
ರಾಯಚೂರು,ಏ.೧೪- ಜಿಲ್ಲೆಯ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ಸಾಜಿದ ಸಮೀರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ,ಎಂದು ರಾಯಚೂರು ನಗರ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ವಡವಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಏಳು ತಾಲೂಕುಗಳಲ್ಲಿ ಅಲ್ಪಸಂಖ್ಯಾತರ ಸಮುದಾಯ ಹೆಚ್ಚಾಗಿರುತ್ತದೆ ಆದಕಾರಣ ಜಿಲ್ಲೆಯಲ್ಲಿ ೧೯೫೭ ರಿಂದ ಇಂದಿನವರೆಗೆ ಅಲ್ಪಸಂಖ್ಯಾತರ ಟಿಕೆಟ್ ನೀಡುತ್ತಲೇ ಬಂದಿದೆ ಕಾಂಗ್ರೆಸ್ ಸರ್ಕಾರಕ್ಕೆ ನಾವು ಋಣಿಯಾಗಿದ್ದೇವೆ.
ಕೆಲವು ದಿನಗಳ ಹಿಂದೆ ಒಬ್ಬ ವ್ಯಕ್ತಿ ಜಿಲ್ಲೆಯ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ಅಧಿಕಾರ ದುರುಪಯೋಗ ಮಾಡಿ ಅಲ್ಪಸಂಖ್ಯಾತರ ಟಿಕೆಟ್ ಅನ್ನು ನೀಡಬಾರದು ಎಂದು ಹೇಳಿಕೆ ನೀಡಿರುವುದು ವಿಷಾಧಕರವಾಗಿದೆ, ಇವರನ್ನು ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರು ನಿಭಾಯಿಸುವಲ್ಲಿ ವ್ಯರ್ತರಾಗಿದ್ದಾರೆ. ಇವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಗೊಳಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಿ ವಿನಾಯಕ ಅವರಿಗೆ ಮನವಿ ಮಾಡುತ್ತೇನೆ ಎಂದು ರಾಯಚೂರು ನಗರ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ವಡವಟ್ಟಿ ತಿಳಿಸಿದರು.