ಸಾಕ್ಷರತಾ ಸೇವಕಿ ಕೂಲಿಕಾರ್ಮಿಕೆ ಗ್ರಾ.ಪಂ. ಸದಸ್ಯೆ ಸನ್ಮಾನ

(ಸಂಜೆವಾಣಿ ವಾರ್ತೆ)
ಶಹಾಪುರ:ಜ.10:ಕಳೆದ ಎಂಟು ವರ್ಷಗಳಿಂದ ತನ್ನ ಮನೆ ಸುತ್ತಮುತ್ತ ಅನಕ್ಷರಸ್ತರಿಗೆ ಅಕ್ಷರ ಜ್ಞಾನ ನೀಡುವ ಸಾಕ್ಷರತಾ ಸ್ವಯಂ ಸೇವಕಿಯಾಗಿ ಅನಕ್ಷರಸ್ಥರ ಅಂದಕಾರವನ್ನು ಅಳಿಸಲು ಅವಿರತ ಶ್ರಮಸಿ ಕೊನೆಗೆ ಉದ್ಯೋಗ ಖಾತ್ರಿಯಲ್ಲಿ ನೊಂದವರಿಗೆ ಬೆನ್ನಲುಬಾಗಿ ಕೆಲಸ ಮಾಡಿದ ಕೂಲಿ ಕಾರ್ಮಿಕೆ ಬಿ.ಎ.ಪಧವಿದರೆ ಕುಮಾರಿ ಚಂದ್ರಾಮತಿಯವರು ಇತ್ತಿಚೆಗೆ ನೆಡೆದ ಗ್ರಾ.ಪಂ. ಚುನಾವಣೆಯಲ್ಲಿ ಸದಸ್ಯ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಕಾರ್ಮಿಕರು ಅಕ್ಷರ ಕಲಿತ ಸಾಕ್ಷಕರರು ಈ ಅಭ್ಯರ್ಥಿ ಚಂದ್ರಮತಿಗೆ ಬೆಂಬಲಕ್ಕೆ ನಿಂತು ಕೊನೆಗೆ ಜಯ ಸಾಧಿಸಿದರು.

ಪದವಿ ಪಡೆದುಕೊಂಡು ಉಧ್ಯೋಗ ಇಲ್ಲದೆ ಕಂಗಾಲಾದ ನಿರುದ್ಯೋಗಿ ಬದುಕು ಸಾಗಿಸುವದಕ್ಕಿಂತ ಕೂಲಿಕಾರ್ಮಿಕಳಾಗಿ ತನ್ನೊಂದಿಗೆ ಕಾರ್ಮಿಕರ ಮತ್ತು ಸಾಕ್ಷರರ ಗುಂಪು ಮಾಡಿಕೊಂಡು ಗ್ರಾಮಾಭಿವೃದ್ದಿಯತ್ತ ಸಾಗಿದ ಈ ಕುಮಾರಿ ಚಂದ್ರಮತಿ ಇಂದು ನೂತನ ಸದಸ್ಯರಾಗಿ ಆಯ್ಕೆಗೊಂಡಿರುವದಕ್ಕೆ ಸಾಕ್ಷರತಾ ಸಮಿತಿ ಹಾಗೂ ಯಾದಗಿರಿ ಜಿಲ್ಲಾ ಬಿಜೆಪಿ ಎಸ್.ಟಿ.ಘಟಕದಿಂದ ಗೌರವ ಸನ್ಮಾನಿಸಿಲಾಯಿತು.

ಯಾದಗಿರಿ ಜಿಲ್ಲಾ ಬಿಜೆಪಿ ಎಸ್.ಟಿ.ಮೊÀರ್ಚಾ ಅಧ್ಯಕ್ಷರಾದ ರಾಘವೆಂದ್ರ ಯಕ್ಷಂತಿ ಸಾಕ್ಷರತಾ ಸಮಿತಿ ಪ್ರೇರಕರಾದ ಮಲ್ಲಣ್ಣ ಹೊಸಮನಿ ಹಣಮಂತ ಕಸನ್ ರವರು ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ತನ್ನ ಅನಿಸಕೆ ವ್ಯಕ್ತಪಡಿಸಿದ ನೂತನ ಸದಸ್ಯೆ ಚಂದ್ರಮತಿಯವರು ದುರ್ಭಲರ ದ್ವನಿಯಾಗಿ ಕಾರ್ಮಿಕರ ಸಕ್ರೀಯ ಕಾರ್ಯಕರ್ತಳಾಗಿ ಸಾರ್ತಕ ಸೇವೆ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಕುಟುಂಬದ ಸದಸ್ಯರು. ಅಕ್ಕಪಕ್ಕದ ಮಹಿಳೆಯರು ಹಾಜರಿದ್ದರು.