ಸಾಕಷ್ಟು ವಿದ್ಯುತ್ ಉತ್ಪಾದನೆಯಾದರು ವಿದ್ಯುತ್ ಕೊರತೆ:ಪರಿಹಾರಕ್ಕೆ ಜಿಗಜಿಣಗಿ ಆಗ್ರಹ

ವಿಜಯಪುರ 28- ರಾಜ್ಯದಲ್ಲೇ 30 ಸಾವಿರ ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ರೈತರ ಪಂಪಸೆಟ್ಟಗಳಿಗೆ ಮಾತ್ರ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಮುಖ್ಯ ಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಪ್ರಾವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರೈತರ ಪಂಪ ಸೆಟ್ಟ್‍ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಉತ್ತರ ಕರ್ನಾಟಕದ ರೈತರು ಪಂಪಸೆಟ್ಟ್‍ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕೆಇಬಿಯಿಂದ ರೈತರ ಪಂಪ ಸೆಟ್ಟ್‍ಗಳಿಗೆ 24 ಗಂಟೆಯಲ್ಲಿ ಕೇವಲ ಅರ್ಧ ಗಂಟೆ, ಇಲ್ಲವೇ 1 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ರೈತರ ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಬೇಡಿಕೆಗಿಂತ, ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಸಹಿತ ರೈತರಿಗೆ ವಿದ್ಯುತ್ ಸಮಸ್ಯೆಯಾಗುತ್ತಿದೆ. ಈ ಕುರಿತು ಪೋನ್ ಮೂಲಕ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.
ಇಡೀ ರಾಜ್ಯಕ್ಕೆ ವಿದ್ಯುತ್ ಬೇಡಿಕೆ ಇರುವುದು 14500 ಮೆ.ವ್ಯಾ ಮಾತ್ರ. ಆದರೆ ರಾಜ್ಯದಲ್ಲಿ ಆರ್‍ಟಿಪಿಸಿಯಿಂದ 1600 ಮೇ ವ್ಯಾ, ಕೊಡಗಿ ಥರ್ಮಲ್‍ನಿಂದ 2400 ಮೆ.ವ್ಯಾ, ಅಣುಶಕ್ತಿಯಿಂದ 2000 ಮೇ.ವ್ಯಾ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು 30,000 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆದರೂ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗುತ್ತಿದೆ. ಉತ್ಪಾದಿಸಿದ ವಿದ್ಯುತ್ ಎಲ್ಲಿಗೆ ಹೋಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.
ರೈತರು ನಮ್ಮನ್ನು ಹೊದ ಕಡೆಗೆಲ್ಲ ವಿದ್ಯುತ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಮೇಲಿಂದಲೇ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎನ್ನುವ ಸಬೂಬು ಹೇಳುತ್ತಿದ್ದಾರೆ. ವಿದ್ಯುತ್ ಖಾತೆ ಮುಖ್ಯಮಂತ್ರಿಗಳ ಹತ್ತಿರ ಇರುವುದರಿಂದ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುವಂತೆ ಮಾಡಬೇಕು ಎಂದರು.
ಅದರಂತೆ ಜಿಲ್ಲೆಗೆ 2 ಮಹತ್ವದ ಕುಡಿಯುವ ನೀರಿನ ಯೋಜನೆಗಳು ದೊರಕಿದ್ದು, ಅದರಲ್ಲಿ ಒಂದು ಕೇಂದ್ರ ಸರ್ಕಾರ ಜಲ ಜೀವನ ಮಿಷನ್ ಹಾಗೂ ಒಂದು ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಾಗಿದೆ.
ಜಲಧಾರೆ ಯೋಜನೆಯಲ್ಲಿ ಜಿಲ್ಲೆಯ 1035 ಜನವಸತಿ ಗ್ರಾಮೀಣ ಜನರಿಗೆ ದಿನಂಪ್ರತಿ 55 ಎಲ್‍ಪಿಸಿಡಿ ಶುದ್ಧ ಕುಡಿಯುವ ನೀರನ್ನು ಪೂರೈಸುವ ಯೋಜನೆಯಾಗಿದೆ.
ಕೇಂದ್ರದ `ಜಲ ಜೀವನ ಮಿಷನ್’ ಯೋಜನೆಯು ನಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ಪ್ರಧಾನಿಗಳು ಜಾರಿಗೆ ತಂದ ಯೋಜನೆಯಾಗಿದೆ. ದೇಶದ ಪ್ರತಿಯೊಂದು ಮನೆಗೆ ಕುಡಿಯುವ ನೀರನ್ನು ಕಲ್ಪಿಸಲು ಜಲ ಜೀವನ ಯೋಜನೆಯನ್ನು ಸುಮಾರ 5 ಲಕ್ಷ ಕೋಟಿ ವೆಚ್ಚದಲ್ಲಿ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಒಟ್ಟು 3,43,053 ಪ್ರತ್ಯೇಕ ಮನೆಗಳಿದ್ದು, ಈ ಪೈಕಿ 25053 ಮನರಗಳಿಗೆ ನಳಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಜಲ ಮಿಷನ್ ಯೋಜನೆ ಅಡಿಯಲ್ಲಿ 2020-21 ನೇ ಸಾಲಿನಲ್ಲಿ ಜಿಲ್ಲೆಯ ಒಟ್ಟು 298 ಜನವಸತಿಗಳಲ್ಲಿ ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯ ಒಟ್ಟು ಮೊತ್ತ 163.87 ಕೋಟಿ ರೂ.ಆಗಿದ್ದು, 2023 ಕ್ಕೆ ಯೋಜನೆ ಪೂರ್ಣಗೊಳ್ಳಲಿದೆ ಎಂದರು.

ಈ ಯೋಜನೆಯಲ್ಲಿ 197 ಜನರಿಗೆ ಈಗಾಗಲೇ ಟೆಂಡರ್ ನೀಡಲಾಗಿದ್ದು, ಇಷ್ಟೊತ್ತಿಗೆ ಕೆಲಸ ಪ್ರಾರಂಭವಾಗಬೇಕಿತ್ತು. ಆದರೆ ಕೇವಲ ಕೆಲವರು ಬಂದು ಪೂಜೆ ಮಾಡಲಿ ಎಂದು ಕಾಯಲಾಗುತ್ತಿದೆ. ಟೆಂಡರ್ ಪಡೆದವರು ಯಾರಿಗೂ ಕಾಯದೇ ಕಾಮಗಾರಿಯನ್ನು ಪ್ರಾರಂಭಿಸಬೇಕು ಒಂದು ವೇಳೆ ಹೀಗೆ ಕಾಯುತ್ತಿದ್ದರೆ, ನಾವು ಟೆಂಡರ್ ಪಡೆದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಟೆಂಡರ್ ಪಡೆದುಕೊಂಡವರಿಗೆ ಎಚ್ಚರಿಕೆ ನೀಡಿದರು. ಈಗಾಗಲೇ 17 ಕಾಮಗಾರಿಗಳು ಮುಕ್ತಾಯವಾಗಿವೆ 5 ತಾಲೂಕಿನ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಪರಿಶಿಲನೆ ಮಾಡುತ್ತೇನೆ ಎಂದರು.

ಆರ್‍ಓಬಿ….
ಇಬ್ರಾಹಿಂಪೂರ ಗೇಟ್ ಹತ್ತಿರ ನಡೆಯುತ್ತಿರು ಆರ್‍ಓಬಿ ಕಾಮಗಾರಿ ವಿಳಂಬದ ಬಗ್ಗೆ ಜೆಎಂ ಜೋತೆ ಮಾತನಾಡಿದ್ದೇನೆ. ಅಧಿಕಾರಿಗಳು ಹಾಗೂ ಟೆಂಡರ್‍ದಾರರ ಮಧ್ಯ ವೈಮನಸ್ಸಿನಿಂದಾಗಿ ಆರ್‍ಓಬಿ ಕಾಮಗಾರಿ ವಿಳಂಬವಾಗಿತ್ತು. ಈಗ ಎಲ್ಲವೂ ಸರಿಯಾಗಿದೆ ಇನ್ನು ಎರಡು ಮೂರೂ ದಿನಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು.

ಸಿಂದಗಿ ಟಿಕೇಟ್ ವರಿಷ್ಟರಿಗೆ ಬಿಟ್ಟದ್ದು…..
ಸಿಂದಗಿ ಉಪಚುನಾವಣೆಯ ಟಿಕೇಟ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಯಾರಿಗೂ ಟಿಕೇಟ್ ನೀಡುವಂತೆ ಶಿಪಾರಸ್ಸು ಮಾಡುವುದಿಲ್ಲ. ಪಕ್ಷದ ಹಿರಿಯ ನಾಯಕರು ಹಾಗೂ ವರಿಷ್ಟರು ಯಾರಿಗೆ ಸೂಚಿಸುತ್ತಾರೋ ಆ ಅಭ್ಯರ್ಥಿ ಬೆನ್ನು ಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ ಎಂದರು.

ಅವಧಿಗೂ ಮುನ್ನವೇ ಹಾರಲಿದೆ ವಿಮಾನ….
ವಿಮಾನ ನಿಲ್ದಾಣ ಟೆಂಡರ್‍ನಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಜಿಲ್ಲೆಗೆ ಎಷ್ಟು ಅವಶ್ಯಕವಾಗಿತ್ತು ಅಷ್ಟು ಸೌಲಭ್ಯದ ವಿಮಾನ ವ್ಯವಸ್ಥೆ ಮಾಡಲಾಗಿದೆ. ಕಾಮಗಾರಿಗೆ ವೇಗ ನೀಡಿ ನಿಗದಿಪಡಿಸಿರು ಅವಧಿಗೂ ಮೊದಲೇ ವಿಮಾನ ಹಾರುವಂತೆ ಮಾಡಲಾಗುತ್ತದೆ. ನಾನು ಆಗಾಗ ಕಾಮಗಾರಿ ಪರಿಶೀಲನೆ ಮಾಡುತ್ತೇನೆ ಆದಷ್ಟು ಬೆಗ ವಿಮಾನ ಹಾರಿಸಲಾಗುತ್ತದೆ ಎಂದರು.