ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಬಿಸಿಲಿನ ಬೇಗುದಿ

ಮೈಸೂರು,ಏ.3:- ಅಬ್ಬಾ ಏನು ಬಿಸಿಲ್ರೀ, ಎಷ್ಟು ಸೆಕೆ, ತಲೆಯೂ ಸುಡತ್ತೆ, ಕಾಲೂ ಸುಡತ್ತೆ, ಇದು ಸದ್ಯ ಮೈಸೂರಿಗರ ಸ್ಥಿತಿ. ತಂಪಾಗಿರುತ್ತಿದ್ದ ಮೈಸೂರಿನಲ್ಲಿ ಈ ಬಾರಿ ಬಿಸಿಲ ಝಳ ಹೆಚ್ಚುತ್ತಿದೆ ಭೂಮಿ ಕಾದ ಕಾವಲಿಯಂತಾಗಿದೆ. ಜನರು ರಸ್ತೆ ಬದಿಯಲ್ಲಿ ನೆರಳು ಕಂಡ ಕಡೆ ಒಂದು ನಿಮಿಷ ಸುಧಾರಿಸಿಕೊಂಡು ಹೋಗೋಣ ಎನ್ನುವಷ್ಟರ ಮಟ್ಟಿಗೆ ಬಿಸಿಲಿನ ಬೇಗುದಿ ಮೈಸೂರಿನಲ್ಲಿ ಕಂಡು ಬಂದಿದೆ.
ಬೆಳ್ಳಂಬೆಳಿಗ್ಗೆ ಸೂರ್ಯ ಉದಯವಾಗುತ್ತಲೇ ಹೊರಬರುವ ಶಾಖಕ್ಕೆ ಜನ ಹೈರಾಣಾಗಿದ್ದಾರೆ. ಎಷ್ಟೇ ನೀರು ಕುಡಿದರೂ ತಣಿಯದ ದಾಹಕ್ಕೆ ಎಳ ನೀರು ,ಕಬ್ಬಿನ ಹಾಲು ,ಹಣ್ಣಿನ ರಸದ ಮೊರೆ ಹೋಗುತ್ತಿದ್ದಾರೆ. ಕೆಲವರು ರಸ್ತೆ ಬದಿಯಲ್ಲಿರಿಸಿ ಕೊಳ್ಳುವ ಹಣ್ಣಿನಂಗಡಿಯಲ್ಲಿ ಉಪ್ಪು ಖಾರ ಹಾಕಿಸಿಕೊಂಡು ಕಲ್ಲಂಗಡಿ ಹಣ್ಣು ತಿಂದರೆ ಕೆಲ ಗ್ರಾಹಕರು ಹಣ್ಣನ್ನು ಮನೆಗೆ ಕೊಂಡೊಯ್ಯುವುದು ಕಂಡು ಬರುತ್ತಿದೆ.
ಕೆಲವರು ನಗರದ ಪ್ರಮುಖ ಬೀದಿಗಳಲ್ಲಿ,ಖಾಲಿ ಜಾಗದಲ್ಲಿ ಕಲ್ಲಂಗಡಿ,ಎಳನೀರು ರಾಶಿ ಹಾಕಿ ಕೊಂಡು ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಮನೆಯಲ್ಲಿದ್ದವರು ಬಿಸಿಲಿನ ಬೇಗೆಯಿಂದ ತಂಪು ಮಾಡಿಕೊಳ್ಳಲು ಎಸಿ, ಫ್ಯಾನ್ ಮೊರೆಹೋದರೆ, ಹೊರಗಡೆ ಹೋಗುವ ಪಾದಚಾರಿಗಳು ಛತ್ರಿ ಆಶ್ರಯದಲ್ಲಿ ಎಳೆನೀರು, ಕಲ್ಲಂಗಡಿ ಹಣ್ಣು ಮತ್ತಿತರೆ ತಂಪು ಪಾನೀಯಗಳನ್ನು ಸೇವಿಸಿ ದಣಿವಾರಿಸಿಕೊಳ್ಳುತ್ತಿದ್ದಾರೆ. ಎಳೆ ನೀರು ಮತ್ತು ತಂಪು ಪಾನೀಯ ಮಾರುವವರಿಗೆ ಈಗ ವ್ಯಾಪಾರ ಬಲು ಜೋರು.
ಎಳನೀರು ವ್ಯಾಪಾರಿ ಶಿವಸ್ವಾಮಿ ಪ್ರತಿಕ್ರಿಯಿಸಿ ಈಗ ಬಿಸಿಲ ತಾಪ ಹೆಚ್ಚಿದ್ದು ಜನತೆ ದಾಹ ಇಂಗಿಸಿಕೊಳ್ಳಲು ಎಳೆನೀರು ಮೊರೆ ಹೋಗುತ್ತಿದ್ದಾರೆ. ಎಳನೀರು ಒಂದಕ್ಕೆ 25 ರಿಂದ 30 ರೂವರೆಗೆ ಮಾರಾಟವಾಗುತ್ತಿದೆ. ಎಳನೀರು ಸೇವಿಸುವುದರಿಂದ ಆರೋಗ್ಯ ಕೂಡ ಚೆನ್ನಾಗಿರುತ್ತೆ. ಇದರಿಂದ ರೈತರನ್ನೂ ಪೆÇ್ರೀತ್ಸಾಹಿಸಿದಂತಾಗುತ್ತದೆ ಎಂದರು.