
ಸಂಜೆವಾಣಿ ವಾರ್ತೆಕೊಪ್ಪಳ, ಅ.21: ಕನ್ನಡ ಸಾಹಿತ್ಯ ಸಂಸ್ಕೃತಿ ಮತ್ತು ಅಭಿವೃದ್ಧಿ ಟ್ರಸ್ಟ್ (ರಿ) ಹಾಗೂ ಮೈಸೂರಿನ ಚಿತ್ಕಲಾ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ಮೈಸೂರಿನ ಬಲ್ಲಾಳ ವೃತ್ತದ ಬಳಿ ಇರುವ ಕೊತ್ತೆತ್ತೂರ ಸೀತಾರಾಂ ರಾವ್ ಭವನದಲ್ಲಿ ಸೆಪ್ಟೆಂಬರ್ ೧೦ ರಂದು ನಡೆಯಲೀರುವ ಅಖಿಲ ಕನಾ೯ಟಕ ೫ನೆಯ ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಸಮ್ಮೇಳನ ಸವಾ೯ಧ್ಯಕ್ಷರಾಗಿ ಹಿರಿಯ ಸಾಹಿತಿ ಹಾಗೂ ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿ ಕೇ.ಮಹಾದೇವ ನಾಯಕ ಆಯ್ಕೆ ಯಾಗಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕೂಡ್ಲಾಪೂರ ಗ್ರಾಮದ ಶ್ರೀಯುತರು ನಂಜನಗೂಡಿನಲ್ಲಿ ಪದವಿ ತೇಗ೯ಡೇ ಯಾಗಿದ್ದಾರೆ, ಪೊಲೀಸ್ ಇಲಾಖೆಯಲ್ಲಿ ಹಾಸನ್ ಹಾಗೂ ಮೈಸೂರು ಜಿಲ್ಲೆಯ ವಿವಿಧ ಠಾಣೆ ಯಲ್ಲಿ ಕತ೯ವ್ಯ ನೀವ೯ಹಿಸಿ ನಿವೃತ್ತಿ ಯಾಗಿದ್ದಾರೆ ಕೃತಿಗಳು: ನಿಜವಾದ ನಗು , ಮೌನ ಬಾಣ, ಕುಳ್ಳಮ್ಮ ದೇವಿ ಭಕ್ತಿಗೀತೆಗಳ ಧ್ವನಿ ಸುರಳಿ, ಪೊಲೀಸರ ಎದೆ ಯಂತರಾಳ ದಿಂದ,. ಸಂಪಾದಕೀಯ( ಕವನ ಸಂಕಲನ ) ಸಾಹಿತಿಗಳಂತ ರಾಳ ದಿಂದ ಪೊಲೀಸರು (ಕವನ್ ಸಂಕಲನ) ಪ್ರಕಟಿಸಿದ್ದಾರೆ. ಅಚ್ಚಿನಲ್ಲಿ ( ಬರವಣಿಗೆ ): ಅವಳೆಂದರೆ ( ಗಜಲ್) ಮೂಗನ ಮೌನ ( ಕವನ ಸಂಕಲನ ). ಹಾರುವ ಚುಟ , ( ವಿವಿಧ ಪ್ರಕಾರದ ಸಾಹಿತ್ಯ ಸಂಕಲನ) ಪ್ರಶಸ್ತಿ ಗಳು: ಇವರ ಸಾಹಿತ್ಯ ಸಾಧನೆಗೆ. ವಿವಿಧ ಸಂಘ ಸಂಸ್ಥೆಗಳು ಕೊಡ ಮಾಡಿದ ಸಾಧನ ಶ್ರೀ ಪ್ರಶಸ್ತಿ , ಕನಾ೯ಟಕ ಹಾಯ್ಕು ರತ್ನ ಪ್ರಶಸ್ತಿ,. ಸಾಹಿತ್ಯ ಸಿಂಧು ಪ್ರಶಸ್ತಿ ನೀಡಿ ಗೌರವಿಸಿದೆ. ಧಮ೯ ಪತ್ನಿ ಜ್ಯೋತಿ ಎಸ್.ಹಾಗೂ ಚಿರಂಜೀವಿ ಕೆ.ಎಂ.ಪ್ರಮೋದ್ ಜೊತೆಗೂಡಿ ಮೈಸೂರಿನ ದಟ್ಟಿಗಳ್ಳಿ ಪ್ರದೇಶದಲ್ಲಿ ವಿಶ್ರಾಂತಿ ಜೀವನ ಸಾಗಿಸುತ್ತಾ ಪ್ರಸ್ತುತ ಯುಟ್ಯೂಬ್ ಚಾನೆಲ್ (ಪ್ರಜ್ಯೋಮ )ಸ್ಥಾಪಿಸಿ ಪ್ರಶ್ನಾವಳಿ ಕಾಯ೯ಕ್ರಮ, ಕವನ ವಾಚನ ಹಾಗೂ ಪೊಲೀಸ್ ಮಾಹಿತಿ ಸೇರಿ ಸಾಮಾಜಿಕ ಜಾಗೃತಿ ಕಾಯ೯ಕ್ರಮ ನಡೆಸಿಕೊಡುತ್ತಿದ್ದಾರೆ. ಜೊತೆಗೆ ಫೈನಾನ್ಸ್ ಲೈಫ್ ಅಡ್ವೈಸರ್ ಸೇವೆ ಸಲ್ಲಿಸುತ್ತಿದ್ದಾರೆ. ಇವರನ್ನೂ ಸಮ್ಮೇಳನದ ಸವಾ೯ಧ್ಯಕ್ಷರಾಗಿ ಆಯ್ಕೆಗೆ ಅಭಿನಂದಿಸಿ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ರುದ್ರಪ್ಪ ಭಂಡಾರಿ ,ಧಾರವಾಡದ ಹಿರಿಯ ಸಾಹಿತಿ, ಪತ್ರ ಕತ೯ ಎಚ್.ಆರ್. ವಸ್ತ್ರದ್ ಜೊತೆಗೂಡಿ ಮೈಸೂರಿನ ಕೆ.ಮಹದೇವ ಅವರ ನಿವಾಸದಲ್ಲಿ ಸತ್ಕರಿಸಿ ಆಹ್ವಾನ ನೀಡಿದ್ದಾರೆ.