ಸಾಂಸ್ಕೃತಿಕ ಚಟುವಟಿಕೆಗಳಿಂದ ಶಿಕ್ಷಣಕ್ಕೆ ಪರಿಪೂರ್ಣತೆ

ಸಂಜೆವಾಣಿ ವಾರ್ತೆ

ದಾವಣಗೆರೆ ಏ.೧೯; ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ವಿದ್ಯಾಭ್ಯಾಸದ ಜತೆಗಿದ್ದಾಗ ಶಿಕ್ಷಣಕ್ಕೆ ಪರಿಪೂರ್ಣತೆ ಬರುತ್ತದೆ. ಬಾಲ್ಯದಲ್ಲೇ ಇದನ್ನೆಲ್ಲಾ ರೂಢಿಸಿಕೊಂಡಾಗ ಮುಂದಿನ ಸಾಧನೆಗೆ ಭದ್ರವಾದ ಬುನಾದಿ ಎಂದು ಹಿರಿಯ ಸಾಹಿತಿ ಸುಬ್ರಹ್ಮಣ್ಯ ಭಟ್ ತಮ್ಮ ಅನಿಸಿಕೆ ಹಂಚಿಕೊAಡರು.ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆ ಮತ್ತು ಗೀತಜ್ಞಾನ ಯಜ್ಞ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಕೇರಳ ರಾಜ್ಯ, ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಶಾರದಾ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ “ಗೀತ ಕುಂಚ” ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಶ್ರೀಮತಿ ಶಶಿಕಲಾ ಮಯ್ಯರವರು ಮಾತನಾಡಿ, ಮಕ್ಕಳ ಜ್ಞಾನಾರ್ಜನೆಗೆ ಇಂತಹ ಶಿಬಿರಗಳು ಪೂರಕ ಎಂದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀಮತಿ ಗೀತಾ ಹೊಳ್ಳ ಮಾತನಾಡಿ, ಇಂತಹ ಬೇಸಿಗೆ ರಜೆಯ ಸಮಯದಲ್ಲಿ ಸಮಯ ವ್ಯರ್ಥ ಮಾಡದೇ ಈ ಶಿಬಿರದಿಂದ ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸ್ಪೂರ್ತಿ ಎಂದರು.ಕುಮಾರ ವೇದಾಂತ್ ಕಾರಂತ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಪ್ರಾಸ್ತಾವನೆಯೊಂದಿಗೆ ಸ್ವಾಗತಿಸಿದರು, ಶ್ರೀಮತಿ ತಾರಾಲತಾ, ಶ್ರೀಮತಿ ಪ್ರಭಾವತಿಯವರು ಒಳಾಂಗಣ ಆಟ ಆಡಿಸಿದರು. ಶಿಬಿರದ ಉಸ್ತುವಾರಿಯನ್ನು ರಾಮಕಾರಂತರು ವಹಿಸಿಕೊಂಡು ನಿರ್ವಹಿಸಿದರು. ಏಪ್ರಿಲ್ 27 ರವರೆಗೆ ಶಿಬಿರ ಮುಂದುವರೆಲಿದ್ದು ಶ್ರೀಮತಿ ಜಯಲಕ್ಷಿö್ಮÃ ರಾಮಚಂದ್ರ ಹೊಳ್ಳರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.