ಸಾಂಸ್ಕøತಿಕ ಸ್ಪರ್ಧೆ-ರಕ್ತದಾನ ಶಿಬಿರ

ಧಾರವಾಡ, ನ4: ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ “ಕನ್ನಡ ರಾಜ್ಯೋತ್ಸವ”ದ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಭುವನೇಶ್ವರಿ ಮಾತೆಗೆ ಪುಷ್ಪನಮನ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ರೂಪಾಲಿ ಅವರಗೇರಿಮಠ ಇವರು ತಂದೆ-ತಾಯಿ, ನಾಡು-ನುಡಿಯ ಕುರಿತು ಅಭಿಮಾನ ಬೆಳಸಿಕೊಳ್ಳಬೇಕು ಎಂದು ನುಡಿದರು. ಮುಖ್ಯ ಅತಿಥಿಗಳಾದ ಶ್ರೀಮತಿ ಸುರೇಖಾ ಚಾಂದಗುಡಿ ಇವರು, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರ ಮೂಲಕ ಗುರಿ ಸಾಧಿಸಬೇಕು ಎಂದರು.
ನಂತರ ಮಾತನಾಡಿದ ಮಂಜುನಾಥ ಕೆ ಕುರಕುರಿ ಇವರು ಕರ್ನಾಟಕ ರಾಜ್ಯೋತ್ಸವ, ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ರಕ್ತದಾನ ಶಿಬಿರ ಈ ಮೂರರ ತ್ರಿವೇಣಿ ಸಂಗಮ ಈ ಕಾರ್ಯಕ್ರಮವಾಗಿದೆ ಎಂದು ನುಡಿದರು.
ದತ್ತಮೂರ್ತಿ ಕುಲಕರ್ಣಿ ಇವರು ರಕ್ತದಾನದ ಮಹತ್ವದ ಕುರಿತು ಮಾತನಾಡಿರು. ಕಾಂiÀರ್iಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ವೀಣಾ ಬಿರಾದಾರ ಮೇಡಂ ಇವರು ಕರ್ನಾಟಕ ರಾಜ್ಯೋತ್ಸವದ ಕುರಿತು ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭಾ ಅನಾವರಣಕ್ಕಾಗಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಮತ್ತು ಸಮಾಜ ಸೇವೆಯ ಕುರಿತು ಅರಿವು ಮೂಡಿಸಲು ಪ್ರತಿ ವರ್ಷದಂತೆ ಈ ವರ್ಷವೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ನುಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವೀಣಾ ಬಿರಾದಾರ ಮೇಡಂ, ಉದ್ಘಾಟಕರಾದ ಶ್ರೀಮತಿ ರೂಪಾಲಿ ಅವರಗೇರಿಮಠ, ಮುಖ್ಯ ಅತಿಥಿಗಳಾದ ಶ್ರೀಮತಿ ಸುರೇಖಾ ಚಾಂದಗುಡಿ, ನಿರ್ಣಾಯಕರಾದ ಮಂಜುನಾಥ ಕೆ ಕುರಕುರಿ ಮತ್ತು ಸಂಜೀವ ಕುಂದಗೋಳ, ರಾಷ್ಟ್ರೋತ್ಥಾನ ರಕ್ತನಿಧಿಯ ದತ್ತಮೂರ್ತಿ ಕುಲಕರ್ಣಿ, ಪ್ರಾಚಾರ್ಯರಾದ ನಾಗರಾಜ ಶಿರೂರ ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.