ಸಾಂಸ್ಕøತಿಕ ಕಾರ್ಯಕ್ರಮ

ಹುಬ್ಬಳ್ಳಿ,ಅ 29- ದಸರಾ ಹಬ್ಬದ ಅಂಗವಾಗಿ ಎಸ್.ಎಸ್.ಕೆ.ಜಾನಪದ ಕಲಾ ಹಾಗೂ ಸಾಂಸ್ಕøತಿಕ ಸಂಘದ ವತಿಯಿಂದ ನಗರದ ಕಮರಿಪೇಟನ ಕರೆಮ್ಮಾ ಹಾಲ್ ನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗುರುಮಾತಾ ವಿಜಯಾ ಬದ್ದಿ ಇವರಿಂದ ಆಧ್ಯಾತ್ಮಿಕ ಪ್ರವಚನ ಹಾಗೂ ಆಕಾಶವಾಣಿ ಕಲಾವಿದರಾದ ಶ್ರೀಕಾಂತ ಬಾಕಳೆ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ, ಹುಡಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ವಿಠ್ಠಲ ಲದವಾ, ಕಾಶಿ ಖೋಡೆ, ಶಶಿಕಲಾ ಮೆಹರವಾಡೆ, ಪುಷ್ಪಾ ಪವಾರ, ಅನ್ನಪೂರ್ಣಾ ಭಾಂಡಗೆ ಮತ್ತಿತರರು ಉಪಸ್ಥಿತರಿದ್ದರು.