ಸಾಂಸ್ಕøತಿಕ ಸೌರಭ ಕಾರ್ಯಕ್ರಮ

ಬಾಗಲಕೋಟೆ,ನ.8 : ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕøತಿ ಹಾಗೂ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಮ್ಮಿಕೊಂಡ ಸಾಂಸ್ಕøತಿ ಸೌರಭ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಆಧುನಿಕ ಟಿವಿ ಬರಾಟೆಯಲ್ಲಿ ಕಲೆಗಳು ಮರೆಯಾಗುತ್ತಿವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ತಲೆ ಮಾರುಗಳಿಂದ ನಮ್ಮ ಕಲೆ ಮತ್ತು ಸಂಸ್ಕøತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ಮಾಡಲಾಗುತ್ತಿದೆ. ಇಂತಹ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವಿವಿಧ ಕಲೆಗಳನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ಆಟ, ಪಾಠದ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಆನಂದಿಸುವ ಕಾರ್ಯವಾಗಬೇಕು. ನಮ್ಮ ದೇಶ ಧರ್ಮ, ಸಂಸ್ಕøತಿ ಹಾಗೂ ಪರಂಪರೆಯನ್ನೊಳಗೊಂಡ ನಾಡಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಒಂದೇ ಸೂರಿನಡಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬನಶಂಕರಿ ದೇವಸ್ಥಾನ ಕಮಿಟಿಯ ಚೇರಮನ್ ಬಸವಂತಪ್ಪ ನಿಡಗುಂದಿ ಸೇರಿದಂತ ಪಟ್ಟಣ ಪಂಚಾಯತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಎಲ್ಲರನ್ನು ಸ್ವಾಗತಿಸಿ ಕೊನೆಗೆ ವಂದಿಸಿದರು. ಶಂಕರಲಿಂಗ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು.
ಜನರ ಕಣ್ಮನ ಸೆಳೆದ ಕಿತ್ತೂರ ಚನ್ನಮ್ಮ ನಾಟಕ
ಸಾಂಸ್ಕøತಿಕ ಸೌರಭದಲ್ಲಿ ಕಾರ್ಯಕ್ರಮದಲ್ಲಿ ಸಿರಿಗೇರಿಯ ಧಾಂತ್ರಿರಂಗ ಸಂಸ್ಥೆ ಶಿವರಾಜ ಮತ್ತು ತಂಡ ಬಳ್ಳಾರಿ ಅವರಿಂದ ಪ್ರದರ್ಶನಗೊಂಡ ಕಿತ್ತೂರ ಚನ್ನಮ್ಮ ನಾಟಕ ನೆರೆದ ಜನರ ಕಣ್ಮನ ಸೆಳೆಯಿತು. ಇದಲ್ಲದೇ ಬಸವರಾಜ ಭಜಂತ್ರಿ ಅವರಿಂದ ಶಹನಾಯಿ ವಾದನ, ಗಣೇಶ ರಾಯಬಾಗಿಯಿಂದ ಸುಗಮ ಸಂಗೀತ, ಮಲ್ಲಿಕಾರ್ಜುನ ಯರಗೇರಿ ತಂಡದಿಂದ ಜಾನಪದ ಗಾಯನ, ಲಕ್ಷ್ಮೀ ಗೌಡರ ತಂಡದಿಂದ ನೃತ್ಯ ರೂಪಕ, ಕರಡಿ ಮಜಲು, ಹಲಗಿ ಮಜಲು, ಡೊಳ್ಳಿನ ಕುಣಿತ ಕಾರ್ಯಕ್ರಮ ಜರುಗಿದವು.