣೆ ಮಾಡಿ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿಯನ್ನು ಪಡೆಯಬಹುದು ಎಂದರು.

ಡಾ. ವೀಣಾ ಚಂದಾವರಿ ಮಾತನಾಡಿ ಅರ್ಕಾ 20 ಲೀಟರ್ ನೀರಿಗೆ 15 ಗ್ರಾಮ ಹಾಕಿ ಸ್ಪ್ರೇ ಮಾಡಿದರೆ ಉತ್ತಮ ಇಳುವರಿ ನೀಡುತ್ತದೆ. ಲಘು ಪೋಷಕಾಂಶಗಳನ್ನು ನಿಂಬೆ ಬೆಳೆಗೆ ಒದಗಿಸಲು, ಅರ್ಕಾ ನಿಂಬೆ ಸ್ಪೆಷಲ್ ಎಂಬ ಲಘು ಪೋಷಕಾಂಶಗಳ ಮಿಶ್ರಣವನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು

ಇವರುಗಳು ಅಭಿವೃದ್ಧಿ ಪಡಿಸಿದ್ದಾರೆ. ಸದರಿ ಉತ್ಪನ್ನವನ್ನು ತಯಾರಿಸಿ ಮಾರಾಟ

ಮಾಡಲು ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಇಂಡಿಯು ಪರವಾನಗಿ/ಲೈಸನ್ಸ

ಪಡೆದಿರುತ್ತದೆ. ಸದರಿ ಅರ್ಕಾ ನಿಂಬೆ ಸ್ಪೆಷಲ್‍ನ್ನು ಕೃಷಿ ವಿಜ್ಞಾನ ಕೇಂದ್ರ,

ಇಂಡಿಯಲ್ಲಿ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ರೈತರು ಇದರ

ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅರ್ಕಾ ನಿಂಬೆ ಸ್ಪೆಷಲ್ ಪೋಷಕಾಂಶಗಳ ಮಿಶ್ರಣ ದ್ರಾವಣವನ್ನು

ಎಲೆಗಳ ಮೇಲೆ ಸಿಂಪರಣೆ ಮಾಡಿ ಉತ್ತಮ ಗುಣಮಟ್ಟದ ಹಾಗೂ ಅಧಿಕ

ಇಳುವರಿಯನ್ನು ಪಡೆಯಬಹುದು ಎಂದರು.

35 ರೈತರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು.