ಸಾಕ್ಷರತಾ ಕಲಿಕೆ ಕೇಂದ್ರಗಳಿಗೆ ಉಮಾದೇವಿ ಸೊನ್ನದ್ ಭೇಟಿ


ಸಂಜೆವಾಣಿ ವಾರ್ತೆ
ಸಂಜೆವಾಣಿ ವಾರ್ತೆ ಕಾರಟಗಿ:ಏ:27: ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷತನಾದಾಗಲೇ ಒಂದು ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಸಂಪೂರ್ಣ ಸಾಕ್ಷರತಾ ಅಭಿಯಾನದ ಅಡಿಯಲ್ಲಿ ಸಾಕ್ಷರತಾ ಕಲಿಕಾರ್ಥಿಗಳಿಗೆ ವಿದ್ಯೆಯನ್ನು ಕಲಿಸುವ ಕಾರ್ಯ ಬಹಳ ಶ್ರೇಷ್ಟ ಕೆಲಸ. ಈ ಕಾರ್ಯ ವನ್ನು  ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರು ಸಾಕ್ಷರರಾಗಬೇಕೆಂದು ಕೊಪ್ಪಳ ಜಿಲ್ಲೆಯ ಸಾಕ್ಷರತಾ ಅಧಿಕಾರಿಗಳಾದ ಶ್ರೀಮತಿ ಉಮಾದೇವಿ ಸೊನ್ನದ ಅವರು ತಿಳಿಸಿದರು.
ಬುಧವಾರದಂದು ಅವರು ಬೂದಗುಂಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪೂರ್ಣ ಸಾಕ್ಷರತಾ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೂದಗುಂಪ, ಹಾಲಸಮುದ್ರ, ತಿಮ್ಮಾಪುರ ಗ್ರಾಮಗಳ ಕಲಿಕಾ ಕೇಂದ್ರಗಳ ಪರಿಶೀಲನೆಗೆ ಆಗಮಿಸಿ ಮಾತನಾಡಿದರು, ಅವರು ಎಲ್ಲಾ ಕಲಿಕಾರ್ಥಿಗಳ ಜೊತೆ ಸಂವಾದ ನಡೆಸಿ ಅವರ ಅಭಿಪ್ರಾಯವನ್ನು ಆಲಿಸಿ, ಅವರ ಸಂದೇಹಗಳಿಗೆ ಪರಿಹಾರ ನೀಡಿದರು. ಮತ್ತು ಕಲಿಯಲು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಚಂದ್ರಪ್ಪ ಬಂಡಿ, ಬೂದಗುಂಪ ಸಿ.ಆರ್.ಪಿ.ಮಂಜುನಾಥ ಚಿಕೇನಕೊಪ್ಪ, ಮುಖ್ಯ ಗುರುಗಳಾದ ಬಸವರಾಜ ರಾವಳದ. ಶಿಕ್ಷಕರಾದ ವಿಠ್ಠಲ್ ಬಾರಕೇರ. ಕಲಿಕಾ ಕೇಂದ್ರದ ಶಿಕ್ಷಕರಾದ ಶರಣಪ್ಪ ಜುಟ್ಲದ ಮತ್ತು ಎಲ್ಲಾ ಕಲಿಕಾ ಕೇಂದ್ರಗಳ ಶಿಕ್ಷಕ. ಶಿಕ್ಷಕಿಯರು ಕಲಿಕಾರ್ಥಿಗಳು ಹಾಜರಿದ್ದರು,