
ರಾಯಚೂರು, ಮಾ.೨೭- ಭೂಮಿ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಭೂ ವಂಚಿತ ಸಾಗುವಳಿದಾರರಿಗೆ ಪಟ್ಟ ನೀಡಬೇಕು. ನಿರ್ಲಕ್ಷ ಮುಂದುವರಿದರೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮತಿ ಅಧಿಕಾರಿಗಳಿಗೆ
ಎಚ್ಚರಿಕೆ ನೀಡಿದರು.ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ
ಅಧಿಕಾರಿ ಮತ್ತು ಜನಪ್ರತಿನಿದಿನಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಘೋಷಣೆ ಒಳಗಡೆ ಭೂ ವಂಚಿತ ರೈತರಿಗೆ ಪಟ್ಟ ನೀಡಬೇಕು ಎಂದು ಎಚ್ಚರಿಕೆ ನೀಡಿದರು.ಭೂಮಿ ಹಕ್ಕುಪತ್ರಕ್ಕಾಗಿ ಭೂಮಿ ಸಾಗುವಳಿದಾರರು ದಶಕಗಳಿಂದ ಕಾಯುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಬದಲಾದಂತೆ ಅರ್ಜಿಗಳ ಸಂಖ್ಯೆಯೂ ಬದಲಾಗಿ ಫಾರಂ ನಂ.೫೦, ೫೩ ಹಾಗೂ ಇತ್ತೀಚೆಗೆ ೫೭ರಲ್ಲಿ ರೀತಿಯ ಎಲ್ಲಾ ನಂಬರ್‌ಗಳ ಅರ್ಜಿಗಳನ್ನು ಸಲ್ಲಿಸಿದರೂ ಅಧಿಕಾರಿಗಳು ಕುಂಟು ನೆಪ ಹೇಳುತ್ತಾ ಕಾಲ ಹರಣ ಮಾಡಿದ್ದು ಬಿಟ್ಟರೆ ಭೂರಹಿತರಿಗೆ ಏನು ದಕ್ಕಲಿಲ್ಲ. ಬಡವರಿಗೆ ಭೂಮಿ ಕೊಡಿ ಎಂದರೆ, ಭೂಮಿ ಇಲ್ಲ ಎಂದು ಹೇಳುವ ಸರ್ಕಾರಗಳು ಕಂಪನಿಗಳು, ಟ್ರಸ್ಟ್, ಮಠಗಳಿಗೆ, ಶ್ರೀಮಂತರಿಗೆ ಒಂದೇ ದಿನದಲ್ಲಿ ಎಷ್ಟು ಬೇಕಾದರು ಭೂಮಿ ನೀಡುತ್ತಿದೆ. ಸಾಲದೆಂದು ಆಹಾರ ಬೆಳೆದು ದೇಶಕ್ಕೆ ಅನ್ನ ನೀಡುವ ಫಲವತ್ತಾದ ಭೂಮಿಗಳನ್ನೇ ಅಭಿವೃದ್ಧಿ ಹೆಸರಲ್ಲಿ, ಕೈಗಾರಿಕೆಯ ಹೆಸರಲ್ಲಿ ಬಲವಂತವಾಗಿ ವಶಪಡಿಸಿಕೊಳ್ಳುವ ನೀಚ ಕೃತ್ಯಕ್ಕೂ ಕೈಹಾಕಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾಡಿದರು.
ಸಾಗುವಳಿ ಮಾಡಿಕೊಂಡು ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಭೂಮಿಯ ಮಂಜೂರಾತಿ ನೀಡಬೇಕು. ಮತ್ತು ಸರ್ಕಾರಿ ಅಥವಾ ಇನ್ನಿತರೆ ಜಾಗದಲ್ಲಿ ನಗರ ಪ್ರದೇಶವನ್ನು ಒಳಗೊಂಡಂತೆ ವಾಸ ಮಾಡುತ್ತಿರುವ ಜಾಗಗಳಿಗೆ ಹಕ್ಕುಪತ್ರ ನೀಡಬೇಕು.
ಭೂಮಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಭೂಮಿಗಳನ್ನು ಸರ್ವೆ, ಜಿಪಿಎಸ್ ಮಾಡಿದ ನಂತರವೇ ಬಗರ್ ಹುಕುಂ ಸಮಿತಿಯ ಮುಂದೆ ಮಂಜೂರಾತಿಗಾಗಿ ಇಡಬೇಕು. ಈ ವಿಚಾರದಲ್ಲಿ ತಹಸೀಲ್ದಾರರೂ ಒಳಗೊಂಡಂತೆ ಭೂಮಿಯ ವಾಸ್ತವದ ಬಗ್ಗೆ ತಿಳಿದುಕೊಳ್ಳಲು ಕಾರ್ಯನಿರ್ವಹಿಸುತ್ತಿಲ್ಲ ಕಛೇರಿಯಿಂದಲೇ ಅಂದಾಜಿ ಮೇಲೆ ನಿರ್ಧರಿಸುತ್ತಿದ್ದಾರೆ ಇದನ್ನು ಸರಿಪಡಿಸಬೇಕು.
ಈ ಮೇಲಿನ ಸಮಸ್ಯೆಗಳನ್ನು ಕಾಲ ಮಿತಿಯೊಳಗೆ ಬಗೆ ಹರಿಸಲು ಕ್ರಮತೆಗೆದುಕೊಳ್ಳಬೇಕು.
ಈಗಾಗಲೇ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ಅಥವಾ ವಾಸ ಮಾಡುತ್ತಿರುವ ರೈತರನ್ನುಜನರನ್ನು ಒಕ್ಕಲೇಳೆಸಬಾರದು. ಈ ಎಲ್ಲಾ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಬಗೆ ಹರಿಸಲು ಪಾರದರ್ಶಕತೆ ಮತ್ತು ಜಾರಿಗಾಗಿ ಜಿಲ್ಲಾ ಮಟ್ಟದಲ್ಲಿ ಹೋರಾಟಗಾರರನ್ನೊಳಗೊಂಡ ಅಧಿಕಾರಿಗಳ ಸಭೆ ಕರೆಯಬೇಕು,