ಸಾಂಸ್ಕøತಿಕ ಪ್ರತಿನಿಧಿಯ ತೇಜೋವಧೆ ಖಂಡನೀಯ: ಅಂಗಡಿ

ಕೆಂಭಾವಿ:ಎ.22:ಯಾದಗಿರಿ ಜಿಲ್ಲೆಯಲ್ಲಿ ಸಾಂಸ್ಕøತಿಕ ವಲಯದ ಉಳಿಗಾಗಿ ಸಾಕಷ್ಟು ದುಡಿಯುತ್ತಿರುವ ಸಗರನಾಡು ಸೇವಾ ಪ್ರತಿಷ್ಠಾನದ ಮೇಲೆ ಯಾದಗಿರಿ ಜಿಪಂ ಅಧ್ಯಕ್ಷ ಸುಳ್ಳ ಆರೋಪ ಮಾಡಿ ಸಾಂಸ್ಕøತಿಕ ಪ್ರತಿನಿಧಿಯ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಎಚ್.ಶಿವರಾಮೇಗೌಡ ಬಣ) ದ ಜಿಲ್ಲಾಧ್ಯಕ್ಷ ಬಸವರಾಜ ಅಂಗಡಿ ಆಗ್ರಹಿಸಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕøತ ಇಲಾಖೆಯ ಸಚಿವ ಅರವಿಂದ ಅಂಬಾವಳಿ ಅವರಿಗೆ ಉಪತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದ ಅವರು, ಸುರಪುರ ತಾಲ್ಲೂಕು ಕನ್ನೇಳ್ಳಿ ಗ್ರಾಮದ ಸಗರನಾಡು ಸೇವಾ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಅಂಗಡಿ ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಿಂದ ಯಾದಗಿರಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗೂ ರಾಜ್ಯಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡು ನುಡಿ ಭಾಷೆ ಜೊತೆಗೆ ಸಾಂಸ್ಕøತಿಕ ಪರಂಪರೆ ಉಳಿವಿಗಾಗಿ ಶ್ರಮ ಪಡುತ್ತಾ ಬಂದಿರುವುದು ಜಿಲ್ಲೆಯ ಜನತೆ ಸೇರಿದಂತೆ ನಾಡಿನ ಜನತೆಗೂ ಚಿರ ಪರಿಚಿತವಾಗಿರುತ್ತದೆ. ಆದರೆ ಯಾದಗಿರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕನ್ನಡ ಮತ್ತು ಸಂಸ್ಕøತ ಇಲಾಖೆ ವತಿಯಿಂದ ಸಗರನಾಡು ಸೇವಾ ಸಂಸ್ಥೆಯು ಧನಸಹಾಯ ಪಡೆದು ಅನುದಾನ ದರಪಯೋಗ ಮಾಡಿಕೊಂಡಿದೆ ಎಂದು ಸುಳ್ಳು ಆರೋಪ ಮಾಡಿರುವುದಲ್ಲದೇ ಕೆಂಭಾವಿ ವಲಯದ ಸಂಘ ಸಂಸ್ಥೆಗಳ ಮೇಲೆಯು ಆರೋಪ ಮಾಡಿ ತನಿಖೆಗೆ ಆದೇಶಿಸಿರುವುದು ನೋಡಿದಾಗ ಇದು ಮೇಲ್ನೋಟಕ್ಕೆ ವೈಯಕ್ತಿಕವಾಗಿ ಸಂಸ್ಥೆಗಳ ಮೇಲೆ ಆರೋಪವನ್ನು ಮಾಡಿರುತ್ತಾರೆ ಎಂದು ಆರೋಪಿಸಿದ ಅವರು, ಸಗರನಾಡು ಸೇವಾ ಪ್ರತಿಷ್ಠಾನ ಕನ್ನಡ ಮತ್ತು ಸಂಸ್ಕøತ ಇಲಾಖೆಯಿಂದ 2016 ರಿಂದ 2019 ರವರೆಗೆ ಪ್ರತಿವರ್ಷದಂತೆ 50 ಸಾವಿರ ದಂತೆ ಇಲ್ಲಿಯವರೆಗೆ 4.5 ಲಕ್ಷ ರೂಪಾಯಿ ಅನುದಾನ ಪಡೆದಿದ್ದು, ಸಂಸ್ಥೆಯು ಹಮ್ಮಿಕೊಂಡ ಸಾವಿರಾರು ಕಾರ್ಯಕ್ರಮಗಳ ಸರಿದೂಗದ ಮೊತ್ತವಾಗಿರುತ್ತದೆ. 2016ರಲ್ಲಿ ಸಾಂಸ್ಕøತಿಕ ಭವನ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಯಿತು. ಅದರಂತಯೇ ಕನ್ನೇಳ್ಳಿ ಗ್ರಾಮದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಬೃಹದಾಕಾರದ ಕಟ್ಟಡವೇ ಅನುದಾನ ಬಳಕೆಗೆ ಸಾಕ್ಷಿಯಾಗಿ ನಿಂತಿದೆ. ಹೀಗಿದ್ದು, ಇದೆಲ್ಲವನ್ನು ಪರಗಣಿಸದೆ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ ಲಕ್ಷಾನುಗಟ್ಟಲೆ ಅನುದಾನ ಪಡೆದಿರುವ ಸಂಘ ಸಂಸ್ಥೆಗಳನ್ನು ಮರೆ ಮಾಚಿ ಉದ್ದೇಶ ಪೂರ್ವಕವಾಗಿ ಸಾಂಸ್ಕøತಿಕ ಬೆಳವಣಿಗೆ ಹಾಗೂ ಹಿರಿಮೆಯನ್ನು ಸಹಿಸದೇ ಜಿಪಂ ಅಧ್ಯಕ್ಷರು ಸುಳ್ಳು ಆರೋಪವನ್ನು ಮಾಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಜಿಪಂ ಅಧ್ಯಕ್ಷರು ಸಾಂಸ್ಕøತಿಕ ಕಾಳಜಿ ಇದ್ದರೆ ಜ್ಯಾತ್ಯಾತೀತ ಮನೋಭಾವ ತೋರಿ ಇಲಾಖೆಯ ಬೊಕ್ಕಸಕ್ಕೆ ಹಾನಿ ಮಾಡಿ ಪ್ರಬಲ ಮೊತ್ತದ ಅನುದಾನ ದುರಪಯೋಗ ಪಡಿಸಿಕೊಂಡಿರುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಬೇಕು ಹಾಗೂ ಸಾಂಸ್ಕøತಿಕ ಸೇವೆ ಮಾಡುತ್ತಿರುವ ಸಗರನಾಡು ಸೇವಾ ಸಂಸ್ಥೆಯ ವಿರುದ್ಧ ಉರುಳಿಲ್ಲದ ಆರೋಪವನ್ನು ಕೈ ಬಿಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸಾಹಿತಿ, ಸಾಂಸ್ಕøತಿಕ ಪ್ರತಿನಿಧಿಗಳು ಕಲಾವಿದ ಸಹಯೋಗದೊಂದಿಗೆ ಕನ್ನಡ ಪರ ಸಂಘಟನೆಗಳು ಜಿಲ್ಲಾ ಕೇಂದ್ರದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹುಣಸಗಿ ತಾಲ್ಲೂಕು ಅಧ್ಯಕ್ಷ ಗೋಪಾಲಸಿಂಗ ಹಜೇರಿ, ಉಪಾಧ್ಯಕ್ಷ ರಮೇಶರೆಡ್ಡಿ ಕೂಡಲಗಿ, ಮುದನೂರ ಗ್ರಾಮ ಘಟಕದ ಅಧ್ಯಕ್ಷ ಶಶಿಕುಮಾರ ಹಬ್ಬು, ರಾಂಪೂರ ಗ್ರಾಮ ಘಟಕದ ಅಧ್ಯಕ್ಷ ಶಶಿಕುಮಾರ ಹೊಸಮನಿ, ಕಾನೂನು ಸಲಹೆಗಾರ ಸುರೇಶ ಮಾಳಳ್ಳಿಕರ್, ತಿಪ್ಪಣ್ಣ ದೊಡ್ಡಮನಿ, ಬಸವರಾಜ ಯಮನೂರ ಸೇರಿದಂತೆ ಹಲವರು ಇದ್ದರು.