ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 65ನೇ ಕನ್ನಡ ರಾಜ್ಯೋತ್ಸವ ಸಂಭ್ರಮ

ಮೈಸೂರು. ನ.01- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 65ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಅವರಣದಲ್ಲಿ ಕಾರ್ಯಕ್ರಮ ನಡೆಯಿತು.
ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಅವರಣದಲ್ಲಿ ಕಾರ್ಯಕ್ರಮ ಪೂರ್ಣ ಕುಂಭದ ಮೂಲಕ ಸಚಿವರಿಗೆ ಸ್ವಾಗತ ಕೋರಲಾಯಿತು.ಅರಮನೆ ಅವರಣದಲ್ಲಿರುವ ಭುವನೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು. ಬಳಿಕ ಭುವನೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕೋಟೆ ಆಂಜನೇಯ ಮುಂಭಾಗ ರಾಷ್ಟ್ರ ಹಾಗೂ ರಾಜ್ಯಧ್ವಜ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮಾತನಾಡಿ ಕೊರೊನಾ ವೈರಸ್ ವಿರುದ್ಧ ಭಾರತವೂ ಸೇರಿದಂತೆ ಇಡೀ ಜಗತ್ತು ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಕೋವಿಡ್ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಪೌರಕಾರ್ಮಿಕರು, ಅಧಿಕಾರಿಗಳು, ಪೊಲೀಸರು ಸೇರಿದಂತೆ ಹೋರಾಡಿದ ಕೊರೊನಾ ಯೋಧರು ಹಾಗೂ ಜಿಲ್ಲೆಯ ಜನತೆಗೆ 65 ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು.


ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊರೆತಿರುವ ಪ್ರಾಮುಖ್ಯತೆಯಂತೆಯೇ, ಕರ್ನಾಟಕ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದೊಂದಿಗೆ, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ. ವಿವಿಧ ಸುಮಾರು ಆಡಳಿತ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಬ್ರಿಟಿಷರ ಆಡಳಿತದ ನಂತರ ಮತ್ತೆ ಒಂದಾಗಿದ್ದು, ನಮ್ಮೆಲ್ಲರ ಹೆಮ್ಮೆಯ ಸಂಗತಿ.
ಮುಖ್ಯವಾಗಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಪ್ರಕರಣ ಬೇಗ ಪತ್ತೆಯಾದರೆ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿದೆ. ಸೋಂಕಿತರು ಪರಿಸ್ಥಿತಿ ತೀವ್ರಗೊಂಡ ನಂತರ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳಲ್ಲಿ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡ ಸರ್ಕಾರ ಪರೀಕ್ಷೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರಿಂದ ಕೋವಿಡ್ ಸೋಂಕು ಪತ್ತೆಯಾದ ವ್ಯಕ್ತಿಗಳಿಗೆ ಚಿಕತ್ಸೆ ನೀಡಲು ಸಾಧ್ಯವಾಗುತ್ತಿದೆಯಲ್ಲದೆ, ಇವರಿಂದ ಬೇರೆಯವರಿಗೆ ಹರಡುವುದು ಸಹ ತಪ್ಪುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿದೆ. ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸ್ವತಃ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿ ಅವರೇ ಮೆಚ್ಚುಗೆ ವ್ಯಕ್ತಿಪಡಿಸಿ, ಇತರ ರಾಜ್ಯಗಳು ಸಹ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ.
ಮೈಸೂರು ಜಿಲ್ಲೆ ಕೋವಿಡ್ ನಿಯಂತ್ರಣದಲ್ಲಿ ರಾಜ್ಯಕ್ಕೆ ಮಾದರಿಯಾಗಿತ್ತು. ಮಧ್ಯೆದಲ್ಲಿ ಬೇರೆ ಬೇರೆ ಕಾರಣಕ್ಕೆ ಸೋಂಕಿನ ಪ್ರಮಾಣ ಸ್ವಲ್ಪ ಜಾಸ್ತಿಯಾಗಿತ್ತು. ಮತ್ತೆ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಹತೋಟಿಗೆ ಬಂದಿದೆ.
ಕೋವಿಡ್ ವೈರಾಣುವಿನ ವಿರುದ್ಧ ಹೋರಾಡಲು ಪ್ರತಿಯೊಬ್ಬ ನಾಗರಿಕರು ಈ ಸಂದರ್ಭದಲ್ಲಿ ಪಣ ತೊಡಬೇಕು. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪದೇ ಪದೇ ಕೈ ತೊಳೆಯುವ, ಸ್ವಚ್ಛತೆ ಕಾಪಾಡುವ ರೂಢಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರತಿ ವರ್ಷದಂತೆ ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತವಾದ ಕನ್ನಡ ರಾಜ್ಯೋತ್ಸವ. ಪ್ರತಿ ವರ್ಷದಂತೆ ಸಾಂಪ್ರಾದಾಯಿಕ ಪೂಜೆಗಷ್ಟೇ ಸೀಮಿತವಾದ ಕನ್ನಡ ರಾಜ್ಯೋತ್ಸವ. ಕೋವಿಡ್ ಹಿನ್ನಲೆಯಲ್ಲಿ ಸಾಕಷ್ಟು ಕಲಾತಂಡಗಳಿಗೆ ಬ್ರೇಕ್, ಪೆÇಲೀಸ್ ಹಾಗೂ ಶಾಲಾ ವಿದ್ಯಾರ್ಥಿಗಳ ಪಥ ಸಂಚಲನವೂ ಇಲ್ಲ.
ಅಶ್ವಾರೋಹಿ ದಳದಿಂದ ಗೌರವ ಸಮರ್ಪಿಸಿ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.ಸಚಿವರಿಗೆ ಸಾಥ್ ನೀಡಿದ ಶಾಸಕ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಇತರರು ಇದ್ದರು.
ಮೈಸೂರು ಜಿಲ್ಲೆಯ 11 ಸಾಧಕರಿಗೆ ರಾಜೋತ್ಸವ ಸನ್ಮಾನ


ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 11ಮಂದಿ ಸಾಧಕರಿಗೆ ಜಿಲ್ಲಾಡಳಿತದಿಂದ ಗೌರವ. ಮಾದ್ಯಮ ಕ್ಷೇತ್ರದಿಂ ಪಬ್ಲಿಕ್ ಟಿವಿ ವರದಿಗಾರ ಕೆ ಪಿ ನಾಗರಾಜ್, ಸಾಹಿತ್ಯ ಕ್ಷೇತ್ರದಿಂದ ಡಾ. ಗುಬ್ಬಿಗೂಡು ರಮೇಶ್, ಸಾಮಾಜ ಸೇವೆ ಕ್ಷೇತ್ರದಿಂದ ಶಂಕರ್ ನಾರಾಯಣ್ ಶಾಸ್ತ್ರಿ, ಜಾನಪದ ಕ್ಷೇತ್ರದಿಂದ ಭಾಗ್ಯಮ್ಮ, ಕಲೆ ಮತ್ತು ಸಂಗೀತ ಕ್ಷೇತ್ರದಿಂದ ರೇವಣ್ಣ.ಪರಿಸರ ಕ್ಷೇತ್ರದಿಂದ ನಾಗಭೂಷಣ್ ರಾವ್, ಕನ್ನಡ ಪರ ಹೋರಾಟಗಾರರಾದ ಸಿದ್ದರಾಜು,ಡಿ ಆರ್ ಕರಿಗೌಡ, ಡಿ ಎಂ ಬಸವಣ್ಣ, ಎಂಬಿ ಮಂಚೇಗೌಡ ಸೇರಿ 11 ಜನರಿಗೆ ಸನ್ಮಾನ ಮಾಡಲಾಯಿತು.