ಸಾಂಸ್ಕೃತಿಕ ಸ್ಪರ್ಧೆಯಲ್ಲಿ
 ವೀ.ವಿ‌. ಸಂಘದ ಸ್ವತಂತ್ರ ಪ.ಪೂ ಕಾಲೇಜಿಗೆ 7 ಬಹುಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.16: ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ಏಳು ವಿದ್ಯಾರ್ಥಿಗಳು  ನಗರದ ಬಿ.ಪಿ ಎಸ್ ಕಾಲೇಜು ಹಾಗು ಪದವಿಪೂರ್ವ ಶಿಕ್ಷಣ ಮಂಡಳಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ  ಸ್ಪರ್ಧೆಯಲ್ಲಿ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಅದ್ಯಕ್ಷರು ಸದಸ್ಯರು ಪ್ರಾಂಶುಪಾಲರು ಹಾಗು ಸಿಬ್ದಂದಿಯವರು  ಶ್ಲಾಘಿಸಿದ್ದಾರೆ.
ಆಯ್ಕೆಯಾದ  ವಿದ್ಯಾರ್ಥಿಗಳು.  ರವಿತೇಜ – ಚರ್ಚಾಸ್ಪರ್ದೆ ಪ್ರಥಮಸ್ಥಾನ,  ಶೇಕ್ ರೋಷಿನಿ – ಚರ್ಚಾ ಸ್ಪರ್ಧೆ – ದ್ವಿತೀಯ ಸ್ಥಾನ, ಹರ್ಷಿತಾ ಇ ಬಿ – ಪ್ರಬಂಧ ಸ್ಪರ್ಧೆ – ಪ್ರಥಮಸ್ಥಾನ, ಎ.ಸ್ನೇಹಾ – ಪ್ರಬಂಧ ಸ್ಪರ್ಧೆ – ಪ್ರಥಮಸ್ಥಾನ,  ಆಕಾಶಗೌಡ .ಏಕಪಾತ್ರಾಭಿನಯ – ದ್ವಿತೀಯ ಸ್ಥಾನ, ಅಮೃತ ಲಕ್ಷ್ಮೀ- ಭಕ್ತಿ ಗೀತೆ ತೃತೀಯ ಸ್ಥಾನ, ಜಾಯ್ಸಿಥೆರೇಸಾ – ಚರ್ಚಾಸ್ಪರ್ದೆ ತೃತೀಯ ಸ್ಥಾನ ಪಡೆದಿದ್ದಾರೆ.