ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿ ವ್ಯಕ್ತಿತ್ವ ವಿಕಸನಕ್ಕೆ ನಾಂದಿ

ವಿಜಯಪುರ, ಜು.26-ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುರಿಂದ ವ್ಯಕ್ತಿತ್ವ ವಿಕಸನವಾಗುವುದು, ಸ್ಪರ್ಧೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಮೊದಲು ಭಾಗವಹಿಸುವುದು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಾದವರು ಸ್ಪರ್ಧಾ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ವಿಜಯಪುರ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದದೈಹಿಕ ನಿರ್ದೇಶಕ ಸಂಗಮೇಶ ಗೊರವ ಹೇಳಿದರು.
ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಹಾಗೂ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಜಯಪುರ ಮತ್ತು ಇಂಡಿ ತಾಲೂಕುಗಳ ಕ್ಲಸ್ಟರ್ ಮಟ್ಟದ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆ ಹೊರತಾಗಿ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜೀವನವನ್ನು ಉನ್ನತ ಮಟ್ಟಕ್ಕೆ ನಾಂದಿಯಾಗುತ್ತದೆ.ವಿದ್ಯಾರ್ಥಿಗಳು ಇಂತಹ ಅವಕಾಶಗಳಲ್ಲಿ ಪಾಲ್ಗೊಂಡು ವ್ಯಕ್ತಿತ್ವ ವಿಕಸನ ಹಾಗೂ ಸಂವಹನ ಕೌಶಲ್ಯ ಇಮ್ಮಡಿಗೊಳ್ಳಲು ಇಂತಹ ಸಾಂಸ್ಕøತಿಕ ಚಟುವಟಿಕೆಗಳು ಸಾಧ್ಯವಾಗುತ್ತದೆಎಂದು ಹೇಳಿದರು.
ಈ ವೇಳೆಯಲ್ಲಿ ಪ್ರಾಚಾರ್ಯರಾz Àಡಾ.ಯು.ಎಸ್ ಪೂಜೇರಿ ಅವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಾಠ ಪ್ರವಚನಕ್ಕೆ ಸೀಮಿತವಾಗದೆ ಆಯೋಜಿಸಿದ ಹಲವು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸೋಲು ಗೆಲವು ನೋಡದೆ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಪ್ರಮುಖ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂವಹನ ಕೌಶಲ್ಯ, ವ್ಯಕ್ತಿತ್ವ ವಿಕಸನ ಹೀಗೆ ವಿದ್ಯಾರ್ಥಿಗಳಿಗೆ ಹಲವು ಪ್ರಯೋಜನಗಳಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾದ ಡಾ.ಯು. ಎಸ್ ಪೂಜೇರಿ ಐಕ್ಯೂಎಸಿ ಸಂಯೋಜಕರು ಡಾ.ಪಿ.ಎಸ್.ಪಾಟೀಲ, ಸಾಂಸ್ಕøತಿಕ ವಿಭಾಗದ ಕಾರ್ಯಾಧ್ಯಕ್ಷರಾದ ಪ್ರೊ.ಶ್ರೀದೇವಿ ಬೈರೋಡಗಿ, ಡಾ.ಉಷಾದೇವಿ ಹಿರೇಮಠ, ಡಾ.ಶ್ರೀನಿವಾಸ ದೊಟ್ಟಮನಿ, ಪ್ರೊ.ಶ್ವೇತಾ ಸವನೂರ, ಪೆÇ್ರ.ಆರ್.ಡಿ.ಜೋಶಿ, ಪ್ರೊ.ಅಶ್ವಿನಿ ಹಿರೇಮಠ, ಪ್ರೊ.ರಾಜೇಶ್ವರಿ ಪುರಾಣಿಕ, ಪ್ರೊ.ಐ.ಎಸ್.ಹೂಗಾರ, ಪ್ರೊ.ಗಿರೀಶರೆಡ್ಡಿ, ಪ್ರೊ.ಮಲಿಕ್ ಜಮಾದಾರ, ಪ್ರೊ,ಚೇತನ ಸಂಕಗೊಂಡ, ಪ್ರೊ.ಎಸ್ ವೈ ಅಂಗಡಿ, ಪ್ರೊ.ಜಯಶ್ರಿ ಬಿರಾದಾರ, ಪ್ರೊ.ಸುಜ್ಞಾನಿ ಬಿರಾದಾರ, ಪ್ರೊ.ಎಸ್.ಹೆಚ್‍ಗೂಗಾರ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.