ಸಾಂಸ್ಕೃತಿಕ ಸಮುಚ್ಚಯಕ್ಕೆ ಬಂತು ಬೀದಿ ದೀಪ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.20: ನಗರದ ಸಾಂಸ್ಕೃತಿಕ ಸಮುಚ್ಚಯದ ಬೀದಿಗೆ ಮತ್ತೆ ಬಂತು ಬೆಳಕು.
ಕಳೆದ ಹಲವು ತಿಂಗಳಿಂದ ಸಾಂಸ್ಕೃತಿಕ ಸಮುಚ್ಚಯದ ಈ ಬೀದಿಯಲ್ಲಿನ ದೀಪಗಳು ಕಣ್ಣು ಮುಚ್ಚಿದ್ದವು. ಈ ಬಗ್ಗೆ ಇಲ್ಲಿನ ವಾಕಿಂಗ್ ಗ್ರೂಪ್, ಸಾಮಾಜಿಕ ಕಾರ್ಯಕರ್ತ ಆರ್. ವೆಂಕಟರೆಡ್ಡಿ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ, ದೂರಿನಿಂದಾಗಿ ಈಗ ಮತ್ತೆ ಈ ಬೀದಿಗೆ ಬೆಳಕಿನ ವ್ಯವಸ್ಥೆ ಆಗಿದೆ.
ಈ ಬೆಳಕಿನ ವ್ಯವಸ್ಥೆ ಇಲ್ಲದೆ ಸಂಜೆಯಾದ ಮೇಲೆ ಇಲ್ಲಿ ವಾಕಿಂಗ್ ಮಾಡುತ್ತಿರುವವರು, ಗ್ರಂಥಾಲಯಕ್ಕೆ ಬರುವವರು ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬಗ್ಗೆ  ಶಪಿಸುತ್ತಿದ್ದರು.  

One attachment • Scanned by Gmail