ಸಾಕ್ಷರ ಸನ್ಮಾನ –ಮೂರು ದಿನಗಳ ತರಬೇತಿ ಕಾರ್ಯಕ್ರಮ

ಗುರುಮಠಕಲ್:ಜ.3: ಅನಕ್ಷರಸ್ಥ/ ನವಸಾಕ್ಷರ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಕ್ರಿಯಾತ್ಮಕ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಸಾಕ್ಷರತಾ ಬೋಧಕರುಗಳಿಗೆ ತರಬೇತುದಾರರ ತರಬೇತಿಯನ್ನು ಸಾಕ್ಷರ ಸನ್ಮಾನ ಎಂದು ಹೆಸರಿಸಿದ್ದು ಈ ಕಾರ್ಯಕ್ರಮ ದಿನಾಂಕ 02-01-2023 ರಿಂದ 04-01-2023 ರವರೆಗೆ ನಿರಂತರವಾಗಿ ಮೂರು ದಿನಗಳ ಕಾಲ ಆಯ ಗ್ರಾಮ ಪಂಚಾಯಿತಿಗಳಿಗೆ ನಿಯೋಜಿಸಿದ ಬೋಧಕರಿಗೆ ತರಬೇತಿ ಕಾರ್ಯಕ್ರಮವನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಈ ತರಬೇತಿ ಕಾರ್ಯಕ್ರಮಕ್ಕೆ ಮಾನ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಎಸ್ ಎಸ್ ಖಾದ್ರೋಳಿ ಅವರು ಚಾಲನೆ ನೀಡಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಕಾರ್ಯದರ್ಶಿ ಬ್ರಹ್ಮಯ್ಯ ಹಾಗೂ ಶರಣಪ್ಪ. ಬೋಧಕರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಹಳ್ಳಿ ಸಹಶಿಕ್ಷಕಿ ಯರಾದ ಶ್ರೀ ಮತಿ ರೇಖಾ. ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್.ಬಿ. ತಾಂಡಾ ಶ್ರೀ ಚಂದ್ರಕಾಂತ. ಕಾಂತಪ್ಪ ಇತರರು ಇದ್ದರು.