ಸಾಂಸ್ಕøತಿಕ ವೈಭವದೊಂದಿಗೆ ಜರುಗಿದ ಅದ್ದೂರಿ ಮೆರವಣಿಗೆ

ಬಸವಕಲ್ಯಾಣ:ಮೇ.11: ಡಿಜೆ ಸೌಂಡ್ ಸಿಸ್ಟಮ್ ಎದುರು ವಚನಗಳ ಹಾಡಿಗೆ ನೃತ್ಯ, ಕುದುರೆಯ ಮೇಲೆ ಕುಳಿತು ವಿವಿಧ ಶರಣರ ವೇಷಧಾರಿ ಧರಿಸಿ ಗಮನ ಸೆಳೆದ ಯುವಕ, ಯುವತಿಯರು, ಬಾನೆತ್ತರಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಸವಾಭಿಮಾನಿಗಳು. ಮೊಳಗಿದ ಜೈಘೋóಗಳು ಹೌದು ಇಷ್ಟೆಲ್ಲ ನಗರದಲ್ಲಿ ಶುಕ್ರವಾರ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಕಂಡುಬಂದ ದೃಷ್ಯಗಳು
ಬಸವ ಜಯಂತಿ ನಿಮಿತ್ತ ಇಲ್ಲಿಯ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ಹಾಗೂ ವಿಶ್ವಸ್ಥ ಸಮಿತಿಯ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡ ಮಹಾತ್ಮಾ ಬಸವೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಜರುಗಿತು.
ಶುಕ್ರವಾರ ನಸುಕಿನ ಜಾವ 5ಕ್ಕೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗೋರ್ಟಾ (ಬಿ) ಗ್ರಾಮದ ನೀಲಮ್ಮನ ಬಳಗದ ವತಿಯಿಂದ ಬಸವಣ್ಣನವರ ಮೂರ್ತಿಗೆ ಅಷ್ಟಗಂಧ ಪೂಜೆಯ ನಂತರ ಬೆಳಿಗ್ಗೆ 7ಕ್ಕೆ ಬಸವಣ್ಣನವರ ಬೆಳ್ಳಿ ತೊಟ್ಟಿಲು ವಿವಿಧ ಕಲಾ ತಂಡಗಳ ಸಾಂಸ್ಕøತಿಕ ವೈಭವದೊಂದಿಗೆ ವೈಭವದೊಂದಿಗೆ ಮೆರವಣಿಗೆ ಜರುಗಿತು. ಮುಚಳಂಬನ ಶ್ರೀ ಪ್ರಣವಾನಂದ ಸ್ವಾಮೀಜಿ ಅವರು ಬೆಳ್ಳಿ ತೊಟ್ಟಿಲು ಪೂಜೆ ನೆರವೇರಿಸಿದರು. ನಂತರ ಬಿಕೆಡಿಬಿ ಆಯುಕ್ತ ರಮೇಶ ಕೋಲಾರ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ಶ್ರೀ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಕಾಳಿಗಲ್ಲಿಯ ಮೂಲಕ ಐತಿಹಾಸಿಕ ಕೋಟೆಯ ಮಾರ್ಗವಾಗಿ ಮುಖ್ಯ ರಸ್ತೆಯ ಮೂಲಕ ನಗರದ ಹರಳಯ್ಯ ವೃತ್ತದ ವರೆಗೆ ಆಗಮಿಸಿ ನಂತರ ಮತ್ತೆ ದೇವಸ್ಥಾನದವರೆಗೆ ಮರಳಿತು.
ಮೆರವಣಿಗೆಯ ಮುಂಭಾಗದಲ್ಲಿ ಅಲಂಕ್ರತಗೊಂಡ ತೆರೆದ ವಾಹನದಲ್ಲಿ ಬೆಳ್ಳಿ ತೊಟ್ಟಿಲು ವಾಹನ ಸಾಗಿದರೆ ಹಿಂಭಾಗದಲ್ಲಿ ತೆರೆದ ವಾಹನಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ನಂತರದಲ್ಲಿ ಬಾಬಾಸಾಹೇಬ ವಾರದ ಅವರ ಬ್ಯಾನರ್ ಹಾಕಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ತೆರೆ ವಾಹನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಶಾಲಾ ವಿದ್ಯಾರ್ಥಿಗಳಿಂದ ವಚನಗಳ ಹಾಡಿಗೆ ನಡೆದ ನೃತ್ಯ ನೋಡುಗರ ಕಣ್ಮನ ಸೆಳೆಯಿತು.
ಅಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಂಡ ಲಂಬಾಣಿ ಸಮಾಜದ ಮಹಿಳೆಯರು ತಮ್ಮ ಪಾರಂಪರಿಕ ನೃತ್ಯ ಮಾಡಿ ಗಮನ ಸೆಳೆದರೆ, ಸಾಗರ ತಾಲೂಕಿನಿಂದ ಆಗಮಿಸಿದ ಮಹಿಳಾ ತಂಡ ಡೊಳ್ಳು ಬಾರಿಸಿ ಗಮನ ಸೆಳೆದರು. ಜೊತೆಗೆ ಡಿಜೆ ಸೌಂಡ ಸಿಸ್ಟಮ್ ಎದುರು ವಚನಗಳ ಹಾಡಿಗೆ ನೆರೆದ ಯುವಕರ ಜೊತೆಗೆ ಶಾಸಕ ಶರಣು ಸಲಗರ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಶ್ರೀ ಬಸವೇಶ್ವರ ದೇವಸ್ಥಾನದ ಪದಾಧಿಕಾರಿಗಳು ಡ್ಯಾನ್ಸ್ ಮಾಢಿ ಸಂತಸಪಟ್ಟರು.
ಅಲ್ಲದೆ ಕುದುರೆಯ ಮೇಲೆ ಕುಳಿತ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿದಂತೆ ವಿವಿಧ ಶರಣರ ವೇಷಧಾರಿಗಳು ಮೆರವಣಿಗೆಗೆ ಮತ್ತಷ್ಟು ಮೆರಗು ಹೆಚ್ಚಿಸಿದರು. ಭಾಗವಹಿಸಿದ ಜನರು ತಲೆಯ ಮೇಲೆ ಟೋಪಿ ಧರಿಸಿ, ಬೆನ್ನಿನ ಹಿಂಭಾಗದಲ್ಲಿ ಷಟಸ್ಥಲದ ಸ್ಕಾರ್ಪ ಧರಿಸಿದರು. ಛತ್ರಿ, ಚಾಮರಗಳು ಕಂಡು ಬಂದವು.

ಮೆರವಣಿಗೆಯಲ್ಲಿ ಶಾಸಕ ಶರಣು ಸಲಗರ, ವಿಧಾನ ಪರಿಷತ್‍ನ ಮಾಜಿ ಸದಸ್ಯ ವಿಜಯಸಿಂಗ್, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ. ಜಿ.ಎಸ್ ಭೂರಳೆ ಹಾಗೂ ಬಿಡಿಪಿಸಿಯ ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ-ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ, ಮಲ್ಲಯ್ಯಾ ಹಿರೇಮಠ, ಅಶೋಕ ನಾಗರಾಳೆ, ಕಾಶೆಪ್ಪಾ ಸಕ್ಕರಬಾವಿ, ಜಗನ್ನಾಥ ಖೂಬಾ, ಭದ್ರಿನಥ ಪಾಟೀಲ, ಅನೀಲಕುಮಾರ ರಗಟೆ, ರೇವವಣಪ್ಪಾ ರಾಯವಾಡೆ, ವಿಜಯಲಕ್ಷ್ಮೀ ಗಡ್ಡೆ ಮತ್ತು ಬಿಡಿವಿಸಿಯ ಕಾರ್ಯದರ್ಶಿ ನಾಗಯ್ಯಾ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ವಿಶ್ವಸ್ಥರಾದ ಗದಗೆಪ್ಪಾ ಹಲಶೆಟ್ಟೆ, ಬಸವರಾಜ ಪಾಟೀಲ, ಸೋಮಶೇಖರ ವಸ್ತ್ರದ, ಮಲ್ಲಿಕಾರ್ಜುನ ಮಂಠಾಳೆ ಸೇರಿದಂತೆ ನಗರ ಸಭೆ ಪೌರಾಯುಕ್ತ ರಾಜು ಬಣಕರ, ಸಿಪಿಐ ಅಲಿಸಾಬ ಮತ್ತು ಪ್ರಮುಖರಾದ ಪ್ರದೀಪ ವಾತಾಡೆ, ರವಿ ಚಂದನಕೆರೆ, ಬಸವರಾಜ ಬಾಲಕಿಲೆ, ಬಸವರಾಜ ತೊಂಡಾರೆ ಅರ್ಜುನ ಕನಕ, ಮನೋಹರ ಮೈಸೆ, ರವಿ ಕೊಳಕೂರ, ಶಿವಕುಮಾರ ಬಿರಾದಾರ, ಜಗನ್ನಾಥ ಪಾಟೀಲ ಚಿಕನಾಗಾಂವ, ಸಂಗಮೇಶ ಅವಸೆ, ಸುನೀಲ ಹೊಳಕುಂದೆ ಸೇರಿದಂತೆ ಪ್ರಮುಖರು, ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.

ಮುಖ್ಯ ರಸ್ತೆಯ ಮೂಲಕ ಆಗಮಿಸಿದ ಮೆರವಣಿಗೆಯು ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಿದ ನಂತರ ಹುಲಸೂರನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯದ ಮೂಲಕ ಇಡೀ ವಿಶ್ವಕ್ಕೆ ಮಾನವೀಯ ಮೌಲ್ಯ ಸಾರಿದ ಸಾಂಸ್ಕøತಿಕ ನಾಯಕ, ವಿಶ್ವಗುರು ಬಸವಣ್ಣನವರು ಕಾಯಕ ಸಿದ್ದಾಂತ ಜೊತೆಗೆ ಸಮಾನತೆ ಸಾರಿ ಎಲ್ಲರೂ ನಮ್ಮವರು ಎಂದು ಅಪ್ಪಿಕೊಂಡ ಮಹಾನ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.
12ನೇ ಶತಮಾನದ ಬಸವಾದಿ ಶಿವಶರಣರ ವಚನಗಳು ಕೇವಲ ಕರ್ನಾಟಕಕ್ಕೆ ಸೀಮಿತಗೊಳ್ಳದೇ ದೇಶಾದ್ಯಂತ ಪ್ರಚಾರ-ಪ್ರಸಾರವಾಗಬೇಕು ಈ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳಬೇಕು ಜೊತೆಗೆ ಎಲ್ಲರ ಮನೆ-ಮನಗಳಳಲ್ಲಿ ಬಸವ ತತ್ವ ಅಳವಡಿಸಿಕೊಳ್ಳಬೇಕು ಎಂದರು.

ಬಸವಣ್ಣನನವರು ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮಿತರಲ್ಲ ಅವರು ಸಾಂಸ್ಕøತಿಕ ನಾಯಕ ಎಂದು ಸರಕಾಋ ಘೋಷಣೆ ಮಾಡಿದೆ ಆದರೆ ಅವರು ರಾಜ್ಯಕಷ್ಟೇ ಸಾಂಸ್ಕøತಿಕ ಅಲ್ಲ ಅವರು ವಿಶ್ವದ ಸಾಂಸ್ಕøತಿಕ ನಾಯಕರಾಗಿದ್ದಾರೆ ಎಂದ ಶ್ರೀಗಳು ವಿಶ್ವಗುರು ಬಸವಣ್ಣನವರು ಜಾತಿ, ಜನಾಂಗ ಪ್ರದೇಶಕ್ಕೆ ಸೀಮಿತರಲ್ಲ ಅವರು ವಿಶ್ವ ಸಾಂಸ್ಕøತಿಕ ನಾಯಕರು ಹೀಗಾಗಿ ಅವರ ಜಯಂತಿಯನ್ನು ರಾಜ್ಯ ಸರಕಾರದಿಂದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮವನ್ನು ಬಸವಕಲ್ಯಾಣದಲ್ಲಿ ರಾಜ್ಯ ಸರಕಾರದಿಂದಲೇ ಆಚರಿಸುವಂತಾಗಲಿ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು. ಸಾಯಂಗಾಂವನ ಶ್ರೀ ಶಿವಾನಂದ ಸ್ವಾಮೀಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಸವಕಲ್ಯಾಣದಲ್ಲಿ ನಡೆದ ಬೆಳ್ಳಿ ತೊಟ್ಟಿಲ ಮೆರವಣಿಗೆಯಲ್ಲಿ ಶಾಸಕ ಶರಣು ಸಲಗರ, ಮಾಜಿ ಎಮ್‍ಎಲ್‍ಸಿ ವಿಜಯಸಿಂಗ್ ಸೇರಿದಂತೆ ಪ್ರಮುಖರು ವಚನ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಯುವಕರಿಗೆ ಜೋಶ್ ತುಂಬಿದರು.