
ಧಾರವಾಡ,ಮೇ.16: “ಕಲೆಯೇಜೀವನ, ಜೀವನವೇ ಕಲೆ” ಎಂದು ಬದುಕಿದ ಡಿ.ವಿ. ಹಾಲಭಾವಿಯವರು ಈ ನಾಡಿನಒಬ್ಬ ಶ್ರೇಷ್ಠ ಕಲಾಚೇತನಎಂದು ಚಲನಚಿತ್ರ ನಟ, ನಾಟಕಕಾರರಾದಡಾ. ಗೋವಿಂದ ಮಣ್ಣೂರಅಭಿಪ್ರಾಯಪಟ್ಟರು.
ಅವರು ಕ.ವಿ.ವ. ಸಂಘದಲ್ಲಿಧಾರವಾಡದ “ಶ್ರೀ ದಾನೇಶ್ವರಿಆಟ್ರ್ಸ್ ಸಿದ್ದಪಡಿಸಿದ್ದ ಕಲಾಗುರು ಡಿ.ವಿ. ಹಾಲಭಾವಿ ಅವರಜೀವನಾಧಾರಿತ ಸಾಕ್ಷ್ಯಚಿತ್ರದ ಬಿಡುಗಡೆಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಿ.ವ್ಹಿ. ಹಾಲಭಾವಿಯವರುಒಬ್ಬಉತ್ತಮಚಿತ್ರಕಲಾ ಶಿಕ್ಷಕರು ಮಾತ್ರವಲ್ಲ,ಅವರುಅಂತಾರಾಷ್ಟ್ರೀಯ ಮಟ್ಟದಖ್ಯಾತಚಿತ್ರಕಲಾವಿದರೂ ಹೌದು. ಅವರು ಬಿಡಿಸಿದ ಅನೇಕ ಕಲಾ ಕೃತಿಗಳು ದೇಶ ವಿದೇಶಗಳಲ್ಲಿ ಪ್ರದರ್ಶನಗೊಂಡಿವೆ. ಅವರು 1935ರಲ್ಲಿ ಧಾರವಾಡದಲ್ಲಿ ಸ್ಥಾಪಿಸಿದ ಸ್ಕೂಲ ಆಫ್‍ಆರ್ಟ್ ಎಂಬ ಕಲಾಶಾಲೆ ರಾಷ್ಟ್ರಮಟ್ಟದಲ್ಲಿಯೇ ಒಳ್ಳೆಯ ಹೆಸರನ್ನುತಂದಿತು.ಇಂದುಅಲ್ಲಿಕಲಿತ ಸಹಸ್ರಾರು ವಿದ್ಯಾರ್ಥಿಗಳು ಶ್ರೇಷ್ಠ ಕಲಾವಿದರಾಗಲುಕಾರಣವಾಯಿತು.ಈ ಶಾಲೆ ಕರ್ನಾಟಕದಲ್ಲೇ ಪ್ರಪ್ರಥಮ ಕಲಾಶಾಲೆ ಎಂದುಕೀರ್ತಿಗೆ ಪಾತ್ರವಾಗಿದೆ.ಅವರಜೀವನಾಧಾರಿತ ಸಾಕ್ಷ್ಯಚಿತ್ರ ಅನೇಕ ಚಿತ್ರಕಲಾ ಶಿಕ್ಷಕರಿಗೆ ಪ್ರೇರಣೆಯಾಗಿದೆ. ಕಲೆ ಹಾಗೂ ಚಿತ್ರಕಲಾವಿದರಿಗೆ ಸರ್ಕಾರದ ಪ್ರೋತ್ಸಾಹಅಗತ್ಯವಾಗಿದೆಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಹಿರಿಯ ಸಾಹಿತಿ ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಡಿ.ವ್ಹಿ. ಹಾಲಭಾವಿ ಅವರದು ಬಹುಮುಖ ಪ್ರತಿಭೆ. ಅವರುಚಿತ್ರಕಲಾಕ್ಷೇತ್ರದಇತಿಹಾಸ ಪುರುಷರು. ಅವರಲ್ಲಿದ್ದ ಶಿಸ್ತು, ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆ ವಿದ್ಯಾರ್ಥಿಗಳಿಗೆ ಮಾದರಿಯಾಗಿತ್ತು.ಜೀವನಕೊನೆವರೆಗೂಕಲೆಯನ್ನೇ ಉಸಿರಾಗಿಸಿಕೊಂಡಿದ್ದ ‘ಕಲಾಭೀಷ್ಮ’ ಎಂದುಖ್ಯಾತಿ ಪಡೆದಿದ್ದಾರೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದ ಮಾತನಾಡಿ, ಧಾರವಾಡವು ಕಲೆ, ಸಾಹಿತ್ಯ, ಸಂಗೀತಕ್ಷೇತ್ರದಲ್ಲಿತನ್ನದೇ ಸ್ಥಾನ ಪಡೆದಿದೆ.ಚಿತ್ರಕಲಾಕ್ಷೇತ್ರಕ್ಕೆಅಪಾರಕೊಡುಗೆ ನೀಡಿದ ಶ್ರೇಯಸ್ಸು ಡಿ.ವಿ. ಹಾಲಭಾವಿಯವರಿಗೆ ಸಲ್ಲುತ್ತದೆಎಂದು ಹೇಳಿದರು.
ಶ್ರೀ ದಾನೇಶ್ವರಿಆಟ್ರ್ಸ್‍ನ ಸುರೇಶ ಹಾಲಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಿ.ವಿ. ಹಾಲಭಾವಿ ಜೀವನಾಧಾರಿತ ಸಾಕ್ಷ್ಯಚಿತ್ರ ಸಿದ್ಧಪಡಿಸಿದ ಕಾರ್ತಿಕ ಶಿಂಧೆ ಅವರನ್ನು ಹಾಲಭಾವಿ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.
ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು.ವೀರಣ್ಣಒಡ್ಡೀನ ನಿರೂಪಿಸಿದರು.ಡಾ. ಪಾರ್ವತಿ ಹಾಲಭಾವಿ ವಂದಿಸಿದರು.ಕಾರ್ಯಕ್ರಮದಲ್ಲಿಶಂಕರ ಕುಂಬಿ, ಎಂ.ಎಸ್. ನರೇಗಲ್, ಸಚಿನ್ ಹಾಲಭಾವಿ, ಚಿತ್ರಾ ನಾಯಕ, ತಾತಾಸಾಹೇಬ ಭಾಂಗಿ, ಈಶ್ವರ ಜೋಶಿ, ಸುರೇಶಕುಲಕರ್ಣಿ, ವೇದಾರಾಣಿ, ದಾಸನೂರ, ದೇವಿ ಕಮ್ಮಾರ, ಶೀಲವಂತಕಿತ್ತೂರ, ಸೀತಾ ಛಪ್ಪರ, ನಿಂಗಣ್ಣಕುಂಟಿ ಸೇರಿದಂತೆ ಹಾಲಭಾವಿ, ಬೆಲ್ಲದ, ಜವಳಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.