ಸಾಂಸ್ಕೃತಿಕ ಸ್ಪರ್ಧೆ: ಜಿಲ್ಲೆಯಲ್ಲಿ ಗೆದ್ದು ವಿಭಾಗ ಮಟ್ಟಕ್ಕೆ ಆಯ್ಕೆ.

ಸಿಂಧನೂರು.ಡಿ.೩- ನಗರದ ಎಲ್.ಬಿ.ಕೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧಿಗಳಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಗೆದ್ದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಕಾಲೇಜಿನ ಬೋದಕ ಮತ್ತು ಬೋದಕೇತರ ವರ್ಗ ವಿಜೇತರನ್ನು ಅಭಿನಂದಿಸಿದೆ.
ರಾಯಚೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್.ಬಿ.ಕೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿಜಯ ಶಾಲಿಗಳಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ಯಮನೂರು( ಪ್ರಥಮ ಪಿಯುಸಿ) ,ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ಈರಮ್ಮ (ದ್ವಿತೀಯ ಪಿಯುಸಿ) ,ಪ್ರಬಂಧ ಸ್ಪರ್ಧೆಯಲ್ಲಿ ಯಾಸ್ಮಿನ್ ಮೂರನೇ ಸ್ಥಾನ( ದ್ವಿತೀಯ ಪಿಯುಸಿ)ಭಕ್ತಿ ಗೀತೆಯಲ್ಲಿ ನಿಶಾ ಮೂರನೇ ಸ್ಥಾನ (ಪ್ರಥಮ ಪಿಯುಸಿ ವಿದ್ಯಾರ್ಥಿನಿ).
ಈ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸಂಸ್ಥೆಯ ಅಧ್ಯಕ್ಷರಾದ ಪರಶುರಾಮ ಮಲ್ಲಾಪುರ್, ಕಾರ್ಯದರ್ಶಿಗಳಾದ ಡಾ.ಅರುಣ್ ಕುಮಾರ್ ಬೇರ್ಗಿ, ಉಪಾಧ್ಯಕ್ಷರಾದ ಶಂಕರ್ ಪತ್ತಾರ, ಖಜಾಂಚಿಗಳಾದ ಜಯಪ್ಪ ಹಾಗೂ ಪ್ರಾಂಶುಪಾಲರಾದ ನಾಗರಾಜ್ ಎಂಪಿ ಮತ್ತು ಉಪನ್ಯಾಸಕ ವರ್ಗ ವಿಜೇತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.