ಸಾಂಸ್ಕøತಿಕ ಜೀವನಕ್ಕೆ ಸಂಗೀತವೇ ಶಕ್ತಿ: ಜೋಶಿ

ಕಲಬುರಗಿ:ನ.27: ಒತ್ತಡದ ಬದುಕಿನಲ್ಲಿ ನಮ್ಮ ಸಾಂಸ್ಕøತಿಕ ಜೀವನ ಗಟ್ಟಿಗೊಳಿಸಬೇಕಾದರೆ ಸಂಗೀತವೇ ಶಕ್ತಿಯಾಗಿದೆ ಎಂದು ರಂಗಾಯಣದ ನಿರ್ದೇಶಕ ಪ್ರಭಾಕರ್ ಜೋಶಿ ಅವರು ಹೇಳಿದರು.
ನಗರದ ರೇಷ್ಮಿ ಶಿಕ್ಷಣ ಸಂಸ್ಥೆಯಲ್ಲಿ ಬೋಧಿವೃಕ್ಷ ಸಾಂಸ್ಕøತಿಕ ಸೇವಾ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಮತ್ತು ಸಂಗೀತಗಳೆರಡು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಾಡು ನುಡಿಗಳ ರಕ್ಷಣೆಗೆ ಮುಂದಾಗಬೇಕು. ಕನ್ನಡ ನಾಡಿನ ಭಕ್ತಿಗೀತೆಗಳು ನಿತ್ಯ ನೂತನವಾಗಬೇಕು ಎಂದರು.
ಮುಖ್ಯ ಅತಿಥಿಗಳಾದ ಸಾಹಿತಿ ಜಗನ್ನಾಥ್ ತರನಳ್ಳಿ ಅವರು ಮಾತನಾಡಿ, ಗಾಯಕರು ಸಾಮಾಜಿಕ ಹಾಗೂ ಸಮಯದ ಪ್ರಜ್ಞೆ ಹೊಂದಬೇಕು. ಸಂಗೀತ ಕಲೆಯಿಂದ ಹಸನಾದ ಜೀವನ ನಡೆಸಬಹುದು. ಮತ್ತು ಕಲೆಗೆ ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು ಸಲಹೆ ನೀಡಿದರು.
ರೇಷ್ಮಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶರತ್ ಎನ್. ರೇಷ್ಮಿ ಅವರು ಅಧ್ಯಕ್ಷತೆ ವಹಿಸಿದ್ದರು. ಬೋಧಿವೃಕ್ಷ ಸಾಂಸ್ಕøತಿಕ ಸೇವಾ ಸಂಸ್ಥೆಯ ಅಧ್ಯಕ್ಷ ಸುಭಾಷ್ ಚಕ್ರವರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುಲೇಪೇಟ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ. ಬಂಡೇಪ್ಪ ಧನ್ನಿ, ಮುಖಂಡ ಪರಮೇಶ್ವರ್ ಶೆಟಗಾರ್, ಮಾಜಿ ಸದಸ್ಯ ಶಿವಕುಮಾರ್ ಮುಗಳನಾಗಾಂವ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ದೊಡ್ಡಮನಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ನಂತರ ವಿವಿಧ ಕಲಾವಿದರಾದ ಸಿದ್ದಾರ್ಥ ಚಿಮ್ಮಾ ಇದ್ಲಾಯಿ, ಚೇತನ್ ಹಿರೇಮಠ್, ಶ್ರೀಧರ್ ಹೊಸಮನಿ, ಮಲ್ಲಿಕಾರ್ಜುನ್ ವಸ್ತ್ರದಮಠ್, ಅಮೀರ್ ಸುಬೇದಾರ್, ಚಂದ್ರಕಾಂತ್ ಬಿಕೆ ಅವರಿಂದ ಕನ್ನಡ ಹಾಡುಗಳ ಗಾಯನ ಜರುಗಿತು.