ಸಾಂಸ್ಕೃತಿಕ ಸಂಭ್ರಮ ಉದ್ಘಾಟನೆ

ಕೋಲಾರ,ನ.೧೩: ದಿ ವಲ್ರ್ಡ್ ಕಲ್ಚರಲ್ ಅಂಡ್ ಸೋಷಿಯಲ್ ಡೆವೆಲಪ್‌ಮೆಂಡ್ ಆರ್ಗನೈಜೇಷನ್ ಮಲಿಯಪ್ಪನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದೊಂದಿಗೆ, ನರಸಾಪುರದಲ್ಲಿ ಹಮ್ಮಿಕೊಂಡಿದ್ದ ೨೦೨೦-೨೦೨೧ನೇ ಸಾಲಿನ ವಿಶೇಷ ಘಟಕ ಯೋಜನೆಯ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರತ್ನಮ್ಮ ಹಾಗೂ ಉಪನ್ಯಾಸಕಿ ಪಿ.ರಮ್ಯ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರಮ್ಯ ಅವರು, ಪಠ್ಯದ ಜೊತೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು ಹೆಚ್ಚುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ನಾಗರತ್ನಮ್ಮ ಸಿ.ಕೆ, ಆಧುನಿಕ ಹೆಸರಲ್ಲಿ ದಾಳಿ ಮಾಡುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಳಿಯಲ್ಲಿ ದೇಶೀಯ ಕಲೆಗಳು ಹಾಗೂ ಸಂಸ್ಕೃತಿ ನಶಿಸಿ ಹೋಗುತ್ತಿವೆ. ಅವುಗಳ ಪುನಶ್ಚೇತನಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯಾವಶ್ಯಕ ಎಂದರು.
ಕ್ರಾರ್ಯಕ್ರಮದಲ್ಲಿ ರಂಗಭೂಮಿ ನಟ, ನಿರ್ದೇಶಕ ಹಾಗೂ ವಿಮರ್ಶಕರಾದ ಡಾ. ಮುನಿನಾರಾಯಣ, ಎಂ.ಸಿ ವಿಶ್ವನಾಥ, ಉಪನ್ಯಾಸಕ ಹೆಚ್. ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಜೀವನವನ್ನು ಆಧರಿಸಿ ಸ್ಪೂರ್ತಿವಾಣಿ ಎಂಬ ಐತಿಹಾಸಿಕ ನಾಟಕ, ಜಾನಪದ ಗಾಯನ, ಏಕಪಾತ್ರಾಭಿಯಗಳು ಮತ್ತು ವೀರಪಾಂಡ್ಯ ಕಟ್ಟಬೊಮ್ಮನ್ ಎಂಬ ನಾಟಕಗಳು ಪ್ರದರ್ಶನಗೊಂಡವು.