ಸಾಗನೂರ;ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ಆಚರಣೆ

ಅಫಜಲಪುರ,ನ.22- ತಾಲ್ಲೂಕಿನ ಸಾಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮಕ್ಕಳ ದಿನಾಚರಣೆ ನಿಮಿತ್ತವಾಗಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಬಂದೇನವಾಜ್, ಅತಿಥಿ ಶಿಕ್ಷಕರಾದ ಹನುಮಂತ್ ಸಿಂಗೆ, ಸಂಜು ಕುಮಾರ್, ಶಂಕರ್ ಕುಲಕರ್ಣಿ, ಚಂದ್ರಕಾಂತ ಉಕ್ಲಿ, ಸುವರ್ಣಾ ಹಾಗೂ ಗ್ರಾಮದ ಪ್ರಮುಖರು ಸೇರಿದಂತೆ ಶಾಲೆಯ ಮಕ್ಕಳು ಹಾಜರಿದ್ದರು.